ಪ್ರತಿದಿನ ಮುಂಜಾನೆ ನೆನೆಸಿದ ಹಸಿಕಡಲೆ ಬೀಜ ತಿನ್ನುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿದೆ ಗೊತ್ತಾ..?

ಧಾನ್ಯಗಳನ್ನು ಅಡುಗೆ ಮಾಡಲು ಬಳಸುವ ಮೊದಲು ಅದನ್ನು ನೀರಲ್ಲಿ ನೆನೆಸಲು ಹಾಕುತ್ತೇವೆ. ಧಾನ್ಯಗಳನ್ನು ತೆಗೆದ ಬಳಿಕ ಇಂತಹ ನೀರನ್ನು ಚೆಲ್ಲುತ್ತೇವೆ. ಇದರಲ್ಲಿ ಕಡಲೆ ಕೂಡ ಒಂದಾಗಿದೆ. ಯಾವುದೇ ಖಾದ್ಯಕ್ಕೆ ನಾವು ಕಡಲೆ ಬಳಸುವ ಮೊದಲು ಅದನ್ನು ನೀರಿನಲ್ಲಿ ನೆನೆಯಲು ಹಾಕುತ್ತೇವೆ.

ಈ ವೇಳೆ ನೆನೆಸಿದ ನೀರನ್ನು “ಅಕ್ವಾಫಾಬ” ಎಂದು ಕರೆಯಲಾಗುತ್ತದೆ. ಇಂದಿನ ದಿನಗಳಲ್ಲಿ ಕಡಲೆ ನೆನಸಲು ಹಾಕಿದ ನೀರು ಹೆಚ್ಚು ಜನಪ್ರಿಯವಾಗುತ್ತಿದೆ. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ ಎಂದು ಹೇಳಲಾಗುತ್ತಿದೆ.

ಮಯೋನಿಸ್ ಮತ್ತು ಮೆರಿಂಗ್ಯೂ ಮಾಡಲು ಮೊಟ್ಟೆಯ ಬಿಳಿ ಭಾಗಕ್ಕೆ ಬದಲು ಇದನ್ನು ಬಳಸಲಾಗುತ್ತಿದೆ.ಕಡಲೆ ನನೆಸಿದ ನೀರಿನಲ್ಲಿ ಇರುವಂತಹ ಕೆಲವು ಲಾಭಗಳ ಬಗ್ಗೆ ತಿಳಿದರೆ ಆಗ ಖಂಡಿತವಾಗಿಯೂ ನಿಮಗೆ ಅಚ್ಚರಿಯಾಗಬಹುದು. ಅಂತಹ ಅದ್ಭುತವಾದ ಲಾಭಗಳ ಬಗ್ಗೆ ತಿಳಿಯಿರಿ. ಪ್ರತಿರಾತ್ರಿ ಕಡೆಲೇ ಬೀಜವನ್ನು ನೆನೆಸಿಡಬೇಕು ಮತ್ತು ಹಸಿಯಾಗಿರುವ ಈ ಕಡಲೆ ಬೀಜವನ್ನು ಬೆಳಗಿನ ಜಾವ ನೀವು ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಬೇಕು ನೀರಿನಲ್ಲಿ ನೆನೆಸಿದ ಕಡಲೆ ಬೀಜವನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ನಮ್ಮ ದೇಹಾರೋಗ್ಯ ತುಂಬಾ ಚೆನ್ನಾಗಿರುತ್ತದೆ.

ನೀವು ನಿಶಕ್ತಿಯಿಂದ ಬಳಲುತ್ತಿದ್ದರೆ ನೀರಿನಲ್ಲಿ ನೆನೆಸಿದ ಹಸಿ ಕಡಲೆ ಬೀಜವನ್ನು ಪ್ರತಿನಿತ್ಯ ತಿನ್ನುತ್ತಾ ಬಂದರೆ ನೀವು ನಿಶಕ್ತಿಯಿಂದ ಮುಕ್ತಿಹೊಂದಿ ಶಕ್ತಿವಂತರಾಗಿ ಇರಬಹುದು ನೆನೆಸಿದ ಕಡಲೆ ಬೀಜದಲ್ಲಿ ಸಾಕಷ್ಟು ಪ್ರೋಟೀನ್ ಅಂಶಗಳು ಇರುವುದರಿಂದ ಇದು ನಮ್ಮ ದೇಹಕ್ಕೆ ತುಂಬಾ ಸಹಕಾರಿಯಾಗಿದೆ ಈ ನೆನೆಸಿದ ಕಡಲೆ ಬೀಜ ತಿನ್ನುವುದರಿಂದ ನಮ್ಮ ದೇಹಕ್ಕೆ ಸುಮಾರು ಹತ್ತು ಪಟ್ಟು ಉಪಯೋಗ ಇದೇ.

ಮತ್ತು ಒಂದು ಚಮಚ ಸಕ್ಕರೆಯ ಜೊತೆಗೆ ನೆನೆಸಿದ ಕಡಲೆ ಬೀಜವನ್ನು ತಿನ್ನುವುದರಿಂದ ನಮ್ಮ ವೀರ್ಯಾಣುಗಳ ಪ್ರಮಾಣ ಹೆಚ್ಚುತ್ತದೆ ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿರುವವರು ನೆನೆಸಿದ ಕಡಲೆ ಬೀಜವನ್ನು ತಿನ್ನುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಹೌದು ಈ ಕಡಲೆ ಬೀಜದಲ್ಲಿ ಅಧಿಕ ಪ್ರಮಾಣದ ಫೈಬರ್ ಅಂಶಗಳು ಇದ್ದು ಇದು ನಾವು ತಿಂದ ಆಹಾರವನ್ನು ಸಂಪೂರ್ಣವಾಗಿ ಜೀರ್ಣಕ್ರಿಯೆ ಆಗುವಂತೆ ನೋಡಿಕೊಳ್ಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಮಾರಸ್ವಾಮಿಗೆ ಇರುವಷ್ಟು ಬುದ್ದಿ, ತಿಳಿವಳಿಕೆ ಯಾರಿಗೂ ಇಲ್ಲ: ಡಿ.ಕೆ. ಸುರೇಶ್ ಟಾಂಗ್

Mon Feb 21 , 2022
ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿರುವುದಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾರೆ.ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಕುಟುಂಬದವರು.ಅವರಿಗೆ ಇರುವಷ್ಟು ಬುದ್ಧಿ, ತಿಳಿವಳಿಕೆ ರಾಜ್ಯದಲ್ಲಿ ಯಾರಿಗೂ ಇಲ್ಲ. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಕುಮಾರಸ್ವಾಮಿಯವರು ಏನು ಹೇಳುತ್ತಾರೆಯೋ ಅದನ್ನು ಕೇಳಬೇಕು. ಪ್ರಶ್ನಿಸಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.ಫೆಬ್ರವರಿ 27ರಿಂದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಆರಂಭವಾಗಲಿದ್ದು, ಕೆಂಗಲ್ ನಲ್ಲಿ ನಡೆದ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ […]

Advertisement

Wordpress Social Share Plugin powered by Ultimatelysocial