ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಕ್ತಿದ್ದು, ಬಳ್ಳಾರಿಯಲ್ಲಿ ಇಂದು ಕೊರೊನಾ ಮಹಾಮಾರಿಗೆ ಮೂವರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಕ್ತಾ ಇತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೂವರೂ ಸಾವನ್ನಪ್ಪಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ಇದುವರೆಗೆ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 32 […]

ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಉಗ್ರರರ ದಾಳಿ ನಡೆದಿದದ್ಉ, ಓರ್ವ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ನಿನ್ನೆ ಬೆಳಗ್ಗೆ ಸಿಆರ್‌ಪಿಎಫ್‌ನ  ಬೆಟಾಲಿಯನ್, ಮಾಡೆಲ್ ಟೌನ್ ಚೌಕ್ ಸೊಪೋರ್ ಪ್ರದೇಶದಲ್ಲಿ ಗಸ್ತು ತಿರುಗುವ ವೇಳೆ, ಅಡಗಿ ಕುಳಿತಿದ್ದ ಉಗ್ರರು ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಗಳಾದ ಭೋಯಾ ರಾಜೇಶ್, ದೀಪ್ ಚಂದ್ ವರ್ಮಾ, ನಿಲೇಶ್ […]

ಕೊರೊನಾ ಸೇನಾನಿಗಳಾದ ಆಶಾಕಾರ್ಯಕರ್ತೆಯರು ಹಗಲಿರುಳು ಎನ್ನದೆ ಕೊರೊನಾ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದಾರೆ. ಆದರೆ ಸರ್ಕಾರ ಇವರತ್ತ ಗಮನ ಕೊಡದೆ ಸಹಾಯಧನ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಸರ್ಕಾರ 21 ಸಾವಿರ ಆಶಾಕಾರ್ಯಕರ್ತೆಯರಿಗೆ, ತಲಾ ಮೂರು ಸಾವಿರ ಪ್ರೋತ್ಸಾಹ ಧನ ನೀಡಿದೆ. ಇನ್ನು 15 ದಿನಗಳಲ್ಲಿ ಉಳಿದ ಕಾರ್ಯಕರ್ತೆಯರಿಗೆ ಹಣ ವಿತರಣೆ ಮಾಡುತ್ತೇವೆ ಎಂದು ಹೇಳಿದರು.  

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, ಮತ್ತೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ, ಬದಲಾಗಿ ಆರೋಗ್ಯ ವ್ಯವಸ್ಥೆಯನ್ನೇ ಮೇಲ್ದರ್ಜೆಗೇರಿಸಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚೀನಾ ಕುರಿತು ಮಾತನಾಡಿ ಚೀನಾಗೆ ತಕ್ಕ ಪಾಠ ಕಲಿಸುತ್ತೇವೆ, ಚೀನಾಗೆ ತಕ್ಕ ಉತ್ತರ ನೀಡುವ ನಾಯಕತ್ವ ಇದೆ, ಒಂದು ಇಂಚು ಜಾಗವನ್ನೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.

ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಬೆಂಬಲಿಗರು ವೀಕ್ಷಿಸುತ್ತಿದ್ದಾರೆ.ಕಾಂಗ್ರೆಸ್ ಸಂಪ್ರದಾಯದಂತೆ ಧ್ವಜಾರೋಹಣ ಮಾಡಿ ,ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಶುರುವಾಗಿದ್ದು,ಕೆಪಿಸಿಸಿ ಆವರಣದಲ್ಲಿ ಕೇವರ 150 ಗಣ್ಯರಿಗೆ ಮಾತ್ರ ಆಸನದ ವ್ಯವಸ್ಥೆಯಾಗಿದೆ. ಕೆಪಿಸಿಸ ನೂತನ ಕಚೇರಿಯಲ್ಲಿ ಡಿಕೆಶಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಗೆ ಆನೆ ಬಲ ಬಂದಿದ್ದು, ಡಿ.ಕಡ.ಶಿವಕುಮಾರ್ ಅವರ ದರ್ಬಾರ್ ಇಂದಿನಿಂದ ಅಧಿಕೃತವಾಗಿ ಆರಂಭವಾಗಲಿದೆ. ಡಿಕೆಶಿ ಸಾರಥ್ಯದಲ್ಲಿ […]

ಎಸ್ ಜಾನಕಿ ಭಾರತೀಯ ಚಿತ್ರರಂಗದ ಗಾನ ಕೋಗಿಲೆ .ಒಂದಲ್ಲಾ ಎರಡಲ್ಲಾ ೧೭ ಭಾಷೆಗಳಲ್ಲಿ ೪೮ ಸಾವಿರಕ್ಕು ಹೆಚ್ಚು ಹಾಡುಗಳನ್ನು ಹಾಡಿರೋ ಶ್ರೇಷ್ಠ ಗಾಯಕಿ.ಗಾಯನ ಕ್ಷೇತ್ರದಲ್ಲಿ ೪ ರಾಷ್ಟç ಪ್ರಶಸ್ತಿಗಳನ್ನು ಮುಡಿಗೆರಿಸಿ ಕೋಡಿರುವ ಜಾನಕಿಯಮ್ಮನಿಗೆ ಈಗ ೮೨ ವರ್ಷ. ಎಲ್ಲರಿಗೂ ಗೋತ್ತಿರೋ ಹಾಗೇ ಅವರು ಇತ್ತೀಚೆಗೆ ಶಸ್ತç ಚಿಕಿತ್ಸೆಗೆ ಒಳಗಾಗಿದ್ರು. ಇದೀಗ ಕೋಂಚ ಚೇತರಿಸಿಕೊಳ್ತಿದ್ದು,ಆರೋಗ್ಯ ವಾಗಿದ್ದಾರೆ.ಆದರೆ ,ಕೆಲ ಕಿಡಿಗೇಡಿಗಳು ಜಾನಕಿಯಮ್ಮ ಇನ್ನಿಲ್ಲಾ ಎಂಬ ಸುದ್ದಿಯನ್ನು ಹರಿಬಿಡ್ತಿದ್ದಾರೆ.ಈ ರೀತಿ ಇವರ ಬಗ್ಗೆ ವದಂತಿ […]

ರಕ್ಷಿತ್ ಶೆಟ್ಟಿ ಅಭಿನಯದ ಮಂಬರುವ ಚಿತ್ರ ೭೭೭ ಚಾರ್ಲಿ ಸಾಕಷ್ಟು ಸುದ್ದಿಮಾಡುತ್ತಿದೆ. ಸಾಹಸ ಪ್ರಧಾನ ಕಾಮಿಡಿ ಚಿತ್ರವನ್ನು ಕಿರಣ್ ರಾಜ್ ನಿಶರ್ದೇಶಿಸುತ್ತಿದ್ದು ಇದರಲ್ಲಿ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಖ್ಯಾತಿಯ ಡ್ಯಾನಿಶ್ ಸೇಠ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಟಿವಿ ನಿರೂಪಕ ಮತ್ತು ಕಾಮಿಡಿಯನ್ ಆಗಿರುವ ಡ್ಯಾನಿಶ್ ಅವರ ಹುಟ್ಟುಹಬ್ಬದ ದಿನ ಅವರು ಮತ್ತು ರಕ್ಷಿತ್ ಶೆಟ್ಟಿ ಚಿತ್ರದಲ್ಲಿರುವ ದೃಶ್ಯವೊಂದನ್ನು ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ., ರಕ್ಷಿತ್ ಶಟ್ಟಿಯವರ ಜೋತೆ ಚಿತ್ರದಲ್ಲಿ ನಟಿಸಿದ್ದು ಖುಷಿನೀಡಿದೆ […]

ಕಂದಾಯ ಸಚಿವ ಆರ್. ಅಶೋಕ್‌ರವರಿಗೆ ಇಂದು ೬೪ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಅವರಿಗೆ ಶುಭಾಶಯ ಕೋರಿದ್ದಾರೆ. ಪಕ್ಷದ ನಾಯಕರು, ಸಂಪುಟ ಸಹೋದ್ಯೋಗಿಗಳ, ಕಂದಾಯ ಸಚಿವರಾದ ಮಾನ್ಯ ಶ್ರೀ ಆರ್. ಅಶೋಕ್ ಅವರಿಗೆ ಜನ್ಮದಿನದ ಶುಭಾಷಯಗಳು. ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಇನ್ನಷ್ಟು ದೀರ್ಘಕಾಲ ನಾಡಿನ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕೆ. ಆರ್ ಆಸ್ಪತ್ರೆಯಲ್ಲಿ ಇತರ ರೋಗಿಗಳ ಜೊತೆಯಲ್ಲೇ ಕೊರೊನಾ ಶಂಕಿತನಿಗೂ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಮಹಾ ಯಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದೇ ಐಸಿಯೂ ವಾರ್ಡ್ನಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಶಂಕಿತ ವ್ಯಕ್ತಿಯ ಬೆಡ್ ಪಕ್ಕದಲ್ಲಿ ಇತರೆ ಕಾಯಿಲೆಯುಳ್ಳ ರೋಗಿಗಳನ್ನ ಇರಿಸಲಾಗಿದೆ. ಇದರಿಂದ ರೋಗಿಗಳು ತಮಗೂ ಸೋಂಕು ಹರಡಬಹುದೆಂದು ಭೀತಿಯಲ್ಲಿದ್ದಾರೆ. ಕೆ.ಆರ್ ಆಸ್ಪತ್ರೆ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್ ಸತಿಪತಿಗಳಾಗಿದ್ದರೆ. ಇವರಿಬ್ಬರ ವಿವಾಹ, ನೆನ್ನೆ ಜಾರ್ಖಂಡ್‌ನ ರಾಂಚಿಯಲ್ಲಿ ನೆರವೇರಿತು. ಈ ಮದುವೆ ಸಮಾರಂಭಕ್ಕೆ ಜಾರ್ಖಂಡ್‌ನ ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರು ಸಾಕ್ಷಿಯಾದ್ರು. ಕೊರೊನಾ ಗೈಡ್‌ಲೈನ್ಸ್ ಪ್ರಕಾರ ಮದುವೆಯಲ್ಲಿ ಕೆಲವು ಜನರು ಮಾತ್ರ ಭಾಗವಹಿಸಿದ್ರು. ಮದುವೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಿಲಾಗಿತ್ತು. ಕಳೆದ ವರ್ಷ ನಡೆದ ಮಹಿಳಾ ಆರ್ಚರಿ ಚಾಂಪಿಯನ್ ಷಿಪ್‌ನಲ್ಲಿ ದೀಪಿಕಾ, ಕಂಚಿನ ಪದಕ ಗೆದ್ದುಕಂಡಿದ್ದರು. […]

Advertisement

Wordpress Social Share Plugin powered by Ultimatelysocial