ವಿಧಾನಸಭೆಯ ಮಟ್ಟಿಗಾದರು ಕ್ರಿಯಾಶೀಲರಾಗಿ ಎಂದು ಕಾರ್ಯಕರ್ತರು, ನಾಯಕರು ಹಾಗು ಮುಖಂಡರುಗಳಿಗೆ ಮಾಜಿ ಪ್ರಧಾನಿ ದೇವೆಗೌಡ ಅವರು ಸಲಹೆಯನ್ನ ನೀಡಿದ್ದಾರೆ. ಈ ಸಂಬAಧ ಎಲ್ಲರಿಗು ಪತ್ರ ಬರೆದಿರುವ ಅವರು ಎಲ್ಲರು ಜನರ ಸಂಪರ್ಕದಲ್ಲಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ ಎನ್ನಲಾಗ್ತಾಯಿದೆ. ನೇರವಾಗಿ ಸಂಪರ್ಕ ಮಾಡಲು ಸಾಧ್ಯವಾಗದಿದ್ದರು ಸಾಮಾಜಿಕ ಜಾಲತಾಣಗಳ ಮೂಲಕವಾದರು ಜನರ ಮಧ್ಯೆ ತಮ್ಮ ಅಸ್ತಿತ್ವವನ್ನ ತೋರಿಸಬೇಕು ಎಂದು ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ನಾಲ್ವರು ಪೊಲೀಸರಿಗೆ ಕೋವಿಡ್ ಧೃಢವಾದ ಹಿನ್ನಲೆಯಲ್ಲಿ ನಾಲ್ಕು ಪೊಲೀಸ್ ಠಾಣೆಯನ್ನ ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಡಲಾಗಿದೆ. ಬಾಗಲಕೋಟೆ ಶಹರ ಠಾಣೆ, ಇಳಕಲ್ ಗ್ರಾಮೀಣ, ತೇರದಾಳ ಹಾಗೂ ಬನಹಟ್ಟಿ ಠಾಣೆ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. ನಾಲ್ವರು ಪೊಲೀಸರು ಚೇತರಿಸಿಕೊಳ್ಳುತ್ತಿದ್ದಾರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಮಾಹಿತಿಯನ್ನ ನೀಡಿದ್ದಾರೆ.

ಕೋವಿಡ್‌ನಿಂದ ಜನರನ್ನ ರಕ್ಷಿಸುವ ಕೊರೊನಾ ವಾರಿರ‍್ಸ್ಗೆ ಶಿವಮೊಗ್ಗದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಜ್ವರ ಎಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದ ಪೊಲೀಸ್ ಅಧಿಕಾರಿಯಬ್ಬರಿಗೆ ಚಿಕಿತ್ಸೆಯನ್ನ ನಿರಾಕರಿಸಿದ ಘಟನೆ ನಡೆದಿದೆ. ಜಿಲ್ಲೆಯ ೪೫ ವರ್ಷದ ಎಎಸ್‌ಐ ಒಬ್ಬರು ಜ್ವರ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಅವರನ್ನು ಕೋವಿಡ್ ಟೆಸ್ಟ್ ಕಾರಣ ಹೇಳಿ ವಾಪಾಸ್ ಕಳುಹಿಸಲಾಗಿದೆ. ಇದರಿಂದ ಈ ಪೊಲೀಸ್ ಅಧಿಕಾರಿ ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ […]

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡುವಂತೆ ಕಂದಾಯ ಸಚಿವ ಆರ್.ಅಶೋಕ ಸೂಚನೆ. ಹೀಗಾಗಿ ಕಂದಾಯ ಇಲಾಖೆಯಿಂದ ಈಗ ಅಧಿಕೃತ ಆದೇಶ ಹೊರಡಿಸಲಾಗಿದೆ.ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ ನೀಡುವಂತೆ ಕಂದಾಯ ಇಲಾಖೆಯಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಶಿಕ್ಷಣ, ಕೌಶಲಾಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇನ್ನಿತರ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಬ್ರಾಹ್ಮಣ […]

ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ೪೦ ವರ್ಷಗಳ ಗುತ್ತಿಗೆ ಪಡೆದಿರುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎನ್‌ಎಸ್‌ಎಲ್ ಶುಗರ್ಸ ಸಲ್ಲಿಸಿರುವ ಅರ್ಜಿ ಸಂಬ0ಧ ನಿರಾಣಿ ಶುಗರ್ಸ ಮಾಲೀಕ ಮುರುಗೇಶ್ ನಿರಾಣಿ ಹಾಗೂ ಇತರರಿಗೆ ಹೈಕೋರ್ಟ ತುರ್ತು ನೋಟಿಸ್ ಜಾರಿ ಮಾಡಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ ಭಜಂತ್ರಿ ನೇತೃತ್ವದ ಏಕಸದಸ್ಯ ಪೀಠ, ಮುರುಗೇಶ್ ನಿರಾಣಿ ಹಾಗೂ ಎಲ್ಲ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿತು. ಟೆಂಡರ್ […]

ಸ್ಯಾಂಡಲ್ವುಡ್ ಮೋಹಕ ತಾರೆ, ರಮ್ಯಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನು ಹೊತ್ತಿದ್ದ ರಮ್ಯಾ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಎಲ್ಲ ಸೋಷಿಯಲ್ ಮೀಡಿಯಾ ಖಾತೆ ಡಿ ಆಕ್ಟಿವೇಟ್ ಮಾಡಿ ಅಜ್ಞಾತವಾಸಕ್ಕೆ ತೆರಳಿದ್ದರು. ಆದರೆ, ಈಗ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಕಮ್ಬ್ಯಾಕ್ ಮಾಡಿದ್ದು, ಭಿನ್ನ ವಿಭಿನ್ನ ಮುಖ ಭಾವಗಳಲ್ಲಿ, ನವರಸಗಳನ್ನು ತೋರುವಂತಿರುವ ಫೋಟೋಸ್, ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳನ್ನ ನೋಡಿದ ನೆಟ್ಟಿಗರು […]

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,68,876 ಕ್ಕೆ ಏರಿಕೆಯಾಗಿದೆ. ಈ ಪೈಕಿ 6,12,815 ಜನರು ಸೋಂಕಿನಿAದ ಚೇತರಿಕೆ ಕಂಡಿದ್ದಾರೆ. 3,31,146 ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೇಶದಲ್ಲಿ 24,915 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.. ಒಂದು ತಿಂಗಳ ಹಿಂದೆ ಕರ್ನಾಟಕ ಟಾಪ್ 10 ರೊಳಗೆ ಇರಲಿಲ್ಲ. ಈಗ ಟಾಪ್ 3 ಬಂದಿದೆ. ಒAದು ಸಮಯದಲ್ಲಿ ಇಡೀ ಭಾರತಕ್ಕೆ ಕರ್ನಾಟಕ ಮಾದರಿಯಾಗಿತ್ತು. ಕೊವಿಡ್ ನಿಯಂತ್ರಣದಲ್ಲಿ […]

ಕೊರೊನಾ ಲಸಿಕೆ ಸಂಶೋಧಿಸಿ ಅದನ್ನು ಇಡೀ ಜಗತ್ತಿಗೆ ರವಾನೆ ಮಾಡುವ ಶಕ್ತಿ ಭಾರತಕ್ಕಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ ಶಕ್ತಿ ಅಘಾಧವಾಗಿದೆ ಗೇಟ್ಸ್ ಹೇಳಿದ್ದಾರೆ.ವಿಶಾಲ ಭೂಪ್ರದೇಶವನ್ನು ಹೊಂದಿರುವ ಭಾರತ, ನಗರ ಪ್ರದೇಶಗಳಲ್ಲಿ ಹೊಂದಿರುವ ಅಪಾರ ಜನಸಂಖ್ಯೆಯ ಪರಿಣಾಮವಾಗಿ ಭವಿಷ್ಯದಲ್ಲಿ ಆರೋಗ್ಯ ಸಂಬAಧಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ […]

ಕೋಲಾರ ತಾಲೂಕಿನ ವೇಮಗಲ್ ನರಸಾಪುರ ರಸ್ತೆಯ ಗೌಡರ ಸೂರಪ್ಪ ಕಾಂಪ್ಲೆಕ್ಸ್ ನಲ್ಲಿ ಕಳೆದ ರಾತ್ರಿ ಐದು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಗಾಯಿತ್ರಿ ಬೇಕರಿ ಅಂಡ್ ಸ್ವೀಟ್ಸ್, ಕ್ಲಾಸಿಕ್ ಮೆನ್ಸ್ ಬ್ಯೂಟಿ ಸೆಲೂನ್, ಚೌಡೇಶ್ವರಿ ಫ್ಯಾನ್ಸಿ ಗಿಫ್ಟ್ ಸೆಂಟರ್, ತನುಶ್ರೀ ವೈಭವ್ ಸ್ಕೇಲ್ ಸೆಂಟರ್, ಆಖಿಆಅ ಕೋರಿಯರ್ ಆಫೀಸ್ ಅಂಗಡಿಗಳಲ್ಲಿ ಕಳ್ಳತನವಾಗಿದೆ.ಗಾಯಿತ್ರಿ ಬೇಕರಿ ಅಂಡ್ ಸ್ವೀಟ್ಸ್ ನಲ್ಲಿ ೫೦೦೦ರೂನಗದು, ಕ್ಲಾಸಿಕ್ ಮೆನ್ಸ್ ಬ್ಯೂಟಿ ಸೆಲ್ಯೂನ್ ನಲ್ಲಿ ೨೦೦೦ರೂಗಳನ್ನು ಕಳ್ಳತನ ಮಾಡಿದ್ದಾರೆ ಎಂದು […]

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ನಾಲ್ವರು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಡಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು , ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುವುದು ಜೊತೆಗೆ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗವನ್ನು ಮೂರುದಿನಗಳ ಕಾಲ ಬಂದ್ ಮಾಡಲಾಗಿದೆ. ಕೇವಲ ತುರ್ತು ಚಿಕಿತ್ಸೆ, ಐಸೋಲೇಷನ್ ವಿಭಾಗ ಹಾಗೂ ಫೀವರ್ ಕ್ಲಿನಿಕ್ ಗಳು ಮಾತ್ರ ಕಾರ್ಯಾಚರಿಸಲಿದೆ ಎಂದು […]

Advertisement

Wordpress Social Share Plugin powered by Ultimatelysocial