ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಇದೀಗ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ನಗರಸಭೆಗೆ ಕೊರೊನಾ ವೈರಸ್ ಎಂಟ್ರಿಕೊಟ್ಟಿದೆ. ವಾಟರ್  ಸಪ್ಲೈಯರ್ ಗೆ ಕೊರೊನಾ ಸೋಂಕು ತಗುಲಿದೆ. ನಗರಸಭೆಯ ಸುತ್ತಮುತ್ತಲೂ ಸ್ಯಾನಿಟೈಸೇಷನ್ ಮಾಡಿ  ಮತ್ತು 2 ದಿನಗಳಕಾಲ ನಗರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಿ ಎಂದು ನೆಲಮಂಗಲ ನಗರಸಭೆ ಆಯುಕ್ತ ಮಂಜುನಾಥ ಹೇಳಿಕೆ ನೀಡಿದ್ದಾರೆ.

ಮಧುಗಿರಿ ಪಟ್ಟಣದಲ್ಲಿ ಸ್ವಯಂಘೋಷಿತ ಲಾಕ್ ಡೌನ್ ಗೆ ಕೆಲವರು ಕರೆ ನೀಡಿದ್ದು, ಪಟ್ಟಣದಲ್ಲಿ ಕರೆ ನೀಡಿರುವ ಸ್ವಯಂಪ್ರೇರಿತ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವರು ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬೆದರಿಕೆ ಒಡ್ಡುತ್ತಿದ್ದಾರೆ. ಈ ಹಿನ್ನಲೆ ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಸಾರ್ವಜನಿಕರು ಮನವಿ ಸಲ್ಲಿಸಿದ ವೇಳೆ ಮಾತನಾಡಿದ ಅವರು, ಪಟ್ಟಣದಲ್ಲಿ ಕೆಲವರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಗೆ ಕರೆ […]

ದೇಶದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 32,695 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು , ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,70,169ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 606 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.  ಈ ವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 24,915ಕ್ಕೆ ತಲುಪಿದೆ. ಮತ್ತು ಒಂದೇದಿನದಲ್ಲಿ 21,415 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 6,12,815ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ್ನೂ 3,31,146 […]

ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಅಕ್ರಮ ಆಸ್ತಿ ಹಾಗೂ ಅವ್ಯವಹಾರ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಈತನ ಅಸ್ತಿಯನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ. ದುಬೆ ತಿಂಗಳಿಗೆ ಕೋಟಿ ರೂ.ಆದಾಯ ಗಳಿಸುತ್ತಿದ್ದನು ಎಂದು ತಿಳಿದು ಬಂದಿದ್ದು, ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾನೆ, ಹೇಗೆ ವ್ಯಯಿಸಿದ್ದಾನೆ ಎಂಬುದನ್ನು ಇ.ಡಿ. ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ೬೦ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಕುಖ್ಯಾತ ರೌಡಿ ತಿಂಗಳಿಗೆ […]

ಕೋವಿಡ್ ಹಾವಳಿಯನ್ನು ಮೆಟ್ಟಿನಿಂತು, ಜಾಗತಿಕ ಒಗ್ಗಟ್ಟಿನ ದ್ಯೋತಕವಾಗಿ ಮುಂದಿನ ವರ್ಷ ಒಲಿಂಪಿಕ್ಸ್ ಪಂದ್ಯಾವಳಿ ನಡೆದೇ ನಡೆಯುತ್ತದೆ ಎಂಬುದಾಗಿ ಟೋಕಿಯೊ ಗವರ್ನರ್ ಯುರಿಕೊ ಕೊಯಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇಂಥ ಕಠಿಣ ಸನ್ನಿವೇಶದಲ್ಲಿ ಜಗತ್ತು ಒಗ್ಗಟ್ಟಾಗಿ ನಿಲ್ಲಬೇಕು, ಮನುಕುಲದ ಸಂಬAಧವನ್ನು ದೃಢಗೊಳಿಸಬೇಕು. ಒಲಿಂಪಿಕ್ಸ್ ಆಯೋಜನೆಯಿಂದ ಇದು ಸಾಧ್ಯವಾಗಲಿದೆ’ ಎಂದು ರಾಯರ್‌ಗೆ ನೀಡಿದ ಆನ್‌ಲೈನ್ ಸಂದರ್ಶನದಲ್ಲಿ ಯುರಿಕೊ ಕೊಯಿಕೆ ಹೇಳಿದರು. ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ವಿವಿಧ ಸಮೀಕ್ಷೆಗಳಲ್ಲಿ ಮುಂದಿನ ವರ್ಷವೂ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯುವುದು […]

ಇಲ್ಲಿನ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಬೆಂಬಿಡದೇ ಕಾಡುತ್ತಿರುವ ಕೋವಿಡ್-೧೯ ಸೋಂಕು ಈಗ ಚುನಾಯಿತ ಪ್ರತಿನಿಧಿಗಳಿಗೆ ಬೆನ್ನಟ್ಟಿದೆ. ಬುಧವಾರ ಸಂಸದ ಭಗವಂತ ಖೂಬಾಗೂ ವೈರಸ್ ಒಕ್ಕರಿಸಿದೆ. ಸಂಸದರಿಗೆ ಕೋವಿಡ್-೧೯ ಸೋಂಕಿನ ಯಾವುದೇ ರೋಗ ಲಕ್ಷಣಗಳು ಕಂಡುಬAದಿಲ್ಲ. ಆದರೂ ಗಂಟಲು ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ದೆಹಲಿ ಮತ್ತು ಬೆಂಗಳೂರು ಪ್ರಯಾಣ ಜತೆಗೆ ಜಿಲ್ಲೆಯಲ್ಲಿ ವಿವಿಧೆಡೆ ಸಂಚಾರ ಹಿನ್ನಲೆಯಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ. ಇಲ್ಲಿನ ಶಿವನಗರದಲ್ಲಿ ಇರುವ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿದ್ದು, […]

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದು,  ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 29,429 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಲ್ಲಿ  ಒಟ್ಟು ಸೋಂಕಿತರ ಸಂಖ್ಯೆ 9,36,181 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 582 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕರೋನವೈರಸ್‌ನಿಂದಾಗಿ ಒಟ್ಟು 24,309 ಜನ ಸಾವನ್ನಪ್ಪಿದ್ದಾರೆ.  ಒಟ್ಟು ಸೋಂಕಿತರ ಪೈಕಿ 5,92,032 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 3,19,840 ಜನರು ಸೋಂಕಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. […]

ಚಿಕ್ಕಾಬಳ್ಳಾಪುರದಲ್ಲಿ ಮಹಾಮಾರಿ ಕೊರೊನಾ ನಿಯಂತ್ರಿಸಲು ಸರ್ಕಾರ ವಾರದ ಲಾಕ್ ಡೌನ್ ಜಾರಿ ಮಾಡಿದೆ ಸರ್ಕಾರದ ಮತ್ತು ಪೊಲೀಸ್ ನಿಯಮಗಳಿಗೆ ಸ್ವಲ್ಪ ಜನ ಬೆಲೆಕೊಡದೆ ಸುಖಾಸುಮ್ಮನೆ ತಿರುಗಾಡುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಕೆಲಸ ಮಾಡಲು ತುಂಬಾ ಕಷ್ಟವಾಗುತ್ತಿದೆ. ಬ್ಯಾರಿಕ್ಯೇಟ್ ಹಾಕಿರುವುದನ್ನು ಕೂಡ ಲೆಕ್ಕಿಸದೆ ತಪ್ಪಿಸಿಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ. ಪೊಲೀಸ್ ಸಿಬಂಧಿ ಇದರ ಮದ್ಯೆ ತಮ್ಮ ಪ್ರಾಣದ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ವೆಂಕಟಗಿರಿ ಕೋಟೆಯಲ್ಲಿ […]

ಅಮೆರಿಕಾದಲ್ಲಿ ಕೊರೊನಾ ತಾಂಡವವಾಡುತ್ತಿದ್ದು, ಈ ಭೀತಿಯ ನಡುವೆ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣದ ಮೊರೆ ಹೋದರೆ ಅಂತಹವರ ವೀಸಾ ರದ್ದುಗೊಳಿಸುವುದಾಗಿ ಅಮೆರಿಕಾ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದೀಗ ಆ ಆದೇಶವನ್ನು ಹಿಂಪಡೆದಿದೆ. ಕೊರೊನಾ ವೈರಸ್ ಭೀತಿ ಹಿನ್ನಲೆ, ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಣಣ ತೆಗೆದುಕೊಂಡರೆ, ಅವರ ವೀಸಾ ರದ್ದು ಮಾಡುವುದಾಗಿ ಟ್ರಂಪ್ ಆದೇಶ ಹೊರಡಿಸಿದ್ದರು. ಹಾವರ್ಡ್ ಹಾಗೂ ಎಂಐಟಿ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ವ್ಯಾಸಂಗ […]

ಚೀನಾ ಹಾಗೂ ಅಮೆರಿಕಾದ ನಡುವಿನ ಸಂಬAಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಲೆ ಬಿಸಿ ಹೆಚ್ಚಿಸಿದೆ. ಚೀನಾ ಮತ್ತು ಅಮೆರಿಕಾದ ನಡುವೆ ಬಿಕ್ಕಟ್ಟು ತಲೆದೂರಿದ್ದು ಇಂಥ ಸಂದರ್ಭದಲ್ಲಿ ಎರಡನೇ ಹಂತದ ವಾಣಿಜ್ಯ ಒಪ್ಪಂದದ ಕುರಿತು ಚೀನಾ ಜೊತೆಗೆ ಚರ್ಚಿಸುವ ಆಸಕ್ತಿಯಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಚೀನಾ ವಿರುದ್ಧ ಹೌಹಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ […]

Advertisement

Wordpress Social Share Plugin powered by Ultimatelysocial