ಪ್ಯಾನ್​ ಇಂಡಿಯಾ ಸಿನಿಮಾಗಳ ಹಣಗಳಿಕೆಯ ವರದಿ ಬಗ್ಗೆ ಗಂಭೀರ ಆರೋಪ ಮಾಡಿದ ನಟ ಸಿದ್ಧಾರ್ಥ್​

ಪ್ಯಾನ್​ ಇಂಡಿಯಾ ಸಿನಿಮಾಗಳ ಹಣಗಳಿಕೆಯ ವರದಿ ಬಗ್ಗೆ ಗಂಭೀರ ಆರೋಪ ಮಾಡಿದ ನಟ ಸಿದ್ಧಾರ್ಥ್​!

ಹೈದರಾಬಾದ್​: ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್​ ನಂತರ ಅನೇಕ ಚಿತ್ರಗಳು ಪ್ಯಾನ್​ ಇಂಡಿಯಾ ಕಲ್ಪನೆಯಲ್ಲಿ ಸಿದ್ಧವಾಗುತ್ತಿವೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಹಾಗೂ ಮಾಲಿವುಡ್​ನಲ್ಲೂ ಸಾಕಷ್ಟು ಪ್ಯಾನ್​ ಇಂಡಿಯಾ ಸಿನಿಮಾಗಳು ತಯಾರಾಗುತ್ತಿವೆ.

ಆದರೆ, ಕೆಲ ನಿರ್ಮಾಪಕರು ತಮ್ಮ ಚಿತ್ರವನ್ನು ಪ್ರಚಾರ ಮಾಡಿಕೊಳ್ಳಲು ಹಣಗಳಿಕೆಯ ಬಗ್ಗೆ ನಕಲಿ ವರದಿಯನ್ನು ನೀಡುತ್ತಿದ್ದಾರೆ ಎಂದು ನಟ ಸಿದ್ಧಾರ್ಥ್​ ಆರೋಪ ಮಾಡಿದ್ದು, ಕೆಲವರಿಗೆ ನೇರವಾಗಿಯೇ ಪ್ರಶ್ನೆ ಕೇಳಿದ್ದಾರೆ.

ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಹಣಗಳಿಕೆಯ ಬಗ್ಗೆ ಸಿದ್ಧಾರ್ಥ್ ಮಾಡಿರುವ ಟ್ವೀಟ್ ಸಂಚಲನ ಮೂಡಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಣಗಳಿಕೆಯ ವರದಿಯನ್ನು ನಕಲಿ ಮಾಡಲು ಎಷ್ಟು ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ? ಸಾಕಷ್ಟು ದಿನಗಳಿಂದ ನಿರ್ಮಾಪಕರು ಬಾಕ್ಸ್​ಆಫೀಸ್​ನ ನಕಲಿ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಪ್ಯಾನ್​ ಇಂಡಿಯಾದ ಪ್ರಾಮಾಣಿಕತೆ ಏನಿದೆ? ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಸಮುದಾಯ ಮತ್ತು ಮಾಧ್ಯಮಗಳು ಕೂಡ ತಮ್ಮ ಅಧಿಕೃತ ಅಂಕಿಅಂಶಗಳನ್ನು ಪ್ರಾರಂಭಿಸಿವೆ. ಎಲ್ಲ ಭಾಷೆಗಳು, ಎಲ್ಲ ಇಂಡಸ್ಟ್ರಿಗಳು ಒಂದೇ ಎನ್ನುವ ಮೂಲಕ ಪ್ಯಾನ್​ ಇಂಡಿಯಾ ಎಂಬುದು ಅಪ್ರಾಮಾಣಿಕತೆ ಎಂದು ಸಿದ್ಧಾರ್ಥ್​ ಟ್ವೀಟ್​ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಪ್ಪು ಕಲೆ ಹೋಗಲಾಡಿಸಿ ಮುಖದ ಅಂದ ಕಾಪಾಡಿಕೊಳ್ಳಲು ಮನೆಯಲ್ಲಿ ಹೀಗೆ ಮಾಡಿ ಸಾಕು

Thu Dec 23 , 2021
ಮುಖದ (Face) ಅಂದ (Beauty) ಕಾಪಾಡಿಕೊಳ್ಳುವುದು ಹೆಂಗಳೆಯರಿಗೆ ದೊಡ್ಡ ತಲೆನೋವು (Headache). ಚರ್ಮದ (Skin) ವಿಚಾರದಲ್ಲಿ ಒಂದಲ್ಲ, ಒಂದು ಸಮಸ್ಯೆಯನ್ನು(Problems) ಹೆಣ್ಣು ಮಕ್ಕಳು (Girls) ಅನುಭವಿಸುತ್ತಾರೆ. ಅದರಲ್ಲೂ ಕಲೆ ರಹಿತ ಚರ್ಮ ಪಡೆಯಲು ಹವಣಿಸುತ್ತಾರೆ. ಮುಖದ ಮೇಲಿನ ಕಲೆಯಾಗದಂತೆ ಅಥವಾ ಇರೋ ಕಲೆ ಹೋಗಿಸಲು ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಕೆಲವರು ಮುಖದ ಮೇಲೆ ಏನಾದ್ರೂ ಕಪ್ಪು ಕಲೆಗಳು ಕಾಣಿಸಿಕೊಂಡರೆ ಅವರಿಗೆ ಜೀವ ಹೋದಷ್ಟು ಕೀಳರಿಮೆ ಆವರಿಸುತ್ತದೆ. ಯಾವುದೋ ಒಂದು […]

Advertisement

Wordpress Social Share Plugin powered by Ultimatelysocial