54 ಜನ ಪ್ರಯಾಣಿಕರ ಬಿಟ್ಟು ವಿಮಾನ ಟೆಕ್ ಆಫ್

ಬೆಂಗಳೂರು, ಜ.೧೦-ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ಸ್ ಸಿಬ್ಬಂದಿ ಎಡವಟ್ಟು ಮಾಡಿದ್ದು, ಪ್ರಯಾಣಿಕರನ್ನು ಟರ್ಮಿನಲ್ ನಲ್ಲೇ ಬಿಟ್ಟು ವಿಮಾನ ಟೆಕ್ ಆಪ್ ಆದ ಘಟನೆ ವರದಿಯಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಂದು ಬಸ್‌ನಲ್ಲಿ ನಿನ್ನೆ ಬರುತ್ತಿದ್ದ ೫೪ ಜನ ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಿದೆ. ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಜಿ೮ ೧೧೬ ನಂಬರ್‌ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್‌ನಲ್ಲಿ ವಿಮಾನಕ್ಕೆ ಬಸ್‌ನಲ್ಲಿ ಹೋಗಿ ೫೦ ಜನ ಪ್ರಯಾಣಿಕರು ಹತ್ತಿದ್ದರು.
ಎರಡನೇ ಟ್ರಿಪ್‌ನಲ್ಲಿ ೫೪ ಜನರನ್ನು ಟರ್ಮಿನಲ್‌ನಿಂದ ವಿಮಾನದ ಬಳಿಗೆ ಬಸ್ ಕರೆದೊಯ್ಯಬೇಕಿತ್ತು. ಆದರೆ, ಬಸ್ ಪ್ರಯಾಣಿಕರನ್ನು ಕರೆತರುವ ಮುನ್ನವೆ ವಿಮಾನ ಟೇಕಾಫ್ ಆಗಿದೆ. ಪ್ರಯಾಣಿಕರನ್ನು ಗಮನಿಸದೆ ಏರ್‌ಲೈನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಅಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್‌ಲೈನ್ಸ್ ವಿರುದ್ಧ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತ ಟ್ವಿಟರ್‌ನಲ್ಲಿ ಗೋಫಸ್ಟ್ ಮತ್ತು ಡಿಜಿಸಿಎಗೆ ೫೦ ಕ್ಕೂ ಅಧಿಕ ಪ್ರಯಾಣಿಕರು ಟ್ವೀಟ್ ಮಾಡಿ ಸಮಯಕ್ಕೆ ಸರಿಯಾಗಿ ಹೋಗಲು ಆಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಟ್ವಿಟರ್‌ನಲ್ಲಿ ಗೋಫಸ್ಟ್ ಸಂಸ್ಥ ಕ್ಷಮೆ ಕೇಳಿದೆ. ಪ್ರಯಾಣಿಕರ ಮಾಹಿತಿ ಪಡೆದುಕೊಂಡು ಏರ್‌ಲೈನ್ಸ್ ಸಂಸ್ಥೆ ಟ್ವೀಟ್ ಮಾಡಿ ಕ್ಷಮೆ ಕೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೋಧಿ ರಫ್ತು ನಿಷೇಧ

Fri Jan 13 , 2023
ನವದೆಹಲಿ,ಜ.8- ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಮಾರುಕಟ್ಟೆಯಲ್ಲಿನ ದಾಸ್ತಾನು ಪೂರೈಕೆ ಮತ್ತು ಅಗತ್ಯವಿರುವ ವಿತರಣೆ ಗಣನೆಗೆ ತೆಗೆದುಕೊಂಡು ಗೋದಿ ರಪ್ತು ನಿಷೇಧ ಮಾಡಿದ್ದ ಸರ್ಕಾರ , ಈ ಬಗ್ಗೆ ಮರುಚಿಂತನೆ ನಡೆಸಲು‌ ಮುಂದಾಗಿದೆ.ಡಿಸೆಂಬರ್ ನಂತರ ಉಚಿತ ಆಹಾರ ಧಾನ್ಯಗಳ ಯೋಜನೆ ಸ್ಥಗಿತಗೊಳಿಸಿದ ನಂತರ, ಗೋಧಿ ರಫ್ತು ಮೇಲೆ 2022 ರ ಮೇ ತಿಂಗಳಲ್ಲಿ ನಿಷೇಧ ತೆಗೆದುಹಾಕುವ ಕುರಿತು ಚಿಂತನೆ ನಡೆದಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.ಗೋದಿ […]

Advertisement

Wordpress Social Share Plugin powered by Ultimatelysocial