ವಧು ಪೊಲೀಸ್ ಅಧಿಕಾರಿ- ವರ ಕುಖ್ಯಾತ ಖದೀಮ:

 

ಅಸ್ಸಾಂ: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಭಾವಿ ಪತಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಹಣೆಮಣೆಗೆ ಏರಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ತಮ್ಮ ಪತಿ ಭಾವಿ ಪತಿ ರಾಣಾ ಪೊಗಾಗ್ ಮಹಾ ವಂಚಕ ಎಂದು ತಿಳಿದುಬಂದಿದ್ದರಿಂದ ಪೊಲೀಸ್‌ ವಧು ಇಂಥದ್ದೊಂದು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು, ಎಲ್ಲರ ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದಾರೆ.

ಅಸ್ಸಾಂನ ನಾಗೋನ್ ಸದರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಜೋನ್ಮಣಿ ರಾಭಾ ಇದೀಗ ಭಾರಿ ಸುದ್ದಿಯಲ್ಲಿದ್ದು, ದಕ್ಷತೆ, ಪ್ರಾಮಾಣಿಕರು ಎಂಬ ಹೆಸರು ಗಳಿಸುತ್ತಿದ್ದಾರೆ.

ಇವರಿಬ್ಬರ ಎಂಗೇಜ್‌ಮೆಂಟ್‌ ಆಗಿತ್ತು. ತಾನು ತೈಲ ಮತ್ತು ಅನಿಲ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಈತ ಜೋನ್ಮಣಿಯವರ ಸಲಿಗೆ ಬೆಳೆಸಿ, ವಿವಾಹವಾಗುವ ಪ್ರಸ್ತಾಪ ಇಟ್ಟಿದ್ದ. ಪೊಲೀಸ್ ಅಧಿಕಾರಿಯನ್ನು ಮದುವೆಯಾದರೆ ಮುಂದೆ ತನಗೆ ಯಾವುದೇ ತೊಂದರೆ ಬರುವುದಿಲ್ಲ ಎನ್ನುವುದು ಆತನ ಉದ್ದೇಶದಂತಿತ್ತು.

ಮದುವೆಯ ಸಮಯದಲ್ಲಿ ಈ ಪೊಲೀಸ್ ಅಧಿಕಾರಿಗೆ ತಮ್ಮ ಪತಿಯಾಗುವವ ಮಹಾ ಖದೀಮ ಎನ್ನುವುದು ತಿಳಿದಿರಲಿಲ್ಲ. ಆಮೇಲೆ ಈತ ಒಬ್ಬ ಹೈಪ್ರೊಫೈಲ್ ವಂಚಕ. ಈತ ಹಲವರನ್ನು ವಂಚಿಸಿದ್ದ. ಉನ್ನತ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ, ಅವರಿಂದ ಹಣ ಪಡೆಯುತ್ತಿದ್ದ. ಬಳಿಕ ಅವರಿಗೆ ಕೆಲಸ ಕೊಡಿಸದೇ ವಂಚಿಸುತ್ತಿದ್ದ. ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಒಡ್ಡುತ್ತಿದ್ದ ಎನ್ನುವುದು ತಿಳಿದುಬಂತು. ಮಾತ್ರವಲ್ಲದೇ ಹನಿ ಟ್ರ್ಯಾಪ್‌ನಲ್ಲೂ ಈತ ಆರೋಪಿಯಾಗಿದ್ದ.

ಇಷ್ಟು ತಿಳಿಯುತ್ತಲೇ ಮದುವೆ ಕ್ಯಾನ್ಸಲ್‌ ಮಾಡಿದ ಅವರು, ಭಾವಿ ಪತಿ ವಿರುದ್ಧ ವಂಚನೆ ಕೇಸ್‌ ದಾಖಲಿಸಿ ಜೈಲಿಗಟ್ಟಿದ್ದಾರೆ. ಈತನಿಂದ ಇದಾಗಲೇ ಹಲವಾರು ನಕಲಿ ಸೀಲ್‌ ಸೇರಿದಂತೆ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಗೆಲ್ಲ ಬ್ಯಾಕ್ಟೀರಿಯಾ ನಿಮ್ಮ ಜೀವಕ್ಕೆ ಕುತ್ತು ತರಬಹುದು!

Mon May 9 , 2022
ಕೇರಳದ (Kerala) ಕಾಸರಗೋಡಿನಲ್ಲಿ (Kasaragod) ಇತ್ತೀಚೆಗಷ್ಟೇ ಒಂದು ದುರ್ದೈವದ ಘಟನೆ ನಡೆದು ಹೋಗಿ ಬಾಲಕಿ (Girl) ಒಬ್ಬಳು ಜೀವ ತೆತ್ತ ಘಟನೆ ನಡೆದಿದೆ. ಆಹಾರ ವಿಷವಾಗಿದ್ದು, ಅದನ್ನು ಸೇವಿಸಿ 16 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ (Death). ಕಾಸರಗೋಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಬಾಲಕಿಯ ಸಾವಿನ ಘಟನೆಗೆ ಶಿಗೆಲ್ಲ ಎಂಬ ಬ್ಯಾಕ್ಟೀರಿಯಾ ಕಾರಣ ಎಂದು ಹೇಳಲಾಗುತ್ತಿದೆ. ಕೇರಳದ ರೆಸ್ಟೊರೆಂಟ್‌ನಲ್ಲಿ ಷವರ್ಮಾ ತಿಂದ ಸುಮಾರು 58 ಮಂದಿ ಈ ಬ್ಯಾಕ್ಟೀರಿಯಾ ಕಾರಣದಿಂದ ಅಸ್ವಸ್ಥಗೊಂಡಿದ್ದರು. ಬಾಲಕಿಯೊಬ್ಬಳು […]

Advertisement

Wordpress Social Share Plugin powered by Ultimatelysocial