ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ರಾಮುಲುಗೆ ಆಪತ್ತು.

ಬಳ್ಳಾರಿ: ಜೀವದ ಗೆಳೆಯ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿರೋದು ಸಚಿವ ಶ್ರೀರಾಮುಲು ರಾಜಕೀಯ ಭವಿಷ್ಯಕ್ಕೆ ಅಪಾಯದ ಗಂಟೆ ಬಾರಿಸಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಬ್ಬರಕ್ಕೆ ರಾಮುಲು ತಮ್ಮ ರಾಜಕೀಯ ಕರ್ಮಭೂಮಿ ಬಳ್ಳಾರಿಯನ್ನೇ ಬಿಟ್ಟು ಪಲಾಯನ ಮಾಡೋ ಸಾಧ್ಯತೆಯಿದೆ.ಬಳ್ಳಾರಿಯೇ ಸೇಫ್ ಅಲ್ಲ
2018ರ ಎಲೆಕ್ಷನ್‌ನಲ್ಲಿ ರಾಮುಲು ಬಾದಾಮಿ, ಮೊಳಕಾಲ್ಮೂರು ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ರು. ಬಾದಾಮಿಯಲ್ಲಿ ಸೋತರೂ ಮೊಳಕಾಲ್ಮೂರಿನಲ್ಲಿ ಗೆಲುವಿನ ನಗೆ ಬೀರಿದ್ರು. ಈ ಬಾರಿ ಮೊಳಕಾಲ್ಮೂರಿಂದ ಸ್ವಕ್ಷೇತ್ರ ಬಳ್ಳಾರಿ ಗ್ರಾಮೀಣಕ್ಕೆ ಬರುವ ಮನಸ್ಸಿದ್ರೂ ರಾಮುಲುಗೆ ಭಯ ಕಾಡ್ತಿದೆ.’ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಸ್ಪರ್ಧೆ’
ರಾಮುಲು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಜನ ಒತ್ತಾಯ ಮಾಡ್ತಿದ್ದಾರೆ. ಸಂಡೂರು ಕ್ಷೇತ್ರದಿಂದ್ಲೂ ಸ್ಪರ್ಧಿಸುವಂತೆ ಜನರ ಒತ್ತಾಯ ಇದೆ. ನಾನು ಸ್ಪರ್ಧಿಸುವ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಸಮೀಕ್ಷೆ ನಡೀತಿದೆ. ಸಮೀಕ್ಷಾ ವರದಿ ಬಂದ ಬಳಿಕ ಪಕ್ಷ ಮತ್ತು ಸಿಎಂಗೆ ನೀಡುತ್ತೇನೆ. ಆ ವರದಿಯನ್ನ ಆಧರಿಸಿ ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ರಾಮುಲು ಹೇಳುತ್ತಿದ್ದಾರೆ.

ಕಾಲುವೆ ರಿಪೇರಿಗೆ ಠಿಕಾಣಿ
ಕಳೆದ ನವೆಂಬರ್​​​ಲ್ಲಿ ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀರಾಮುಲು ಕ್ರೆಡಿಟ್​​​ ಫೈಟ್‌ಗೆ ಇಳಿದಿದ್ರು. ಕಾಲುವೆ ರಿಪೇರಿ ವಿಚಾರದಲ್ಲಿ ಶಾಸಕ ನಾಗೇಂದ್ರ ಜೊತೆ ಜಟಾಪಟಿ ನಡೆಸಿ ಕಾಮಗಾರಿ ಸ್ಥಳದಲ್ಲಿ ರಾತ್ರಿಯಿಡೀ ವಾಸ್ತವ್ಯ ಹೂಡಿದ್ರು. ಬಳ್ಳಾರಿ ರೈತರ ಜೀವಜಗತ್ತಾದ ಜಲಕ್ಕಾಗಿ ಜಿದ್ದಿಗೆ ಬಿದ್ದಿದ್ರು. ನೀರಿಲ್ಲದೆ ಒಣಗಿದ್ದ ಬೆಳೆಯಲ್ಲಿ ಭರ್ಜರಿ ಮತದ ಫಸಲಿಗೆ ಗರಡಿ ಮನೆ ಪ್ರವೇಶಿಸಿದ್ದರು. ಆದ್ರೆ, ಈಗ ಏಕಾಏಕಿ ತಮ್ಮ ಚಿತ್ತ ಬದಲಿಸಿದ್ದಾರೆ.

ಸಂಡೂರು ಕ್ಷೇತ್ರದತ್ತ ಒಲವು
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಟೀಮ್ ಸಡನ್​​​ ಆಯಕ್ಟಿವ್​ ಆಗಿದೆ. KRPP ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದರೆ ಬಿಜೆಪಿ ಮತ ವಿಭಜನೆ ಆಗೋದು ಪಕ್ಕಾ. ಹೀಗಾಗಿ ಅಲ್ಲಿ ಸ್ಪರ್ಧೆ ಬೇಡ ಎಂದು ರಾಮುಲುಗೆ ಅವರ ಅತ್ಯಾಪ್ತರು ಸಲಹೆ ನೀಡುತ್ತಿದ್ದಾರೆ. ಆಪ್ತರ ಸಲಹೆಯನ್ನು ಪರಿಗಣಿಸಿರೋ ಶ್ರೀರಾಮುಲು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬದಲು ಸಂಡೂರು ಕ್ಷೇತ್ರದತ್ತ ಒಲವು ಹೊಂದಿದ್ದಾರೆ. ಸಂಡೂರಿನಿಂದ ಸ್ಪರ್ಧೆಗೆ ತಯಾರಿ ಆರಂಭಿಸಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್ ಶಾಸಕ ಇ.ತುಕರಾಂ ವಿರುದ್ಧ ರಾಮುಲು ತನ್ನ ತಾಕತ್ತು ಪ್ರದರ್ಶಿಸುತ್ತಾರಾ ಅನ್ನೋದೇ ಕದನ ಕುತೂಹಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋದಿ ಎಲೆಕ್ಷನ್ ಗೇಮ್.

Thu Jan 12 , 2023
ದೇಶದಲ್ಲಿ ಈಗ ಚುನಾವಣಾ ಪರ್ವ ಕಾಲ.. ಹಲವು ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಹೊತ್ತಲ್ಲೇ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್‌ಗೆ ಸರ್ಜರಿ ಮಾಡಲು ಮುಂದಾಗಿದೆ. ಹಾಗಾದ್ರೆ ಕೇಂದ್ರದಲ್ಲಿ ಆಗೋದು ಸಂಪುಟ ವಿಸ್ತರಣೆಯೋ? ಪುನಾರಚನೆಯೋ? ಯಾರಿಗೆ ಕೊಕ್‌ ಅನ್ನೋದ್ರ ವಿವರ ಇಲ್ಲಿದೆ. ಕೇಂದ್ರ ಸಚಿವ ಸಂಪುಟ ಪುನಾ​ರಚನೆಗೆ ಪ್ಲ್ಯಾನ್ಈ  ವರ್ಷ ದೇಶದ ಸುಮಾರು 9 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೀತಿವೆ. ಕರ್ನಾಟಕ […]

Advertisement

Wordpress Social Share Plugin powered by Ultimatelysocial