ದೆಹಲಿ ಅತ್ಯಾಚಾರದ ಕುರಿತಾದ ಟ್ವೀಟ್​ ವಿವಾದಕ್ಕೊಳಗಾದ ಬಳಿಕ ರಾಹುಲ್​ ಗಾಂಧಿ!

ದೆಹಲಿ ಅತ್ಯಾಚಾರದ ಕುರಿತಾದ ಟ್ವೀಟ್​ ವಿವಾದಕ್ಕೊಳಗಾದ ಬಳಿಕ ರಾಹುಲ್​ ಗಾಂಧಿ ಬರೋಬ್ಬರಿ ಐದು ತಿಂಗಳುಗಳ ಕಾಲ ಟ್ವಿಟರ್​ನಲ್ಲಿ ಫಾಲೋವರ್ಸ್​ನ್ನು ಕಳೆದುಕೊಂಡಿದ್ದಾರೆ. ಆದರೆ ಇದೀಗ ರಾಹುಲ್ ಗಾಂಧಿಗೆ ವಾರಕ್ಕೆ ಸುಮಾರು 80 ಸಾವಿರ ದರದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.ತಮ್ಮ ಫಾಲೋವರ್ಸ್ ಸಂಖ್ಯೆ ಇಳಿಕೆಯಾದ ಬಗ್ಗೆ ಆಕ್ರೋಶ ಹೊರಹಾಕಿದ್ದ ರಾಹುಲ್​ ಗಾಂಧಿ ಇದು ಮೋದಿ ಸರ್ಕಾರದ ರಾಜಕೀಯ ಒತ್ತಡದ ಪರಿಣಾಮವಾಗಿದೆ ಎಂದು ಡಿಸೆಂಬರ್​ 27ರಂದು ಆರೋಪಿಸಿದ್ದರು. ಜನವರಿ 12ರಿಂದ ಆರು ವಾರಗಳಲ್ಲಿ ರಾಹುಲ್​ ಸತತವಾಗಿ ವಾರದಲ್ಲಿ 80 ಸಾವಿರ ಫಾಲೋವರ್ಸ್​ನ್ನು ಸಂಪಾದಿಸುತ್ತಿದ್ದಾರೆ. ಈ ಮೂಲಕ ರಾಹುಲ್​ ಗಾಂಧಿ ಪಾಲೋವರ್ಸ್​ ಸಂಖ್ಯೆ 20 ಮಿಲಿಯನ್​ ಆಗಿದೆ.ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ರಾಹುಲ್​ ಗಾಂಧಿ ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯ ಕುಟುಂಬದ ಫೋಟೋವನ್ನು ಪೋಸ್ಟ್ ಮಾಡಿದ ಬಳಿಕ ಅವರ ಖಾತೆಯು ವಿವಾದಕ್ಕೆ ಒಳಗಾಯಿತು. ಬಿಜೆಪಿ ಸದಸ್ಯರ ದೂರಿನ ಬಳಿಕ ಟ್ವಿಟರ್​ ಸುಮಾರು 8 ದಿನಗಳ ಕಾಲ ರಾಹುಲ್ ಖಾತೆಯನ್ನು ಲಾಕ್​ ಮಾಡಿತ್ತು. ತಮ್ಮ ಹೊಸ ಖಾತೆಯಲ್ಲಿ ಫಾಲೋವರ್​​ ಪಡೆಯುವುದನ್ನು ನಿಲ್ಲಿಸಲಾಗಿದೆ ಎಂದು ರಾಹುಲ್​ ಟ್ವಿಟರ್​ ಸಿಇಓ ಪರಾಗ್​ ಅಗರ್​ವಾಲ್​ಗೆ ದೂರು ನೀಡಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿರೋಧ ಪಕ್ಷದ ನಾಯಕರಿಗೂ ಹೃದಯ ಚುರುಕ್ ಅಂದಿತ್ತು.

Mon Mar 7 , 2022
    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಅರ್ಧಕರ್ಧ ಬಿಜೆಪಿ ಮುಖಂಡರು ಅವರ ನೆರಳಿನಲ್ಲೇ ಇದ್ದಾರೆ. ಬಿಎಸ್‌ವೈ ಮಾತಿಗೆ ಹೈಕಮಾಂಡ್ ಮಟ್ಟದಲ್ಲಿ ಬೆಲೆಯಿದೆಯೋ ಇಲ್ಲವೋ ಒಟ್ಟಿನಲ್ಲಿ ರಾಜ್ಯ ಬಿಜೆಪಿಗಂತೂ ಅವರು ಪ್ರಶ್ನಾತೀತ ನಾಯಕ.ಮುಖ್ಯಮಂತ್ರಿ ಹುದ್ದೆಗೆ ಕಣ್ಣೀರಿಟ್ಟು ರಾಜೀನಾಮೆ ನೀಡಿದಾಗ, ವಿರೋಧ ಪಕ್ಷದ ನಾಯಕರಿಗೂ ಹೃದಯ ಚುರುಕ್ ಅಂದಿತ್ತು. ಕಾಂಗ್ರೆಸ್ಸಿನವರು ವಾಜಪೇಯಿ, ಆಡ್ವಾಣಿ, ಜೋಶಿಯವರನ್ನು ಮೋದಿ ಮತ್ತು ಅಮಿತ್ ಶಾ ಸರಿಯಾಗಿ ನಡೆಸಿಕೊಂಡಿಲ್ಲ […]

Advertisement

Wordpress Social Share Plugin powered by Ultimatelysocial