ರಾಜಕೀಯ ಲಾಭಕ್ಕೆ ಜನರ ಜೀವನದೊಟ್ಟಿಗೆ ಆಟವಾಡಬೇಡಿ: ದುನಿಯಾ ವಿಜಯ್;

ನಿನ್ನೆಯಷ್ಟೆ ರಾಜ್ಯಸರ್ಕಾರವು ರಾಜ್ಯದಾದ್ಯಂತ ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಹೇರಿದೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರರಂಗದ ಹಲವರು ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಗಮನ ಹರಿಸಿದ ದುನಿಯಾ ವಿಜಯ್.

ಈ ಬಗ್ಗೆ ಮಾತನಾಡಿರುವ ನಟ ದುನಿಯಾ ವಿಜಯ್, ಲಾಕ್‌ಡೌನ್ ಉದ್ದೇಶ ಪ್ರಾಮಾಣಿಕವಾಗಿದ್ದರೆ ಆಗಲಿ, ರಾಜಕೀಯ ದುರುದ್ದೇಶದಿಂದ ಲಾಕ್‌ಡೌನ್ ಮಾಡುವುದಾದರೆ ಖಂಡಿತ ಬೇಡ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

”ಲಾಕ್‌ಡೌನ್‌ನಿಂದ ಸಾಮಾನ್ಯ ಜನರಿಗೆ ಬಹಳ ತೊಂದರೆಯಾಗುತ್ತದೆ. ಸಾಮಾನ್ಯರ ಮೇಲೆ ದೊಡ್ಡ ಹೊಡೆತವನ್ನು ಕೊರೊನಾ ಹೊಡೆದಿದೆ. ಸುಮಾರು ಜನಕ್ಕೆ ಸರ್ಕಾರದಿಂದ ಸಲ್ಲಬೇಕಾಗಿದ್ದಾದಂತಹಾ ಹಣವಾಗಲಿ, ಕನಿಷ್ಟ ಅಕ್ಕಿಯಾಗಲಿ ತಲುಪಿಲ್ಲ. ಕೊರೊನಾದಿಂದ, ಲಾಕ್‌ಡೌನ್‌ನಿಂದ ಹೊಡೆತ ತಿಂದಿರುವ ದೊಡ್ಡ ಸಂಖ್ಯೆಯ ಜನ ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ತುಂಬ ಜನ ಬಡಬಗ್ಗರಿಗೆ ಒದ್ದಾಟವಾಗಿದೆ ಈ ಸಮಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕವಾ? ಎಂಬುದು ಗಮನಿಸಬೇಕಾಗುತ್ತದೆ” ಎಂದಿದ್ದಾರೆ ದುನಿಯಾ ವಿಜಯ್.

” ಸರ್ಕಾರಗಳು ತಮ್ಮ ಅನುಕೂಲಕ್ಕಾಗಿ ಜನರನ್ನು ಬಲಿಪಶು ಮಾಡುವುದು ಬೇಡ. ನಿಮಗೆ ಬೇಕಾದಾಗ ಲಾಕ್‌ಡೌನ್, ಬೇಡದಿದ್ದಾಗ ಅನ್‌ಲಾಕ್ ಮಾಡುವುದು ಬೇಡ. ನಿಮ್ಮನ್ನು ಸ್ಥಿತಿವಂತರು, ಶ್ರೀಮಂತರು ಬೇರೆಯವರು ಇರುವುದಿಲ್ಲ. ರಾಜಕೀಯ ಲಾಭಕ್ಕಾಗಿ ಜನರ ಮೇಲೆ ಕಷ್ಟಗಳನ್ನು ಹೇರಬೇಡಿ” ಎಂದು ವಿಜಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

” ಕೂಲಿ ಮಾಡುವವರು, ಫ್ಯಾಕ್ಟರಿಗೆ ಹೋಗುವವರು ಸಾಕಷ್ಟಿದ್ದಾರೆ. 600 ಜನರಲ್ಲಿ ಮುನ್ನೂರು ಜನರನ್ನಷ್ಟೆ ಕೆಲಸಕ್ಕೆ ಕರೆಸಿಕೊಳ್ಳುತ್ತಾರೆ ಉಳಿದವರ ಕತೆ ಏನು, ಅವರನ್ನು ಸಾಕುವುದು ಯಾರು? ನಾವು ಅದು ಕೊಟ್ಟೆವು, ಇದು ಕೊಟ್ಟೆವು ಎಂದು ಸರ್ಕಾರಗಳು ಹೇಳುತ್ತಿವೆ, ಅದರಲ್ಲಿ 50% ಹೋಗಿದೆ, ಇನ್ನುಳಿದದ್ದು ತಲುಪಿಯೇ ಇಲ್ಲ. ಜನರಿಗೂ ಗೊತ್ತಿದೆ ಯಾರಿಗೆ ಎಷ್ಟು ಅನ್ಯಾಯ ಆಗಿದೆ ಎಂದು” ಎಂದರು ದುನಿಯಾ ವಿಜಯ್.

”ನಾನು ಯಾವ ಸರ್ಕಾರದ ಪರವೂ ಅಲ್ಲ. ಯಾವ ಸರ್ಕಾರವನ್ನು ನಾನು ಟೀಕೆ ಮಾಡುತ್ತಿಲ್ಲ, ಯಾವ ಪಕ್ಷದ ಪರವಾಗಿಯೂ ನಾನು ಇಲ್ಲ. ನಾನು ಜನಸಾಮಾನ್ಯರ ಪರವಾಗಿ ಅಷ್ಟೆ ಮಾತನಾಡುತ್ತಿದ್ದೇನೆ. ಸರ್ಕಾರಕ್ಕೆ ನನ್ನ ಮನವಿ ಇಷ್ಟೆ. ದಯವಿಟ್ಟು ಜನರ ಜೀವನದೊಂದಿಗೆ ಆಟವಾಡಬೇಡಿ” ಎಂದು ಕೈ ಮುಗಿದರು ದುನಿಯಾ ವಿಜಯ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಚಿತಾ ರಾಮ್ ಸಿನಿಮಾ 'ಏಕ್‌ ಲವ್ ಯಾ' ರಿಲೀಸ್ ಪೋಸ್ಟ್‌ಪೋನ್:ವೀಕೆಂಡ್ ಕರ್ಫ್ಯೂ ಎಫೆಕ್ಟ್;

Wed Jan 5 , 2022
ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಘೋಷಣೆ ಮಾಡುತ್ತಿದ್ದಂತೆ ಕನ್ನಡ ಸಿನಿಮಾಗಳು ಒಂದೊಂದಾಗೇ ಸೈಲೆಂಟ್ ಮೋಡ್‌ಗೆ ಜಾರಿದೆ. ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದ ಸಿನಿಮಾಗಳೆಲ್ಲಾ ರಿಲೀಸ್ ಡೇಟ್ ಅನ್ನು ಮುಂದೂಡಲು ಆಲೋಚನೆ ಮಾಡುತ್ತಿವೆ. ಹೊಸ ವರ್ಷದ ಆರಂಭದಲ್ಲಿ ಕನ್ನಡದ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗದೇ ಹೋದ್ರೂ, ಜನವರಿ ಕೊನೆಯ ಎರಡು ವಾರಗಳಲ್ಲಿ ಕನ್ನಡದ ಎರಡು ಪ್ರಮುಖ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿದ್ದವು. ‘ಏಕ್ ಲವ್ ಯಾ’ ಸಿನಿಮಾದಲ್ಲೂ ರಚಿತಾ ಮದುವೆ ವಿಚಾರ ಚರ್ಚೆಯಾಗುತ್ತಿದೆ. […]

Advertisement

Wordpress Social Share Plugin powered by Ultimatelysocial