ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರ ಆರತಕ್ಷತೆ ನಡೆಯಲಿದೆ.

ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಹೊಂದಿರುವ ಈ ಕಲಾವಿದರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿ ಬಹಳ ಸಮಯ ಕಳೆದಿದೆ. ಈಗ ಅವರಿಬ್ಬರ ಸಂಬಂಧವು ಮದುವೆ ಹಂತಕ್ಕೆ ಬಂದಿದೆ. ಇಬ್ಬರ ಕುಟುಂಬದಲ್ಲೂ ಪ್ರೀತಿಗೆ ಸಮ್ಮತಿ ಸಿಕ್ಕಿದ್ದರಿಂದ ಶೀಘ್ರವೇ ವಿವಾಹ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆಲಿಯಾ ಭಟ್​ ಅವರು ಪ್ಯಾನ್​ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವಾಗಲೇ ಅವರು ಮದುವೆ ಆಗಲು ನಿರ್ಧರಿಸಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ರಣಬೀರ್​ ಕಪೂರ್​ ಕುಟುಂಬದವರು ಈ ಶಾದಿ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಆಲಿಯಾ ಭಟ್​ ಕುಟುಂಬದ ಕೆಲವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಆಗಿದೆ. ಆಲಿಯಾ ಭಟ್​-ರಣಬೀರ್​ ಕಪೂರ್​ ಮದುವೆ ಅದ್ದೂರಿಯಾಗಿ ನಡೆಯಲಿದ್ದು, ರಿಸೆಪ್ಷನ್​ಗೆ ಭಾರತೀಯ ಚಿತ್ರರಂಗದ ಅನೇಕರಿಗೆ ಆಹ್ವಾನ ನೀಡಲಾಗಿದೆ. ಹಾಗಾದರೆ ರಣಬೀರ್​ ಕಪೂರ್​ ಅವರ ಮಾಜಿ ಪ್ರೇಯಸಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರನ್ನೂ ಆಹ್ವಾನಿಸಲಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಮುಂಬೈನಲ್ಲಿರುವ ಐಷಾರಾಮಿ ಹೋಟೆಲ್​ನಲ್ಲಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಅನೇಕರನ್ನು ಆಹ್ವಾನಿಸಲಾಗಿದೆ. ರಣಬೀರ್​ ಕಪೂರ್​ ಅವರ ಮಾಜಿ ಪ್ರೇಯಸಿಯರಾದ ಕತ್ರಿನಾ ಕೈಫ್​ ಮತ್ತು ದೀಪಿಕಾ ಪಡುಕೋಣೆ ಕೂಡ ಈ ರಿಸೆಪ್ಷನ್​ಗೆ ಬರುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಒಂದು ಕಾಲದಲ್ಲಿ ರಣಬೀರ್​ ಕಪೂರ್​ ಅವರು ದೀಪಿಕಾ ಪಡುಕೋಣೆ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಅವರಿಬ್ಬರ ಲವ್​ ತುಂಬ ಗಾಢವಾಗಿತ್ತಾದರೂ ಅದು ಹೆಚ್ಚು ದಿನ ಉಳಿಯಲಿಲ್ಲ. ಬ್ರೇಕಪ್​ನಲ್ಲಿ ಆ ಸಂಬಂಧ ಅಂತ್ಯವಾಯ್ತು. ಅದೇ ರೀತಿ ಕತ್ರಿನಾ ಕೈಫ್​ ಅವರೊಂದಿಗೂ ರಣಬೀರ್​ ಕಪೂರ್ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರು. ಬಳಿಕ ಅವರಿಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಬ್ರೇಕಪ್​ ಆಯಿತು. ತಮ್ಮ ಈ ಇಬ್ಬರು ಮಾಜಿ ಪ್ರೇಯಸಿಯರನ್ನು ಈಗ ರಣಬೀರ್​ ಕಪೂರ್​ ಅವರು ಮದುವೆಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.

‘ಹಳೇ ವಿಚಾರವನ್ನು ಮರೆತು ಜೀವನದಲ್ಲಿ ಅವರೆಲ್ಲರೂ ಮುಂದೆ ಸಾಗಿದ್ದಾರೆ. ಕತ್ರಿನಾ ಕೈಫ್​ ಮತ್ತು ದೀಪಿಕಾ ಪಡುಕೋಣೆ ಅವರಿಗೆ ಮದುವೆ ಆಗಿದೆ. ಆಲಿಯಾ ಭಟ್​ ಜೊತೆ ಕತ್ರಿನಾ ಕೈಫ್​ ಅವರು ‘ಜೀ ಲೇ ಝರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್​ ಜೊತೆ ರಣಬೀರ್​ ಕಪೂರ್ ಅವರಿಗೆ ಗೆಳೆತನ ಇದೆ. ಹಾಗಾಗಿ ರಣಬೀರ್​-ಆಲಿಯಾ ಜೋಡಿಯ ರಿಸೆಪ್ಷನ್​ಗೆ ಅವರೆಲ್ಲರೂ ಬಂದರೆ ಅಚ್ಚರಿ ಏನಿಲ್ಲ’ ಎಂಬ ಮಾತುಗಳು ಬಿ-ಟೌನ್​ ಅಂಗಳದಲ್ಲಿ ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಏ.15ರಂದು ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದ್ದೂರಿಯಾಗಿ ಮದುವೆ ಆಗಲು ಈ ಜೋಡಿ ನಿರ್ಧರಿಸಿದೆ. ಮೆಹಂದಿ, ಸಂಗೀತ್​ ಸಮಾರಂಭ ಮುಂತಾದ್ದನ್ನು ಭರ್ಜರಿಯಾಗಿ ಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆಲಿಯಾ ಭಟ್​ ಅವರ ಬಾಂದ್ರಾದ ಮನೆಯಲ್ಲಿ ಏ.13ರಂದು ಮೆಹಂದಿ ಶಾಸ್ತ್ರ ನೆರವೇರಲಿದೆ. ಅದೇ ದಿನ ರಣಬೀರ್​ ಕಪೂರ್​ ಮನೆಯಲ್ಲಿ ಮೆಹಂದಿ ಶಾಸ್ತ್ರ ನಡೆಯಲಿದೆ. ಏ.14ರಂದು ಹಳದಿ ಹಾಗೂ ಸಂಗೀತ್​ ಸಮಾರಂಭ ಇರಲಿದೆ. ಏ.15ರಂದು ವಿಜೃಂಭಣೆಯಿಂದ ಮದುವೆ ನಡೆಯಲಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀಲಂಕಾದಲ್ಲಿ ಆಹಾರದ ಬೆಲೆಗಳು ಅಸಹನೀಯ ಮಟ್ಟಕ್ಕೆ ಏರಿದೆ!

Sun Apr 10 , 2022
ಶ್ರೀಲಂಕಾದಲ್ಲಿ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ದ್ವೀಪ ರಾಷ್ಟ್ರದಲ್ಲಿ ಅಕ್ಕಿಯ ಬೆಲೆ “ಅಸಹನೀಯ ಮಟ್ಟಕ್ಕೆ” ಏರಿದೆ. ಅಕ್ಕಿ ಬೆಲೆ ಅಸಹನೀಯ ಮಟ್ಟಕ್ಕೆ ಏರಿದೆ ಎಂದು ದ್ವೀಪ ರಾಷ್ಟ್ರದ ಗ್ರಾಹಕರು ಹೇಳಿದ್ದಾರೆ. ಸಾಮಾನ್ಯ ಮಾರುಕಟ್ಟೆಯಲ್ಲಿ ಒಂದು ಕಿಲೋ ಅಕ್ಕಿಯ ಕನಿಷ್ಠ ಬೆಲೆ ಈಗ 200-240 ರೂಪಾಯಿಗಳನ್ನು ಮೀರಿದೆ ಎಂದು ಕೊಲಂಬೊ ಪೇಜ್ ವರದಿ ಮಾಡಿದೆ. ಆಹಾರ ಪದಾರ್ಥಗಳು ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಆಮದನ್ನು ನಿರ್ಬಂಧಿಸಲು ಸರ್ಕಾರವನ್ನು ಒತ್ತಾಯಿಸಲಾಗಿದೆ, ಇದು ಹಾಲಿನ […]

Advertisement

Wordpress Social Share Plugin powered by Ultimatelysocial