NATIONAL CRUSH:ಮುಂಬೈಗೆ ಶಿಫ್ಟ್​ ಆದ ನಟಿ ರಶ್ಮಿಕಾ ಮಂದಣ್ಣ;

ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಅವರ ಪುಷ್ಪಾ ಸಿನಿಮಾ ಸೂಪರ್​ ಹಿಟ್​ ಆದ ನಂತರ ಮಾರ್ಕೆಟ್​ ಹೆಚ್ಚಿಸಿಕೊಂಡಿರುವ ರಶ್ಮಿಕಾ ಸಂಭಾವನೆ ಜಾಸ್ತಿ ಮಾಡಿಕೊಂಡಿರುವ ಬಗ್ಗೆಯೂ ವರದಿ ಆಗಿದೆ. ಈ ನಡುವೆ ಬಾಲಿವುಡ್​ ಸಿನಿಮಾಗಳ ಕಡೆಗೆ ರಶ್ಮಿಕಾ ಮಂದಣ್ಣ ಹೆಚ್ಚು ಗಮನ ನೀಡುತ್ತಿದ್ದಾರೆ.

ಹಾಗಾಗಿ ಮುಂಬೈನಲ್ಲಿ ಅವರ ವಾಸ್ತವ್ಯ ಹೆಚ್ಚಿದೆ. ಆದ್ದರಿಂದ ಈಗ ಅವರು ಮುಂಬೈಗೆ ಶಿಪ್ಟ್​ ಆಗಿದ್ದಾರೆ. ಅಲ್ಲಿ ಹೊಸ ಮನೆಗೆ ತೆರಳಿದ್ದಾರೆ. ಹೊಸ ಮನೆಗೆ ತೆರಳಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ತಮ್ಮ ನೆಚ್ಚಿನ ನಟಿಯ ಬೆಳವಣಿಗೆಯನ್ನು ಕಂಡು ಫ್ಯಾನ್ಸ್​ ಖುಷಿಯಾಗುತ್ತಿದ್ದಾರೆ. ರಶ್ಮಿಕಾ ನಟನೆಯ ಹೊಸ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ. ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅದು ಅವರ ಮೊದಲ ಬಾಲಿವುಡ್​ ಸಿನಿಮಾ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಚಿತ್ರದಲ್ಲಿ ರಶ್ಮಿಕಾ ತೆರೆಹಂಚಿಕೊಳ್ಳುತ್ತಿದ್ದಾರೆ. ಹಿಂದಿ ಚಿತ್ರರಂಗದಿಂದ ಅವರಿಗೆ ಅನೇಕ ಹೊಸ ಹೊಸ ಆಫರ್​ಗಳು ಹರಿದುಬರುತ್ತಿವೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್​ ಸಿನಿಮಾಗಳ ಕೆಲಸದ ಸಲುವಾಗಿ ಮುಂಬೈನಲ್ಲೇ ಹೆಚ್ಚು ಸಮಯ ಕಳೆಯಬೇಕಾಗುತ್ತಿದೆ. ಹಾಗಾಗಿ ಅವರು ಅಲ್ಲಿಯೇ ಮನೆ ಕೊಂಡುಕೊಂಡಿದ್ದಾರೆ.

2021ರ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿ ಫ್ಲಾಟ್​ ಖರೀದಿಸಿದ್ದರ ಬಗ್ಗೆ ವರದಿ ಆಗಿತ್ತು. ಆದರೆ ಈಗ ಅವರು ಮತ್ತೆ ಮನೆ ಬದಲಾಯಿಸಿದ್ದಾರೆ. ಮನೆ ಬದಲಿಸುವಾಗ ವಸ್ತುಗಳನ್ನು ಸಾಗಿಸುವುದು ತುಂಬ ಕಷ್ಟದ ಕೆಲಸ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇನ್​​ಸ್ಟಾಗ್ರಾಮ್​ನಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಅವರು ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದರು. ಸ್ವತಃ ಅವರೇ ಮನೆಯ ವಸ್ತುಗಳನ್ನು ಪ್ಯಾಕಿಂಗ್​ ಮಾಡಿದ್ದಾರೆ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು ರಶ್ಮಿಕಾಗೆ ಇಷ್ಟವಂತೆ. ಆದರೆ ವಸ್ತುಗಳನ್ನು ಶಿಫ್ಟ್ ಮಾಡುವುದು ಬಲು ಕಷ್ಟ ಎಂದು ಅವರು ಹೇಳಿದ್ದಾರೆ. ​

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಭುದೇವ:ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಡ್ತಿದ್ದಾರೆ!!;

Tue Feb 8 , 2022
ಕನ್ನಡದವರೇ ಆದರೂ ತಮಿಳು ಮತ್ತು ಹಿಂದಿಯಲ್ಲಿ ಸ್ಟಾರ್ ನಿರ್ದೇಶಕನಾಗಿ, ಕೊರಿಯೋಗ್ರಫರ್ ಆಗಿ ವಿಜೃಂಭಿಸ್ತಿರೋ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ. ಈ ವಿಚಾರ ಈ ಹಿಂದೆಯೇ ಬಹಿರಂಗ ವಾಗಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಈ ತನಕ‌ ನಿರ್ಮಾಣ ಮಾಡಿರುವ ಚಿತ್ರಗಳು ಸಾಕಷ್ಟು ಹೆಸರು‌ ಮಾಡಿದೆ. ಈಗ ಈ‌ ಪ್ರತಿಷ್ಠಿತ ಸಂಸ್ಥೆಯ ಮೂಲಕ ಪ್ಯಾನ್ ಇಂಡಿಯಾ ಸಿನಿಮಾವೊಂದು ನಿರ್ಮಾಣವಾಗಲಿದೆ. […]

Advertisement

Wordpress Social Share Plugin powered by Ultimatelysocial