TATA:ಬರಲಿದೆ ಭಾರತದ ಪ್ರಸಿದ್ಧ ಉದ್ಯಮಿ ರತನ್ ಟಾಟಾ ಆತ್ಮಕಥೆ;

ನವದೆಹಲಿ : ಭಾರತದ ಪ್ರಸಿದ್ಧ ಉದ್ಯಮಿ ರತನ್ ಟಾಟಾ ಅವರ ಆತ್ಮಕಥೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಆತ್ಮಕಥೆಯನ್ನು ಹಾರ್ಪರ್ ಕೋಲಿನ್ಸ್ ಸಂಸ್ಥೆ ಪ್ರಕಟಿಸಲಿದ್ದು, ಬರೋಬ್ಬರಿ 2 ಕೋಟಿ ರೂ.ಗೆ ಜಾಗತಿಕ ಹಕ್ಕನ್ನು ಖರೀದಿಸಿದೆ.

ರತನ್ ಎನ್. ಟಾಟಾ: ದಿ ಅಥರೈಸ್ಡ್ ಬಯೋಗ್ರಫಿ ಎಂಬ ಶೀರ್ಷಿಕೆಯ ಪುಸ್ತಕವನ್ನು ನಿವೃತ್ತ ಐಎಎಸ್ ಅಧಿಕಾರಿ ಥಾಮಸ್ ಮ್ಯಾಥ್ಯೂ ಬರೆಯಲಿದ್ದಾರೆ. ಈ ವರ್ಷ ನವೆಂಬರ್,

ತಿಂಗಳಿನಲ್ಲಿ ಪುಸ್ತಕ ಬಿಡುಗಡೆಯಾಗಲಿದೆ ಎಂದು ಬ್ರಿಟಿಷ್ ಪಬ್ಲಿಷಿಂಗ್ ಹೌಸ್ ತಿಳಿಸಿದೆ. ಲೇಖಕ ಥಾಮಸ್ ಮ್ಯಾಥ್ಯೂ ಅವರಿಗೆ ರಥನ್ ಟಾಟಾ ಅವರು ಈ ಮೊದಲೇ ತಮ್ಮ ಆತ್ಮಕಥೆಯನ್ನು ಬರೆಯಲು ಅನುಮತಿ ನೀಡಿದ್ದರು. ಹೀಗಾಗಿ ಟಾಟಾ ಅವರ ಜೀವನದ ಹಲವು ಮಾಹಿತಿಗಳನ್ನು ಥಾಮಸ್‌ಗೆ ನೀಡಿದ್ದು, ಈಗಾಗಲೇ ಮ್ಯಾಥ್ಯೂ ಕಥೆಯನ್ನು ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಆತ್ಮಕಥೆಯಲ್ಲಿ ಏನೇನು ಇರಲಿದೆ ?
84 ವರ್ಷ ವಯಸ್ಸಿನ ಟಾಟಾ ಅವರ ಬಾಲ್ಯ, ಕಾಲೇಜು ಜೀವನದ ಕಥೆಗಳೊಂದಿಗೆ, ಮುಖ್ಯ ಘಟನೆಗಳಾದ ಟಾಟಾದ ನ್ಯಾನೋ ಯೋಜನೆ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಪದಚ್ಯುತಿಗೊಳಿಸಿದ ಘಟನೆ, ಹಾಗೂ ಟಾಟಾ ಸ್ಟೀಲ್ ಲಿಮಿಟೆಡ್‌ನ ಕೋರಸ್‌ಅನ್ನು ಸ್ವಾಧೀನಗೊಳಿಸಿದ ಘಟನೆಯ ಬಗೆಗಿನ ವಿವರವಾದ ಮಾಹಿತಿಯನ್ನು ಆತ್ಮಕಥೆಯಲ್ಲಿ ನೋಡಬಹುದು ಎನ್ನಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್ ಕುಮಾರ್ ಪಾಲ್ಗೊಳ್ಳದೇ ಇರಲು ಕಾರಣವೇನು?

Tue Jan 11 , 2022
ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹಲವು ಸಂಘಟನೆಗಳು ಮೇಕೆದಾಟು ಯೋಜನೆಗೆ ಒತ್ತಾಯಿಸಿ ಮೇಕೆದಾಟಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದು, ಪಾದಯಾತ್ರೆಯು ನಿನ್ನೆ (ಜನವರಿ 09) ವಿದ್ಯುಕ್ತವಾಗಿ ಚಾಲನೆಗೊಂಡಿದೆ. ಪಾದಯಾತ್ರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಪಾದಯಾತ್ರೆಗೆ ಬೆಂಬಲ ಸೂಚಿಸಿದೆ. ಶಿವಣ್ಣ ಯಾವುದೇ ಕಾರಣಕ್ಕೂ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಾರದು ಕನ್ನಡ ಚಿತ್ರರಂಗದ ಮುಖಂಡ ಶಿವರಾಜ್ ಕುಮಾರ್ ಅವರು ಮೊದಲ ದಿನವೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಶಿವರಾಜ್ […]

Advertisement

Wordpress Social Share Plugin powered by Ultimatelysocial