ನನಗೆ ಈಗ್ಲೇ ಮದುವೆ ಆಗಲು ಇಷ್ಟವಿಲ್ಲ, ಆದ್ರೆ ನನ್ನ ಗರ್ಲ್‌ಫ್ರೆಂಡ್ ಮದ್ವೆಗೆ ಒತ್ತಾಯಿಸುತ್ತಿದ್ದಾಳೆ.

 

ನಾನು 32 ವರ್ಷ ವಯಸ್ಸಿನ ಅವಿವಾಹಿತ ವ್ಯಕ್ತಿ. ನಾನು ನಾಲ್ಕು ವರ್ಷಗಳಿಂದ ಓರ್ವ ಹುಡುಗಿಯ ಜೊತೆ ಸಂಬಂಧದಲ್ಲಿದ್ದೇನೆ. ನಮ್ಮ ಪ್ರೀತಿ ಜೀವನ ತುಂಬಾ ಚೆನ್ನಾಗಿ ನಡೆಯುತ್ತಿದೆ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ನನ್ನ ಗೆಳತಿ ನನ್ನ ಮುಂದೆ ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದಳು.ನನಗೆ 35 ವರ್ಷವಾದ ನಂತರವೇ ಮದುವೆಯಾಗುವುದಾಗಿ ಡೇಟಿಂಗ್ ಮಾಡುವ ಮೊದಲೇ ಹೇಳಿದ್ದೆ. ಆದರೂ ಈಗಲೇ ಮದುವೆಯಾಗುವಂತೆ ಹಠ ಮಾಡುತ್ತಿದ್ದಾಳೆ. ಆದರೂ ನಾನು ಆರ್ಥಿಕವಾಗಿ ಸೆಟಲ್ ಆಗಿದ್ದರೂ, ಮಾನಸಿಕವಾಗಿ ನಾನು ಇನ್ನೂ ಮದುವೆಗೆ ಸಂಪೂರ್ಣವಾಗಿ ಸಿದ್ಧವಾಗಿಲ್ಲ.ನಾನು ಆಕೆಗೆ ಕೆಲವು ವರ್ಷಗಳ ನಂತರ ಮದುವೆಯಾಗುತ್ತೇನೆ ಎಂದು ಹೇಳಿದಾಗ ಅವಳು ತುಂಬಾ ಕೋಪಗೊಂಡಳು. ಆಕೆಯನ್ನು ಮದುವೆಯಾಗಲು ನಾನು ಒಪ್ಪದಿದ್ದರೆ, ಆಕೆಯ ಹೆತ್ತವರು ಆಯ್ಕೆ ಮಾಡಿದ ಯಾವುದೇ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಅವಳು ನನಗೆ ಎಚ್ಚರಿಕೆ ನೀಡಿದ್ದಾಳೆ.ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ನಾನು ಅವಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಈಗ ನಾನು ಅವಳನ್ನು ಮದುವೆಯಾಗಲು ಬಯಸುವುದಿಲ್ಲ. ಮದುವೆಯ ಬಂಧನದಲ್ಲಿ ಸಿಲುಕಲು ನನಗೆ ಇನ್ನೂ ಸ್ವಲ್ಪ ಸಮಯ ಬೇಕು.ಅನೇಕ ಜನರು ಬದಲಾವಣೆಯನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಫೋರ್ಟಿಸ್ ಹೆಲ್ತ್‌ಕೇರ್‌ನ ಮಾನಸಿಕ ಆರೋಗ್ಯ ಮತ್ತು ನಡವಳಿಕೆ ವಿಜ್ಞಾನ ವಿಭಾಗದ ಮುಖ್ಯಸ್ಥೆ ಕಾಮ್ನಾ ಛಿಬ್ಬರ್ ಹೇಳುತ್ತಾರೆ. ಅವರಲ್ಲಿ ನೀವೂ ಒಬ್ಬರು.ಆದರೆ ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುವಾಗ ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ಸರಿಹೊಂದಿಸುವುದು ಸಹ ಅಗತ್ಯವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನೀವು ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ನೀವು ಹೇಳಿದ್ದೀರಿ, ಹಾಗಿರುವಾಗ ನೀವು ಬಯಸದಿದ್ದರೂ ಯೋಜನೆಯಲ್ಲಿ ಬದಲಾವಣೆಗಳು ಆಗಿಯೇ ಆಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಜ್ರಕಾಯ ಬೆಡಗಿಯ ಹೊಸ ಲುಕ್.

Fri Feb 24 , 2023
ಸ್ಯಾಂಡಲ್​ವುಡ್​ ಸುಂದರಿ ನಭಾ ನಟೇಶ್ ಮತ್ತೆ ಆಯಕ್ಟಿವ್ ಆಗಿದ್ದಾರೆ.ಹೊಸ ಹೊಸ ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.ಭಜರಂಗಿ ಡೈರೆಕ್ಟರ್ ಎ. ಹರ್ಷ ನಿರ್ದೇಶನದ ವಜ್ರಕಾಯ ಚಿತ್ರದ ಮೂಲಕ ನಭಾ ನಟೇಶ್ ಕನ್ನಡಿಗರ ಹೃದಯ ಕದ್ದರು.ಮೊದಲ ಸಿನಿಮಾದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಜೊತೆಗೆ ಅಭಿನಯಿಸಿದ್ದರುವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಕದ್ದರು ನಭಾ ನಟೇಶ್.ವಜ್ರಕಾಯ ಸಿನಿಮಾ ಆದ್ಮೇಲೆ ಕನ್ನಡದ ಇನ್ನೂ ಒಂದು ಚಿತ್ರ ಒಪ್ಪಿಕೊಂಡಿದ್ದರು. ಸುಮಂತ್ […]

Advertisement

Wordpress Social Share Plugin powered by Ultimatelysocial