ಪಂತ್‌ ಜತೆಯೇ ಇದ್ದಾರಾ ಊರ್ವಶಿ?

ಕಾರು ಅಪಘಾತದಿಂದಾಗಿ ಗಂಭೀರ ಗಾಯಾಳುವಾಗಿರುವ ರಿಷಭ್‌ ಪಂತ್‌  ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಯಿಂದ ಮಹಾರಾಷ್ಟ್ರದ ಮುಂಬೈನ ಕೋಕಿಲಬೆನ್‌ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿದೆ. ಅವರ ಗರ್ಲ್‌ ಫ್ರೆಂಡ್‌ ಎಂದು ಹೇಳಿಕೊಳ್ಳುತ್ತಿರುವ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಕೂಡ ಪಂತ್‌ ಜತೆಯೇ ಇದ್ದಾರೆಯೇ ಎನ್ನುವ ಅನುಮಾನವೊಂದು ಇದೀಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.ಅದಕ್ಕೆ ಕಾರಣ ಊರ್ವಶಿ ಅವರ ಆ ಒಂದು ಇನ್‌ಸ್ಟಾಗ್ರಾಂ ಸ್ಟೋರಿ.‌ಊರ್ವಶಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಪಂತ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಕೋಕಿಲಬೆನ್‌ ಆಸ್ಪತ್ರೆಯದ್ದೇ ಫೋಟೋ ಅದಾಗಿದೆ. ತಾವು ತಮ್ಮ ಪ್ರಿಯತಮ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಬಳಿಯೇ ಇದ್ದೇನೆ ಎಂದು ಅಭಿಮಾನಿಗಳಿಗೆ ತೋರಿಸುವುದಕ್ಕಾಗಿಯೇ ಹಂಚಿಕೊಂಡಂತಿದೆ ಆ ಫೋಟೋ.ಈ ಫೋಟೋ ನೋಡಿರುವ ಊರ್ವಶಿ ಹಾಗೂ ಪಂತ್‌ ಅಭಿಮಾನಿಗಳು ಹಲವು ರೀತಿಯ ಚರ್ಚೆಗಳನ್ನು ಆರಂಭಿಸಿದ್ದಾರೆ. ‘ಜನರ ಗಮನ ಸೆಳೆಯುವುದಕ್ಕಾಗಿಯೇ ಇಂತಹ ನಾಟಕಗಳನ್ನು ಊರ್ವಶಿ ಮಾಡುತ್ತಿದ್ದಾರೆ’ ಎಂದು ಕೆಲವರು ಹೇಳಿದರೆ, ‘ನಿಜ ಪ್ರೀತಿಯೆಂದರೆ ಹೀಗೆ. ಪ್ರಿಯತಮ ಇರುವಲ್ಲಿಗೆ ನಿಮ್ಮನ್ನು ಸೆಳೆದೇ ಸೆಳೆಯುತ್ತದೆ’ ಎಂದು ಹಲವರು ವ್ಯಾಖ್ಯಾನಿಸಲಾರಂಭಿಸಿದ್ದಾರೆ.ಪಂತ್‌ಗೆ ಅಪಘಾತವಾಗಿ, ಆಸ್ಪತ್ರೆ ಸೇರಿದ ತಕ್ಷಣ ಇನ್‌ಸ್ಟಾಗ್ರಾಂನಲ್ಲಿ ಊರ್ವಶಿ ಪೋಸ್ಟ್‌ ಹಾಕಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ದಂಪತಿ

Fri Jan 6 , 2023
ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli ) ದಂಪತಿ ಇತ್ತೀಚೆಗೆ ಉತ್ತರಾಖಂಡದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಹಿತಾ ಪ್ರೇಮಾನಂದಜೀ ಅವರ ಆಶ್ರಮದಲ್ಲಿ ದಂಪತಿ ತಮ್ಮ ಮಗಳು ವಾಮಿಕಾ ಅವರೊಂದಿಗೆ ಆಶೀರ್ವಾದವನ್ನು ಪಡೆಯುತ್ತಿರುವ ವಿಡಿಯೊ ವೈರಲ್‌ ಆಗಿದೆ.ಈ ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ʻ’ದೇವರು ಈ ಕುಟುಂಬವನ್ನು ಆಶೀರ್ವದಿಸಲಿ’ ಎಂದು ಬರೆದಿದ್ದಾರೆ. ‘ವಾಮಿಕಾ ತುಂಬಾ ಮುದ್ದಾಗಿದ್ದಾಳೆ’ ಎಂದು ಮತ್ತೊಬ್ಬರು ಕಮೆಂಟ್‌ […]

Advertisement

Wordpress Social Share Plugin powered by Ultimatelysocial