ಸಿನಿಲೋಕಕ್ಕೆ ಸಚಿನ್ ಚೆಲುವರಾಯಸ್ವಾಮಿ ರೀ-ಎಂಟ್ರಿ… ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಅದ್ದೂರಿ ಕಂಬ್ಯಾಕ್

ಹೋಗುಮೆ ಹೋಗುಮೆ ಎಲ್ಲರ ಒಂದಪ್ಪ ಕದ್ದು ಹೋಗುಮೆ….ಇದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿಂಗಿಂಗ್…ವಿ.ನಾಗೇಂದ್ರ ಪ್ರಸಾದ್ ಅಂದ ಚೆಂದದ ಪದಗಳನ್ನು ಪೊಣಿಸಿ ಬರೆದ ಅದ್ಭುತ ಸಾಹಿತ್ಯದ ಈ ಗಾನಲಹರಿಗೆ ಧ್ವನಿಯಾದವರು ನವೀನ್ ಸಜ್ಜು. ಇದೇ ಹಾಡಿನಲ್ಲಿ ಲವರ್ ಬಾಯ್ ಲುಕ್ ನಲ್ಲಿ, ಅದ್ಭುತ ನಟನೆ ಮೂಲಕ ಗಮನಸೆಳೆದವರು ಸಚಿನ್ ಚೆಲುವರಾಯಸ್ವಾಮಿ.ಮಾಜಿ ಸಚಿವ ಚೆಲುವರಾಯಸ್ವಾಮಿ ಸುಪುತ್ರ ಸಚಿನ್, ಕಳೆದ ಐದು ವರ್ಷದ ಹಿಂದೆ ಹ್ಯಾಪಿ ಬರ್ತ್​​ಡೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ಸಚಿನ್ ಒಂದಷ್ಟು ವರ್ಷಗಳ ಕಾಲ ಸಿನಿಮಾ ಲೋಕದಿಂದ ದೂರ ಸರಿದಿದ್ದರು. ಇದೀಗ ಬೆಂಗಳೂರು ಬಾಯ್ಸ್ ಸಿನಿಮಾ ಮೂಲಕ ಸಚಿನ್ ಮತ್ತೆ ಅದ್ಧೂರಿಯಾಗಿ ಕಂಬ್ಯಾಕ್ ಆಗಿದ್ದಾರೆ.ಹೊಸ ಉತ್ಸಾಹ, ಹುಮ್ಮಸ್ಸಿನೊಂದಿಗೆ ಸಚಿನ್, ಫೀಲ್ಡ್​​​ಗೆ​​​​​​​​​​​​ ಇಳಿದಿದ್ದು, ಈ ಬಾರಿ ಭರ್ಜರಿ ತಯಾರಿ ಮಾಡಿಕೊಂಡು ಎಂಟ್ರಿ‌ ಕೊಟ್ಟಿದ್ದಾರೆ. ಮಾಸ್ ಎಲಿಮೆಂಟ್ಸ್​​​​​​ ಕಥೆ ಆಧರಿಸಿರುವ ‘ಬೆಂಗಳೂರು ಬಾಯ್ಸ್​​​​​​’ ಸಿನಿಮಾಗಾಗಿ, ಆ್ಯಕ್ಟಿಂಗ್, ಡ್ಯಾನ್ಸಿಂಗ್ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನ ಹರಿಸಿದ್ದಾರೆ.ಮಲ್ಟಿಸ್ಟಾರ್ ಚಿತ್ರವಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಗುಟ್ಟುಬಿಟ್ಟು ಕೊಡದ ಸಚಿನ್, ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಮನರಂಜನೆಯ ಚಿತ್ರವಾಗಿದ್ದು, ಕಾಲೇಜು, ಎಮೋಷನ್‌, ಪ್ರೇಮ ಕತೆ ಹೀಗೆ ಎಲ್ಲ ಅಂಶಗಳೂ ಸಿನಿಮಾದಲ್ಲಿವೆ ಎನ್ನುತ್ತಾರೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಮೇಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸಾಲ ಪಾವತಿಸುತ್ತಿಲ್ಲ.

Tue May 10 , 2022
  ಬೆಳಗಾವಿ: ಸಹಕಾರ ಕ್ಷೇತ್ರದಲ್ಲಿ ಕೇವಲ ರಮೇಶ್​ ಜಾರಕಿಹೊಳಿಯವರದ್ದು ಮಾತ್ರ ಸಾಲ ಇಲ್ಲ, ಲಕ್ಷ್ಮೀ ಹೆಬ್ಬಾಳ್ಕರ್, ಬಂಡೆಪ್ಪ ಕಾಶಂಪೂರ ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ಅವರಿಗೆಲ್ಲ ನೋಟಿಸ್​ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್​ ಹೇಳಿದರು. ಬೆಳಗಾವಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ರಮೇಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ 25 ಸಕ್ಕರೆ ಕಾರ್ಖಾನೆ ಮಾಲೀಕರು ಸಾಲ ಪಡೆದಿದ್ದಾರೆ. ಆದರೆ, ಅವರು ಮರು ಪಾವತಿಸಿಲ್ಲ. ‌6 ಸಾವಿರ ಕೋಟಿ […]

Advertisement

Wordpress Social Share Plugin powered by Ultimatelysocial