ಸದನದಲ್ಲಿ ‘ಕಾಂಗ್ರೆಸ್‌ ಗದ್ದಲ’ ಹಿನ್ನಲೆ: ಮಾ.4ಕ್ಕೆ ‘ವಿಧಾನಸಭೆ ಕಲಾಪ’ ಮುಂದೂಡಿಕೆ |

 

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದಂತ ರಾಜ್ಯ ಬಜೆಟ್ ಮಂಡನೆಗೆ ( Karnataka Budget 2022 ) ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ಗದ್ದಲದ ನಡುವೆಯೂ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಮಾರ್ಚ್ 4ಕ್ಕೆ ರಾಜ್ಯ ಬಜೆಟ್ ಮಂಡಿಸೋದಾಗಿ ಘೋಷಣೆ ಮಾಡಿದ್ದರು.ಈ ಬಳಿಕ ವಿಧಾನಸಭೆಯ ಕಲಾಪವನ್ನು ಮಾರ್ಚ್ 4ರವರೆಗೆ ಮುಂದೂಡಿಕೆ ಮಾಡಲಾಗಿದೆ.ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ಕೈವಾಡವಿದೆ ಎಂಬುದಾಗಿ ಆರೋಪಿಸಿದಂತ ಬಿಜೆಪಿ ನಾಯಕರ ವಿರುದ್ಧ ಸದನದಲ್ಲಿ ಭಾವಿಗಿಳಿದು ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ತನಿಖೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.ಈ ಮಧ್ಯ ಸದನದಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾರ್ಚ್.4ರಂದು ರಾಜ್ಯ ಬಜೆಟ್ ಮಂಡಿಸೋದಾಗಿ ಸ್ಪೀಕರ್ ಅನುಮತಿಯನ್ನು ಕೋರಿದರು. ಸ್ಪೀಕರ್ ಒಪ್ಪಿಗೆ ಸೂಚಿಸಿದರು. ಅಲ್ಲದೇ ರಾಜ್ಯಪಾಲರ ಭಾಷಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ವಂದನಾ ನಿರ್ಣಯ ಅಂಗೀಕಾರದ ಬಳಿಕ, ಬಳಿಕ, ಕಾಂಗ್ರೆಸ್ ಸದಸ್ಯರ ಗದ್ದಲ-ಕೋಲಾಹಲದಿಂದಾಗಿ ವಿಧಾನಸಭೆಯನ್ನು ಮಾರ್ಚ್ 4ರವರೆಗೆ ಮುಂದೂಡಿಕೆ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಯಾಣಿಕರ ಹಲಸಿನ ಹಣ್ಣಿಗೆ ಟಿಕೆಟ್ ಇಲ್ಲದೇ ಚಾರ್ಜ್ ಮಾಡಿ ಸಂಕಷ್ಟದಲ್ಲಿ ಕರ್ನಾಟಕ ಬಸ್ ಕಂಡಕ್ಟರ್!

Tue Feb 22 , 2022
ಬಸ್ ಕಂಡಕ್ಟರ್‌ಗಳು ಹುಂಜ ಮತ್ತು ಇತರ ಪ್ರಾಣಿಗಳಿಗೆ ಟಿಕೆಟ್ ನೀಡಿದ ಘಟನೆಗಳು ಮೊದಲೇ ತಿಳಿದಿದ್ದವು. ಆದರೆ ಕರ್ನಾಟಕದಲ್ಲಿ ಎರಡು ವಿಭಿನ್ನ ಸಂದರ್ಭಗಳಲ್ಲಿ ಹಲಸು ಮತ್ತು ಗ್ಯಾಸ್ ಸ್ಟೌಗೆ ಟಿಕೆಟ್ ನೀಡದಿದ್ದಕ್ಕಾಗಿ ಬಸ್ ಕಂಡಕ್ಟರ್‌ಗಳಿಗೆ ನೋಟಿಸ್ ನೀಡಲಾಗಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ರಾಯಚೂರಿನಲ್ಲಿ ಮಹಿಳೆಯೊಬ್ಬರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗೆ ಸುಮಾರು ಅರ್ಧ ಕೆಜಿ ತೂಕದ ಎಲ್‌ಪಿಜಿ ಗ್ಯಾಸ್ ಸ್ಟವ್‌ನೊಂದಿಗೆ ಹತ್ತಿದ್ದಾರೆ. ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬಸ್‌ಗೆ […]

Advertisement

Wordpress Social Share Plugin powered by Ultimatelysocial