BOLLYWOOD:ಸಂಜಯ್ ದತ್ ನಿರ್ಮಾಣ ಸಂಸ್ಥೆ ಆರಂಭ;

ವುಡ್ ಯಾವ ಲೆಕ್ಕಕ್ಕೂ ಇಲ್ಲ. ಬಾಲಿವುಡ್‌ ಸಿನಿಮಾ ನಿರ್ಮಾಣ ಸಂಸ್ಥೆಗಳಿಗೆ ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳೇ ಸ್ಪೂರ್ತಿ. ಈ ನಾಲ್ಕು ಭಾಷೆಯ ಸಿನಿಮಾಗಳನ್ನೇ ಬಾಲಿವುಡ್ ಸೂಪರ್‌ಸ್ಟಾರ್‌ಗಳು ರಿಮೇಕ್ ಮಾಡುತ್ತಿದ್ದಾರೆ.

ಇದರ ಜೊತೆ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಲಿವುಡ್ ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿವೆ. ಹೀಗಾಗಿ ಕೆಜಿಎಫ್ 2 ಸಿನಿಮಾದ ವಿಲನ್ ಸಂಜಯ್ ದತ್ ಬಾಲಿವುಡ್‌ಗೆ ಹೀರೋಯಿಸಂ ತುಂಬಲು ಸಜ್ಜಾಗಿದ್ದಾರೆ.

ಬಾಹುಬಲಿ, ಕೆಜಿಎಫ್, ಸಾಹೋ, ಪುಷ್ಪ ಈ ನಾಲ್ಕು ಸಿನಿಮಾಗಳ ಮಾಡಿದ ಮೋಡಿಗೆ ಬಾಲಿವುಡ್ ಕಳೆದ ಹೋಗುವ ಪರಿಸ್ಥಿತಿಗೆ ಬಂದಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮುಂದೆ ಬಾಲಿವುಡ್‌ ಸಿನಿಮಾಗಳು ಗೆಲ್ಲಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ. ಈ ಸಮಯದಲ್ಲೇ ಸಂಜಯ್ ದತ್ ಬಾಲಿವುಡ್‌ಗೆ ಮತ್ತೆ ಜೀವ ತುಂಬುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಿರುವಾಗ ಸಂಜಯ್ ದತ್ ಪ್ಲ್ಯಾನ್ ಏನು? ಹಿಂದಿ ಚಿತ್ರರಂಗಕ್ಕೆ ಹೀರೋಯಿಸಂ ತುಂಬಲು ಕೈ ಕೊಂಡಿರುವ ಯೋಚನೆ ಏನು? ತಿಳಿಯಲು ಮುಂದೆ ಓದಿ.

ಬಾಲಿವುಡ್‌ಗೆ ಹೀರೋಯಿಸಂ ತರಲು ಅಧೀರ ಸಜ್ಜು
ಹೌದು.. ಬಾಲಿವುಡ್ ಈಗ ಹಿಂದಿದ್ದ ಬಾಲಿವುಡ್ ಆಗಿ ಉಳಿದಿಲ್ಲ. ಸಂಜಯ್ ದತ್ ಚಿತ್ರರಂಗಕ್ಕೆ ಪ್ರವೇಶ ಮಾಡಿದಾಗ, ಹೀರೋಯಿಸಂ ಸಿನಿಮಾಗಳೇ ಹೆಚ್ಚು ಬಿಡುಗಡೆಯಾಗುತ್ತಿತ್ತು. ಆದ್ರೀಗ ಬಾಲಿವುಡ್‌ನಲ್ಲಿ ಆ ಹೀರೋಯಿಸಂ ಉಳಿದಿಲ್ಲ. ಸಂಜಯ್ ದತ್, ಅಕ್ಷಯ್, ಸಲ್ಮಾನ್ ಖಾನ್, ಶಾರುಖ್, ಆಮಿರ್, ಹೃತಿಕ್ ಅಂತಹ ದಿಗ್ಗಜರೇ ಇದ್ದರೂ ಬಾಲಿವುಡ್ ಅಕ್ಷರಶಃ ಸೊರಗಿ ಹೋಗಿದೆ. ಮಾಸ್ ಸಿನಿಮಾಗಳಿಗೆ ದಕ್ಷಿಣ ಭಾರತದ ಕಥೆಗಳ ಕಡೆ ಮುಖ ಮಾಡಲೇ ಬೇಕಿದೆ. ಅದಕ್ಕೆ ಮತ್ತೆ ಬಾಲಿವುಡ್‌ನಲ್ಲಿ ಹೀರೋಯಿಸಂ ಸಿನಿಮಾಗಳನ್ನು ಪ್ರೇಕ್ಷಕರಿಗೆ ಪರಿಚಯಿಸಲು ಸಂಜಯ್ ದತ್ ಸಜ್ಜಾಗಿದ್ದಾರೆ.

ಸಂಜಯ್ ದತ್ ನಿರ್ಮಾಣ ಸಂಸ್ಥೆ ಆರಂಭ

ಸಂಜಯ್ ದತ್ ಶೀಘ್ರದಲ್ಲಿಯೇ ನಿರ್ಮಾಣ ಸಂಸ್ಥೆಯನ್ನು ಲಾಂಚ್ ಮಾಡಲಿದ್ದಾರೆ. ಇದರ ಹೆಸರು ತ್ರಿ ಡೈಮೆನ್ಷನ್ ಮೋಷನ್ ಪಿಕ್ಷರ್ಸ್ (Three Dimension Motion Pictures). ಈ ಸಂಸ್ಥೆಯ ಮೂಲಕ ಮತ್ತೆ ಬಾಲಿವುಡ್‌ಗಿದ್ದ ಹಳೆಯ ಚಾರ್ಮ್ ಅನ್ನು ತರಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಸಂಸ್ಥೆಯ ಮೂಲಕ ದಕ್ಷಿಣ ಭಾರತದ ಸಿನಿಮಾಗಳಂತೆ ಹೀರೋಯಿಸಂ ಅನ್ನು ಪ್ರೇಕ್ಷಕರಿಗೆ ತೋರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಿರ್ಮಾಣ ಸಂಸ್ಥೆ ಲಾಂಚ್ ಆಗುತ್ತಿದ್ದಂತೆ ಸಿನಿಮಾಗಳೂ ನಿರ್ಮಾಣ ಆರಂಭ ಆಗುವ ಸುಳಿವು ನೀಡಿದ್ದಾರೆ.

ಹೀರೋಯಿಸಂ ಬಗ್ಗೆ ಸಂಜಯ್ ಹೇಳೋದೇನು?

ದಕ್ಷಿಣ ಭಾರತದ ಸಿನಿಮಾಗಳು ಏನು ಮಾಡುತ್ತಿವೆಯೋ ಅದನ್ನು ನಾವು ಮಾಡಲಿದ್ದೇವೆ. ತಮ್ಮ ಬಳಿ ಏನಿದೆಯೋ ಅದನ್ನು ಮರಳಿ ತರುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ನಾವು ಚಿತ್ರರಂಗಕ್ಕೆ ಪ್ರವೇಶ್ ಮಾಡಿದಾಗ, ಹೀರೋಯಿಸಂಯಿಂದಲೇ ವೃತ್ತಿ ಆರಂಭ ಮಾಡಿದ್ದೆವು. ಹೀರೋಯಿಸಂ, ಮಾಸ್ ಲವ್ ಸ್ಟೋರಿ ಎಲ್ಲಾ ಇರುತ್ತಿತ್ತು. ಅದು ಈಗ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸುತ್ತಿಲ್ಲ. ನಾನು ಈಗ ಅದನ್ನು ಮತ್ತೆ ಮರಳಿ ತರುವ ಪ್ರಯತ್ನ ಮಾಡುತ್ತಿದ್ದೇನೆ.” ಎಂದು ವೆರೈಟಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವೆಡ್ಡಿಂಗ್ ಆನಿವೆರ್ಸರಿ ದಿನ ಈ ನಿರ್ಧಾರ

ಬಾಲಿವುಡ್ ಮುನ್ನಾಭಾಯ್ ಈ ಹೊಸ ನಿರ್ಧಾರದ ಹಿಂದಿರುವ ಕಾರಣ ವಿವಾಹ ವಾರ್ಸಿಕೋತ್ಸವ. ಇಂದು( ಫೆ.7) ಸಂಜಯ್ ದತ್ ಹಾಗೂ ಮಾನ್ಯತಾ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 2008ರಲ್ಲಿ ಮಾನ್ಯತಾ ಹಾಗೂ ಸಂಜಯ್ ದತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದು( ಫೆ.7) 14ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸಂಜಯ್ ದತ್ ಈ ನಿರ್ಧಾರ ತೆಗೆದುಕೊಂಡಿದ್ದು, ಬಾಲಿವುಡ್‌ಗೆ ಹೀರೋಯಿಸಂ ತುಂಬಲು ಸಜ್ಜಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾಕೆ ಲತಾ ಮಂಗೇಶ್ಕರ್ ಮದುವೆಯಾಗಿಲ್ಲ?

Mon Feb 7 , 2022
ಭಾರತೀಯ ಸಿನಿ ಸಂಗೀತ ಪ್ರಪಂಚದಲ್ಲಿ ಒಂದು ಶಿಖರವನ್ನು ಏರಿದ ಹಿರಿಯ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲತಾ ಮಂಗೇಶ್ಕರ್ ಅವರ ಸಾವು ಇಡೀ ದೇಶವನ್ನು ನೋವಿನ ಮಡುವಿನಲ್ಲಿಟ್ಟಂತಾಗಿದೆ. ಕೋಟ್ಯಂತರ ಅಭಿಮಾನಿಗಳ ಸಂಗೀತ ದೇವತೆ ಎಂದು ಆರಾಧಿಸುವ ಲತಾ ಮಂಗೇಶ್ಕರ್ ಅವರ ಜೀವನವು ತುಂಬಾ ಸ್ಫೂರ್ತಿದಾಯಕವಾಗಿದೆ. ಆಕೆಯ ಕೀರ್ತಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಆದರೂ ಅವರ ವೈಯಕ್ತಿಕ ಜೀವನವು ಅಸಂಪೂರ್ಣವಾಗಿ ಉಳಿದುಹೋಯಿತು. ಈ ದಿಗ್ಗಜ ಗಾಯಕಿ ಯಾಕೆ ಮದುವೆಯಾಗಲಿಲ್ಲ […]

Advertisement

Wordpress Social Share Plugin powered by Ultimatelysocial