DRDO: ಪಿಯುಸಿ, ಐಟಿಐ ಪಾಸಾದವರಿಗೆ ಉದ್ಯೋಗ;

ಬೆಂಗಳೂರು: ಭಾರತ ಸರ್ಕಾರದ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯಲ್ಲಿ ಖಾಲಿ ಇರುವ 150 ಅಪ್ರೆಂಟಿಸ್‌ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಹತ್ತನೇ ತರಗತಿ ಅಥವಾ ತತ್ಸಮಾನ ಅಥವಾ ಐಟಿಐ, ಪಿಯುಸಿ, ಡಿಪ್ಲೊಮಾ, ಪದವಿ(ವಿಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ವೇತನ ಭತ್ಯೆ: ₹9000 ಭತ್ಯೆ ಲಸಿಗಲಿದೆ.

ವಯಸ್ಸು: ಕನಿಷ್ಠ18 ವರ್ಷಗಳು, ಗರಿಷ್ಠ 30 ವರ್ಷಗಳು

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹100, ಪ.ಜಾತಿ/ಪ.ಪಂಗಡ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇರುತ್ತದೆ.

ನೇಮಕಾತಿ ವಿಧಾನ: ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್‌, ಎರಡನೇ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು

ಅರ್ಜಿಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ www.drdo.gov.in ಗೆ ಲಾಗಿನ್‌ ಆಗಿ ಅರ್ಜಿಗಳನ್ನು ಸಲ್ಲಿಸಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 2022ರ ಫೆಬ್ರುವರಿ 07 ಕೊನೆ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಡಿಆರ್‌ಡಿಒ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ನೋಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಹಿ ಉಪ್ಪು - ಭಾರತವು ಸಕ್ಕರೆಯನ್ನು ಹೇಗೆ ಕಂಡುಹಿಡಿದಿದೆ ಎಂಬುದರ ಕಥೆ

Mon Jan 24 , 2022
ಸಕ್ಕರೆ – ನಾವೆಲ್ಲರೂ ಅದನ್ನು ಹಂಬಲಿಸುತ್ತೇವೆ, ಮಕ್ಕಳಿಂದ ದೊಡ್ಡವರವರೆಗೆ. ದುಃಖದ ಸಮಯದಲ್ಲಿ ಮತ್ತು ಆಚರಣೆಯ ಸಮಯದಲ್ಲಿ ನಾವು ಸೋಡಾಗಳು, ಕೇಕ್ಗಳು ​​ಮತ್ತು ಬಗೆಬಗೆಯ ಮಿಠಾಯಿಗಳಿಂದ ಅದರಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ ಭಾರತದಲ್ಲಿ ಮೊದಲು ಆವಿಷ್ಕರಿಸಲ್ಪಟ್ಟ ಸ್ಫಟಿಕೀಕರಿಸಿದ ಸಕ್ಕರೆಯು ವಿಜಯ, ರಹಸ್ಯ ಸಮಾಜಗಳು ಮತ್ತು ಶೋಷಣೆಯನ್ನು ಒಳಗೊಂಡ ಕರಾಳ ಇತಿಹಾಸವನ್ನು ಹೊಂದಿದೆ. ಕಬ್ಬಿನ ಪಳಗಿಸುವಿಕೆಯನ್ನು 10,000 ವರ್ಷಗಳ ಹಿಂದೆ ನ್ಯೂ ಗಿನಿಯಾದ ಜನರು ಮೊದಲು ನಡೆಸಿದರು ಎಂದು ನಂಬಲಾಗಿದೆ. ದ್ವೀಪದಿಂದ ದ್ವೀಪಕ್ಕೆ ಚಲಿಸುವ […]

Advertisement

Wordpress Social Share Plugin powered by Ultimatelysocial