CINEMA:ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್‌ ವಿರುದ್ಧ ದೂರು;

ಹಿರಿಯ ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್ ಈವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ) ಮಹೇಶ್ ವಿರುದ್ಧ ಪ್ರಕರಣ ದಾಖಲಿಸಲು ಮಹಿಳಾ ಮತ್ತು ಮಕ್ಕಳ ಆಯೋಗ ಮುಂದಾಗಿದೆ.

ಹಿಂದಿ ಹಾಗೂ ಮರಾಠಿ ಸಿನಿಮಾ ರಂಗದಲ್ಲಿ ಹಿರಿಯ ನಟರಾಗಿ, ನಿರ್ದೇಶಕರಾಗಿ ಮಹೇಶ್ ಮಂಜ್ರೇಕರ್ ಗುರುತಿಸಿಕೊಂಡಿದ್ದು, ಇವರು ನಿರ್ದೇಶಿಸಿರುವ ಹೊಸ ಮರಾಠಿ ಸಿನಿಮಾ ‘ನೈ ವ್ರನ್‌ ಭಾತ್ ಲೋಂಚಾ ಕೋನ್ ನೈ ಕೋಂಚಾ’ ನಲ್ಲಿ ಅಶ್ಲೀಲ ದೃಶ್ಯಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಬಳಿಸಿಕೊಂಡಿರುವ ಕಾರಣ ಮಹೇಶ್ ಮಂಜ್ರೇಕರ್ ವಿರುದ್ಧ ಪೋಕ್ಸೊ ದಾಖಲಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ನೈ ವ್ರನ್‌ ಭಾತ್ ಲೋಂಚಾ ಕೋನ್ ನೈ ಕೋಂಚಾ’ ಸಿನಿಮಾವು ಇಬ್ಬರು ಬಾಲಕರ ಕತೆಯಾಗಿದ್ದು, ಇಬ್ಬರು ಅಪರಾಧ ಜಗತ್ತಿಗೆ ಪ್ರವೇಶ ಮಾಡುವ ಕನಸು ಕಂಡವರಾಗಿರುತ್ತಾರೆ. ಅದರಲ್ಲಿ ಒಬ್ಬ ಬಾಲಕ ಸಿನಿಮಾದಲ್ಲಿ ವಯಸ್ಕ ಮಹಿಳೆಯೊರಿಟ್ಟಿಗೆ ಲೈಂಗಿಕ ಕ್ರಿಯೆ ಮಾಡುವ ದೃಶ್ಯಗಳಿವೆ ಈ ದೃಶ್ಯಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಸಂಘ ಹಾಗೂ ಮಕ್ಕಳ ಕಲ್ಯಾಣ ಸಂಘಗಳು ಹಾಗೂ ಇನ್ನಿತರೆ ಎನ್‌ಜಿಓಗಳು ಸಿನಿಮಾ ವಿರುದ್ಧ ಹಾಗೂ ನಿರ್ದೇಶಕ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲಿಸಿವೆ. ಇದೀಗ ಮಹೇಶ್ ವಿರುದ್ಧ ಪೋಕ್ಸೊ ಅಡಿಯಲ್ಲಿ ದೂರು ದಾಖಲಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.

ಸಿನಿಮಾದ ಟ್ರೇಲರ್‌ನಲ್ಲಿಯೇ ಬಾಲಕ ವಯಸ್ಕ ಮಹಿಳೆಯರೊಟ್ಟಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ದೃಶ್ಯಗಳಿದ್ದವು. ರಾಷ್ಟ್ರೀಯ ಮಹಿಳಾ ಸಂಘವು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಟ್ರೇಲರ್‌ ವಿರುದ್ಧ ದೂರು ನೀಡಿದ ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಹಿಂಪಡೆಯಲಾಯಿತು. ನಂತರ ಸಿನಿಮಾ ವಿರುದ್ಧವೂ ದೂರು ದಾಖಲಾಯಿತು.

ಬಳಿಕ ವಿರೋಧಗಳಿಗೆ ಮಣಿದ ನಿರ್ದೇಶಕ ಮಹೇಶ್ ಮಂಜ್ರೇಕರ್ ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿ ಇದೇ ತಿಂಗಳ 14 ರಂದು ಸಿನಿಮಾ ಬಿಡುಗಡೆ ಮಾಡಿದ್ದರು. ಆದರೆ ಈಗ ಮತ್ತೆ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲಾಗಿದೆ.

ಮಹಿಳೆ ಮತ್ತು ಮಕ್ಕಳನ್ನು ಕೆಟ್ಟ ರೀತಿಯಲ್ಲಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ ಎಂದು. ಮಕ್ಕಳನ್ನು ಲೈಂಗಿಕ ದೃಶ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲಿಸಲಾಗಿದ್ದು, ವಿಚಾರಣೆಗೆ ನ್ಯಾಯಾಲವು ದಿನಾಂಕ ನಿಗದಿಗೊಳಿಸಿದೆ.

ತಮ್ಮ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಮಾತನಾಡಿರುವ ಮಹೇಶ್ ಮಂಜ್ರೇಕರ್, ”ಇತ್ತೀಚಿನ ದಿನಗಳಲ್ಲಿ ಪ್ರತಿಯಯೊಬ್ಬನಿಗೂ ಪ್ರತಿ ಸಿನಿಮಾದಲ್ಲಿಯೂ ಒಂದಲ್ಲ ಒಂದು ವಿಷಯದ ಬಗ್ಗೆ ಅಸಮಾಧಾನ ಇದ್ದೇ ಇರುತ್ತದೆ. ಎಲ್ಲರಿಗೂ ಉತ್ತರ ಹೇಳುತ್ತಾ, ಎಲ್ಲರನ್ನೂ ಸಂತೃಪ್ತಿಗೊಳಿಸಲು ಆಗುವುದಿಲ್ಲ. ಸಿನಿಮಾದ ನಿರ್ಮಾಪಕರು ಕಾನೂನು ಸಲಹೆ ಪಡೆದು ಕಾನೂನಿನ ಮೂಲಕವೇ ಉತ್ತರ ನೀಡುತ್ತಾರೆ” ಎಂದು ಹೇಳಿದ್ದಾರೆ.

‘ನಮ್ಮ ಬಳಿ ಸಿಬಿಎಫ್‌ಸಿ ಪ್ರಮಾಣ ಪತ್ರ ಇದೆಯಾದ್ದರಿಂದ ಇಂಥಹಾ ದೂರುಗಳಿಗೆ ನಾವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇದೆ. ನಾವು ಸಿನಿಮಾ ಮಾಡಿ ಅದನ್ನು ಸಿಬಿಎಫ್‌ಸಿ ಮುಂದೆ ಪ್ರದರ್ಶಿಸಿದ್ದೇವೆ, ಅವರು ನಮಗೆ ‘ಎ’ ಪ್ರಮಾಣ ಪತ್ರ ನೀಡಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ. ‘ಎ’ ಪ್ರಮಾಣ ಪತ್ರ ಸಿಕ್ಕ ಬಗ್ಗೆ ನಮಗೆ ಬೇಸರವಿಲ್ಲ. ಹಾಗಾಗಿಯೇ ನಾವು ಸಿನಿಮಾವನ್ನು ಪ್ರದರ್ಶನ ಮಾಡಿದ್ದೇವೆ. ನಮ್ಮ ಸಿನಿಮಾ ಬಗ್ಗೆ ನ್ಯಾಯಾಲಯಕ್ಕೆ ತಕರಾರಿದ್ದರೆ ಅವರು ಕ್ರಮ ಕೈಗೊಳ್ಳಬಹುದು” ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸ್ವಾಮಿ ವಿವೇಕಾನಂದ ಜಯಂತಿ 2022: ಪ್ರಮುಖ ಜೀವನ ಪಾಠಗಳಾಗಿರುವ ಉಲ್ಲೇಖಗಳು

Sat Jan 29 , 2022
ಅತಿ ಎತ್ತರದ ಆಧ್ಯಾತ್ಮಿಕ ಮತ್ತು ಅತ್ಯಂತ ಪೌರಾಣಿಕ ವ್ಯಕ್ತಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ಜನವರಿ 12, 1863 ರಂದು ಕಲ್ಕತ್ತಾದಲ್ಲಿ ಶ್ರೀಮಂತ ಬಂಗಾಳಿ ಕುಟುಂಬದಲ್ಲಿ ಜನಿಸಿದರು ಮತ್ತು ನರೇಂದ್ರನಾಥ ದತ್ತಾ. ಆದಾಗ್ಯೂ, ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್‌ನ ಪ್ರಕಾರ, ಅಮಂತ ಕ್ಯಾಲೆಂಡರ್‌ನ ಪ್ರಕಾರ ಪೌಷ್ ತಿಂಗಳ ಸಪ್ತಮಿ ತಿಥಿ ಕೃಷ್ಣ ಪಕ್ಷ ಮತ್ತು ಪೂರ್ಣಿಮಾಂತ ಕ್ಯಾಲೆಂಡರ್‌ನ ಪ್ರಕಾರ ಮಾಘ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಮತ್ತು ಇಂದು 159ನೇ ಸ್ವಾಮಿ ವಿವೇಕಾನಂದ […]

Advertisement

Wordpress Social Share Plugin powered by Ultimatelysocial