ಉಪ ಚುನಾವಣೆ ಫಲಿತಾಂಶ: ಟಿಎಂಸಿಯ ಬಾಬುಲ್ ಸುಪ್ರಿಯೋ, ಶತ್ರುಘ್ನ ಸಿನ್ಹಾಗೆ ಆರಂಭಿಕ ಮುನ್ನಡೆ!

ಕೋಲ್ಕತಾ: ಪಶ್ಚಿಮಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರ, ಬಂಗಾಳದ ಬಾಲಿಗಂಜ್ , ಛತ್ತೀಸ್‌ಗಢದ ಖೈರಗಢ, ಬಿಹಾರದ ಬೋಚಹಾ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶನಿವಾರ ಬೆಳಗ್ಗೆ ಆರಂಭವಾಗಿದೆ.

ಟಿಎಂಸಿಯ ಶತ್ರುಘ್ನ ಸಿನ್ಹಾ ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 6,500 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ಬಿಜೆಪಿಯಿಂದ ಟಿಎಂಸಿಗೆ ಪಕ್ಷಾಂತರವಾಗಿರುವ ಬಾಬುಲ್ ಸುಪ್ರಿಯೋ ಬಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ 10ನೇ ಸುತ್ತಿನ ಮತ ಎಣಿಕೆಯ ಬಳಿಕ 7,872 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಬಿಜೆಪಿ ಬಿಹಾರದ ಬೋಚಹಾ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆಯ ಬಳಿಕ ಮುನ್ನಡೆಯಲ್ಲಿದ್ದು, ಆರ್ ಜೆಡಿ ಎರಡನೇ ಸ್ಥಾನದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಹನುಮ ಜಯಂತಿ:

Sat Apr 16 , 2022
  ಇಬ್ಬರು ಯುವಕರು ತಮ್ಮತ್ತ ಬರುತ್ತಿರುವುದನ್ನು ಸುಗ್ರೀವ ಗಮನಿಸಿದ. ಅವರ ಮುಖದಲ್ಲಿ ಅಪಾರ ಕಾಂತಿ, ತಾಪಸಿಗಳಂತೆ ಕಾಣುತ್ತಾರೆ, ಆದರೆ ಅವರ ವಿಶಾಲವಾದ ಭುಜ, ಕೈಯಲ್ಲಿ ಹಿಡಿದಿರುವ ಧನುಸ್ಸು ಅವರನ್ನು ಕ್ಷತ್ರಿಯರು ಎನ್ನುತ್ತಿದೆ. ವಾಲಿ ಕಳುಹಿಸಿರಬಹುದೇ?.. ಸಂಶಯ ನಿವಾರಿಸಲು ಅವರ್ಯಾರೆಂದು ತಿಳಿದುಬರಲು ಸುಗ್ರೀವ ಕಳುಹಿಸಿದ್ದು ಆಂಜನೇಯನನ್ನು. ಹನುಮಂತ ಭಿಕ್ಷುವಿನ ವೇಷದಲ್ಲಿ ಇಬ್ಬರು ಯುವಕರ ಮುಂದೆ ನಿಂತು ಮಾತಾ ನಾಡಲಾರಂಭಿಸಿದ. ಶ್ರೀ ರಾಮ-ಹನುಮರ ಮೊದಲ ಭೇಟಿಯದು. ಹನುಮನ ವಾಗ್ವೈಭವಕ್ಕೆ ಶ್ರೀರಾಮನೇ ಬೆರಗಾಗಿ ಹೋದ. ಋಗ್ವೇದ, […]

Advertisement

Wordpress Social Share Plugin powered by Ultimatelysocial