ಶೆಲ್ಲಿ ಒಬೆರಾಯ್ ದೆಹಲಿ ಪಾಲಿಕೆ ನೂತನ ಮೇಯರ್.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ದೆಹಲಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಅವರನ್ನು ಶೆಲ್ಲಿ 34 ಮತಗಳಿಂದ ಪರಭಾವಗೊಳಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಇಂದು ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೆಲ್ಲಿ ಒಬಿರಾಯ್ 150 ಮತಗಳನ್ನು ಗಳಿಸಿದರೆ, ಬಿಜೆಪಿಯ ರೇಖಾ ಗುಪ್ತಾ 116 ಮತಗಳನ್ನು ಪಡೆದರು. ಒಟ್ಟು 266 ಮತಗಳು ಚಲಾವಣೆಗೊಂಡವು.ಮೇಯರ್ ಆಯ್ಕೆ ಕುರಿತಂತೆ ಈ ಹಿಂದೆ ಮೂರು ಬಾರಿ ಗಲಾಟೆ, ಗೊಂದಲಗಳಿಂದ ಮೇಯರ್ ಆಯ್ಕೆ ನಡೆದಿರಲಿಲ್ಲ. 75ದಿನಗಳ ಬಳಿಕ ಚುನಾವಣೆ ನಡೆದಿದೆ.ಮೇಯರ್‌ ಚುನಾವಣೆ ಶೀಘ್ರ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಎಎಪಿಯ ಮೇಯರ್‌ ಅಭ್ಯರ್ಥಿ ಶೆಲ್ಲಿ ಒಬೆರಾಯ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಮೇಯರ್‌ ಆಯ್ಕೆ ನಡೆದ ಬಳಿಕ ಉಪಮೇಯರ್‌ ಆಯ್ಕೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಫೆ. 17ರಂದು ಸೂಚಿಸಿತ್ರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ವೃದ್ಧ ದಂಪತಿ:

Thu Feb 23 , 2023
ಭುನೇಶ್ವರ್​: ಹುಟ್ಟು ಉಚಿತ ಸಾವು ಖಚಿತ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸತ್ತಾಗ ನಮ್ಮ ಜೊತೆ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದೂ ಕೂಡ ಸತ್ಯ. ಆದರೂ ಈ ಜಗತ್ತಿನ ಒಂದು ಸುಂದರವಾದ ಮನೆ ಹೊಂದಬೇಕು ಮತ್ತು ಐಷಾರಾಮಿ ಜೀವನ ನಡೆಸಬೇಕು ಎಂದು ಎಲ್ಲರು ಕನಸು ಕಟ್ಟಿಕೊಂಡಿರುತ್ತಾರೆ.ಆದರೆ, ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಈ ದಂಪತಿಗೆ ಇದಕ್ಕೆ ಹೊರತಾಗಿದ್ದಾರೆ.ತಮಗಾಗಿ ಸುಂದರವಾದ ಮನೆಯನ್ನು ಕಟ್ಟಿಕೊಳ್ಳುವ ಬದಲಾಗಿ ಬದುಕಿರುವಾಗಲೇ ತಮಗೋಸ್ಕರ ಸಮಾಧಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial