ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ಬಗ್ಗೆ ಎಚ್ಚರ ಅಗತ್ಯ : ಸಿದ್ದರಾಮಯ್ಯ!

ಉದಯಪುರ,ಮೇ.15- ದೇಶದ ಈ ಹೊತ್ತಿನ ಆತಂಕಕಾರಿಯಾದ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಧ್ವನಿ ಎತ್ತದೇ ಹೋದರೆ ಮತ್ತೆಂದೂ ದೇಶ ಮೊದಲಿನ ಸ್ಥಿತಿಗೆ ಚೇತರಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರದಲ್ಲಿ ಆರ್ಥಿಕತೆ ಕುರಿತಂತೆ ವಿಚಾರ ಮಂಡಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ನಿರಾಶಾದಾಯಕ ಸ್ಥಿತಿಯತ್ತ ತಲುಪುತ್ತಿದೆ. ಜನರಿಗೆ ವಾಸ್ತವಾಂಶಗಳು ತಿಳಿಯಬಾರದೆಂದು ಅಂಕಿ ಅಂಶಗಳನ್ನು ತಿರುಚುವ ಕೆಟ್ಟ ಸಾಹಸಕ್ಕೆ ಸರ್ಕಾರ ಮುಂದಾಗಿದೆ ಎಂದರು.

ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗವನ್ನು ರಚಿಸಲಾಯಿತು. ಈ ನೀತಿ ಆಯೋಗದ ಕೆಲಸ ಕೇಂದ್ರ ಸರ್ಕಾರಕ್ಕೆ ಅಥವಾ ಬಿಜೆಪಿ ಸರ್ಕಾರಕ್ಕೆ ಬೇಕಾದ ಅಂಕಿ ಅಂಶಗಳನ್ನು ಸಿದ್ಧಪಡಿಸಿಕೊಡುವುದಾಗಿದೆ. ನ್ಯಾಯಬದ್ಧವಾಗಿ ನಡೆಸಬೇಕಾದ ಸಮೀಕ್ಷೆಗಳನ್ನು ನಡೆಸುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿಬಿಟ್ಟಿದೆ ಎಂದು ದೂರಿದರು.

ವಿಶ್ವಬ್ಯಾಂಕಿನ ಅಂಕಿಅಂಶಗಳ ಆಧಾರದ ಮೇಲೆ ನೋಡುವುದಾದರೆ 2004ರಲ್ಲಿ ಭಾರತದ ಒಟ್ಟು ಜಿಡಿಪಿ, 0.7 ಟ್ರಿಲಿಯನ್ ಡಾಲರುಗಳಿಷ್ಟಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಇದನ್ನು 2.04 ಟ್ರಿಲಿಯನ್ ಡಾಲರ್‍ಗಳಿಗೆ ಏರಿಕೆಯಾಯಿತು. 2019 ರಲ್ಲಿ 2.87 ಟ್ರಿಲಿಯನ್ ಡಾಲರ್ ಇದ್ದದ್ದು 2020 ರಲ್ಲಿ 2.62 ಟ್ರಿಲಿಯನ್ ಡಾಲರ್ಗೆ ಕುಸಿಯಿತು. 2021 ರಲ್ಲಿ 2.71 ಟ್ರಿಲಿಯನ್ ರಷ್ಟಿದೆ. ಎಲ್ಲ ಪರಿಸ್ಥಿತಿಗಳು ಸರಿಯಾಗಿದ್ದರೆ 2022 ರಲ್ಲಿ 2.88 ಟ್ರಿಲಿಯನ್ ಡಾಲರುಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ.

ಪಿ. ಚಿದಂಬರಂ ಅವರು ಹೇಳುವ ಹಾಗೆ ಮೋದಿಯವರು ಇದ್ದ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ನಡೆಯಲು ಬಿಟ್ಟಿದ್ದರೂ ಸಹ ಮುಂದಿನ ವರ್ಷದ ವೇಳೆಗೆ 5 ಟ್ರಿಲಿಯನ್ ಡಾಲರ್ ಎಕಾನಮಿ ನಮ್ಮದಾಗುತ್ತಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನೀತಿ ಆಯೋಗ, ಸಿಎಜಿ ಇವೆಲ್ಲವೂ ಬಿಜೆಪಿ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾ ದೇಶದ ಹಿತಾಸಕ್ತಿಯನ್ನು ಮರೆತಂತೆ ವರ್ತಿಸುತ್ತಿವೆ ಎಂದರು.

ಕೇಂದ್ರ ಸರ್ಕಾರದ ಹಣಕಾಸು ನೀತಿಯಿಂದ ರಾಜ್ಯಗಳ ಆರ್ಥಿಕತೆ ಹಾಳಾಗುತ್ತಾ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತಿದೆ. ದೇಶದ ಎಲ್ಲ ರಾಜ್ಯಗಳ ಸಾಲ 2014 ರ ಮಾರ್ಚ್ ವೇಳೆಗೆ 24.71 ಲಕ್ಷ ಕೋಟಿ ಇತ್ತು. ಆದರೆ 2022 ರ ಮಾರ್ಚ್ ವೇಳೆಗೆ ಈ ಪ್ರಮಾಣ 70 ಲಕ್ಷ ಕೋಟಿಯನ್ನು ದಾಟುತ್ತಿದೆ. 2022 ರಲ್ಲಿ ಮಾಡುವ ಸಾಲವೂ ಸೇರಿದರೆ ಈ ಪ್ರಮಾಣ 80 ಲಕ್ಷ ಕೋಟಿ ರೂ.ಗಳಷ್ಟಾಗುತ್ತಿದೆ.

ಕೇಂದ್ರದ ನೀತಿಯಿಂದ ರಾಜ್ಯಗಳ ಸಾಲ ಮಾತ್ರ ಹೆಚ್ಚಾಗುತ್ತಿಲ್ಲ. ರಾಜ್ಯಗಳ ಫಿಸ್ಕಲ್ ಡೆಫಿಸಿಟ್ ಕೂಡ ಹೆಚ್ಚಾಗುತ್ತಿದೆ. ಮೋದಿಯವರು ಡಿಮಾನಿಟೈಸೇಷನ್ ಮಾಡುವವರೆಗೆ 2012-17ರವರೆಗೆ ಪ್ರಧಾನವಾದ 14 ರಾಜ್ಯಗಳಲ್ಲಿ 4 ರಾಜ್ಯಗಳು ಮಾತ್ರ ಫಿಸ್ಕಲ್ ಡೆಫಿಸಿಟ್ ಸಮಸ್ಯೆಯನ್ನು ಎದುರಿಸುತ್ತಿದ್ದವು. 2021-22ರಲ್ಲಿ 2 ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಫಿಸ್ಕಲ್ ಡೆಫಿಸಿಟ್ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿವೆ. ಇಡೀ ದೇಶದ ಎಲ್ಲ ರಾಜ್ಯಗಳು ಇಂದು ರೆವಿನ್ಯೂ ಡೆಫಿಸಿಟ್ ಸಮಸ್ಯೆಯನ್ನು ಎದುರಿಸುತ್ತಿವೆ.

ದೇಶದ ಸಾಲದ ಕತೆಯೂ ಹೀಗೆ ಇದೆ. 2016-17ರಲ್ಲಿ ಕೇಂದ್ರ ಸರ್ಕಾರದ ಸಾಲದ ಪ್ರಮಾಣ 76.25 ಲಕ್ಷ ಕೋಟಿಗಳಷ್ಟಿತ್ತು. 2020 ರ ಮಾರ್ಚ ವೇಳೆಗೆ 100.065 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಯಿತು. 2022 ರ ಮಾರ್ಚ್ ವೇಳೆಗೆ 139.56 ಲಕ್ಷ ಕೋಟಿಗೆ ತಲುಪಿದೆ. 2023 ರ ಮಾರ್ಚ್ ವೇಳೆಗೆ ಇದರ ಪ್ರಮಾಣ ಕೇಂದ್ರ ಸರ್ಕಾರದ ಪ್ರಕಾರ 152.17 ಲಕ್ಷ ಕೋಟಿಗಳು. ವಾಸ್ತವವಾಗಿ 155 ಲಕ್ಷ ಕೋಟಿಗಳು ದಾಟಬಹುದೆಂದು ಅಂದಾಜು ಮಾಡಲಾಗಿದೆ.

ಒಂದು ಲೀಟರ್ ಪೆಟ್ರೋಲ್ ಮೇಲೆ 12 ರೂ. ಸೆಸ್ ಮತ್ತು ರ್ಸ ಚಾರ್ಜ್ ಅನ್ನು 2017 ರಿಂದ ವಿಸಲಾಗುತ್ತಿತ್ತು. ಅದನ್ನು 2020 ರ ಮೇ ತಿಂಗಳಿಂದ 30 ರೂಗಳಿಗೆ ಏರಿಸಲಾಯಿತು. ಡೀಸೆಲ್ ಮೇಲೆ 2017 ರ ಏಪ್ರಿಲ್ ನಲ್ಲಿ ಸೆಸ್ ಮತ್ತು ಸತಘ ಚಾರ್ಜ್ 6 ರೂ ಇತ್ತು. ಇದನ್ನು ಮೇ 2020 ರಂದು 27 ರೂ.ಗೆ ಏರಿಕೆ ಮಾಡಲಾಯಿತು.

ಪರಿಹಾರಗಳೇನು?: ಕಾಪೆರ್ರೇಟ್ ತೆರಿಗೆಯನ್ನು ಹೆಚ್ಚು ಮಾಡಬೇಕು. ಬ್ರೆಜಿಲï, ಫ್ರಾನ್ಸï, ಜರ್ಮನಿ, ಆಸ್ಟ್ರೇಲಿಯ, ಮೆಕ್ಸಿಕೊ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಕಾಪೆರ್ರೇಟ್ ತೆರಿಗೆ ಶೇ.30 ಕ್ಕಿಂತ ಹೆಚ್ಚಿದೆ. ನಮ್ಮಲ್ಲೂ ಹಿಂದೆ ಇದ್ದ ಶೇ. 32ರಷ್ಟು ತೆರಿಗೆ ವಿಸಬೇಕು. ಸಾಧ್ಯವಾದರೆ ಶೇ. 35ಕ್ಕೆ ಏರಿಸಬೇಕು.

ಜಿಎಸ್ಟಿ ವ್ಯವಸ್ಥೆಯು ಈಗ ಸಂಪೂರ್ಣವಾಗಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಅದನ್ನು ಒಕ್ಕೂಟ ವ್ಯವಸ್ಥೆಗೆ ಪೂರಕವಾಗುವಂತೆ ನೋಡಿಕೊಳ್ಳಬೇಕು. ರಾಜ್ಯಗಳ ಆರ್ಥಿಕ ರಕ್ಷಣೆ ಮೊದಲ ಆದ್ಯತೆಯಾಗಬೇಕು ಎಂದರು.

ಮಾಧ್ಯಮಗಳ ಮೂಲಕ ಕೋಮು ದ್ವೇಷವೇ ದೇಶದ ಎಲ್ಲಾ ಸಮಸ್ಯೆಗಳ ಮೂಲ ಎನ್ನುವಂತೆ ಬಿಂಬಿಸಿ ತಮ್ಮ ಎಲ್ಲಾ ಲೋಪಗಳನ್ನೂ ಕೇಂದ್ರ ಸರ್ಕಾರ ಮುಚ್ಚಿಕೊಳ್ಳಲು ಹೆಣಗಾಡುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಅರ್ಥ ಮಾಡಿಸಿ, ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾರ್ವಜನಿಕ ಸ್ಥಳದಲ್ಲಿ ಅಲೀಗಡದ 300 ವರ್ಷ ಹಳೆಯ ಮಸೀದಿ: ಆರ್‌ಟಿಐಯಲ್ಲಿ ಬಹಿರಂಗ...!

Sun May 15 , 2022
  ಅಲೀಗಡ: ಉತ್ತರ ಪ್ರದೇಶದ ಅಲೀಗಡ ಜಿಲ್ಲೆಯ ಅಪ್ಪರ್‌ಕೋಟ್ ಪ್ರದೇಶದಲ್ಲಿರುವ ಮಸೀದಿಯನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬುದು ಮಾಹಿತಿ ಹಕ್ಕು ಕಾಯ್ದೆ (ಆಟಿಐ) ಅರ್ಜಿಗೆ ದೊರೆತ ಉತ್ತರದಿಂದ ತಿಳಿದುಬಂದಿದೆ. ಹೀಗಾಗಿ ಆ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು ಆಗ್ರಹಿಸಿದ್ದಾರೆ. ಅಪ್ಪರ್‌ಕೋಟ್ ಪ್ರದೇಶದ ಜಾಮಾ ಮಸೀದಿ ಬಗ್ಗೆ ಆರ್‌ಟಿಐ ಕಾರ್ಯಕರ್ತ ಕೇಶವ್ ದೇವ್ ಶರ್ಮಾ ಎಂಬುವವರು ಅಲೀಗಡ ನಗರಪಾಲಿಕೆಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ಪಾಲಿಕೆ, 300 […]

Advertisement

Wordpress Social Share Plugin powered by Ultimatelysocial