ಎಂ. ಎನ್. ಶೇಷಗಿರಿ

ಎಂ. ಎನ್. ಶೇಷಗಿರಿ ಸುಗಮ ಸಂಗೀತ ಲೋಕದಲ್ಲಿ ಹೆಸರಾಗಿದ್ದವರು.
ಶೇಷಗಿರಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ 1930ರ ಫೆಬ್ರವರಿ 23ರಂದು ಜನಿಸಿದರು. ತಂದೆ ನಿಂಗಪ್ಪ. ತಾಯಿ ಗಂಗಮ್ಮ. ಓದಿದ್ದು ಮುಲ್ಕಿ ಪರೀಕ್ಷೆ ಮತ್ತು ಕನ್ನಡ ಜಾಣ ಪರೀಕ್ಷೆ. ಮುಂಬಯಿಯಲ್ಲಿ ಇಂಟರ್ ಮೀಡಿಯೆಟ್ ಡ್ರಾಯಿಂಗ್ ಹಾಗೂ ಗಂಧರ್ವ ಮಹಾವಿದ್ಯಾಲಯದಿಂದ ಉನ್ನತ ಹಂತದವರೆಗಿನ ಸಂಗೀತ ಪದವಿ ಪಡೆದರು. ಬಡಗಿತನ, ಕರಕುಶಲ, ಮಣ್ಣಿನ ಮೂರ್ತಿಗಳ ರಚನೆ, ಚಿತ್ರಕಲೆ, ಭಜನೆ, ಸಂಗೀತ ಇವೆಲ್ಲ ಕಲೆಗಳೂ ಇವರ ಮನೆತನಕ್ಕೆ ಬಂದ ಬಳುವಳಿಯಾಗಿತ್ತು. ಹೊಸರಿತ್ತಿಯ ನೀಲಕಂಠ ಬುವಾ, ರಾಮಬುವಾ ಮಕೋಳ ಇವರ ವಂಶ ಪರಂಪರೆಯಲ್ಲಿ ಬಂದವರು.
ಶೇಷಗಿರಿ 1951ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಸಂಗೀತ ಶಿಕ್ಷಕರಾಗಿ ಬಡ್ತಿ ಪಡೆದು 1988ರಲ್ಲಿ ನಿವೃತ್ತರಾದರು. ಶಾಲಾ ಶಿಕ್ಷಕರಾಗಿ ಸಂಗೀತ ಶಿಕ್ಷಣ ನೀಡಿದರು. ಆಕಾಶವಾಣಿ ಧಾರವಾಡ ಕೇಂದ್ರದ ಕಲಾವಿದರಾದರು. ದೂರದರ್ಶನದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಹಲವಾರು ಧ್ವನಿಸುರಳಿಗಳಿಗೆ ಧ್ವನಿಯಾದರು. ಕವನ ರಚಿಸಿ ರಾಗ ಸಂಯೋಜಿಸಿದ್ದರ ಜೊತೆಗೆ ಸಂಗೀತ ಶಾಸ್ತ್ರದ ಕುರಿತು ಹಲವಾರು ಪುಸ್ತಕಗಳ ರಚನೆ ಮಾಡಿದರು. ಸಂಗೀತ ಪ್ರಾತ್ಯಕ್ಷಿಕೆ ನೀಡಿದರು.
ಖ್ಯಾತ ಹಾಡುಗಾರ್ತಿ ಸಂಗೀತ ಕಟ್ಟಿ ಇವರ ಶಿಷ್ಯವರ್ಗದಲ್ಲಿದ್ದರು.
ಬೆಳಗಾವಿಯ ಲಿಂಗರಾಜ ಜಯಂತಿ, ಮುರುಘರಾಜೇಂದ್ರಮಠ, ಲಯನ್ಸ್ ಕ್ಲಬ್, ಕಾಗಿನೆಲೆ ಕನಕ ಗುರುಪೀಠ, ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್ತಿನ ಸಮ್ಮೇಳನ, ಪುಟ್ಟರಾಜ ಗವಾಯಿ ಕ್ಷೇತ್ರ ಸೇರಿದಂತೆ ಇವರ ಕಾರ್ಯಕ್ರಮಗಳು ವ್ಯಾಪಕವಾಗಿ ನಡೆದವು.
ಶೇಷಗಿರಿ ಅವರಿಗೆ ಟಾಗೋರ್ ಶತಮಾನೋತ್ಸವ ಗೌರವ, ಕನಕದಾಸರ ೪ನೇ ಶತಮಾನೋತ್ಸವ ಗೌರವ, ಸಂತ ಶಿಶುನಾಳ ಪ್ರಶಸ್ತಿ, ಸಂಗೀತ ಸುಧಾಕರ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಶೇಷಗಿರಿ ಅವರು 2005ರ ಫೆಬ್ರವರಿ 15ರಂದು ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್.ಎಂ. ಚನ್ನಯ್ಯ

Thu Feb 24 , 2022
ಪ್ರೊ. ಎಚ್.ಎಂ. ಚನ್ನಯ್ಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯಲ್ಲಿ ನಿಷ್ಣಾತರೆನಿಸಿದ್ದವರು. ಚನ್ನಯ್ಯನವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ 1935ರ ಫೆಬ್ರುವರಿ 22ರಂದು ಜನಿಸಿದರು. ತಂದೆ ಎಚ್‌.ಜಿ. ಮಹದೇವಯ್ಯ. ತಾಯಿ ಗಂಗಮ್ಮ. ಜಡೆ, ತೀರ್ಥಹಳ್ಳಿ, ಸಂತೆಬೆನ್ನೂರು, ಹೊನ್ನಾಳಿ, ಶಿರಾಳ ಕೊಪ್ಪ ಮುಂತಾದೆಡೆ ಶಾಲಾ ಶಿಕ್ಷಣ ನಡೆಯಿತು. ಕವಿ ಸುಮತೀಂದ್ರ ನಾಡಿಗರು ಇವರ ಸಹಪಾಠಿ. ಚನ್ನಯ್ಯನವರು ಹೈಸ್ಕೂಲಿನಲ್ಲಿದ್ದಾಗಲೇ ಕವನಗಳ ರಚನೆ ಆರಂಭಿಸಿದರು. ಇಂಟರ್ ಮೀಡಿಯೆಟ್‌ ಓದಿದ್ದು ಶಿವಮೊಗ್ಗದಲ್ಲಿ. ವಿಜ್ಞಾನ […]

Advertisement

Wordpress Social Share Plugin powered by Ultimatelysocial