ಹದಗೆಟ್ಟ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ,ಮನವಿ.

ವಿಜಯಪುರ ಜಿಲ್ಲೆಯ
ಬಸವನ ಬಾಗೇವಾಡಿ ನಗರದಿಂದ ನಾಗೂರ ಹೋಗುವ ರಸ್ತೆಯು ತಗ್ಗು ಗುಂಡಿಗಳಿಂದ ಕೂಡಿದ್ದು ಹಡೆಗೆಟ್ಟಿದೆ

ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಹಾಗೂ ಸಾರ್ವಜನಿಕರು ತಮ್ಮ ಜೀವನ ಕೈಯಲ್ಲಿ ಹಿಡ್ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅದನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಟಿಪ್ಪು ಕ್ರಾಂತಿ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ರಾದ ಖಜಾಂಬರ್ ನದಾಫ್ ರವರು ಅಧಿಕಾರಿ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಮುಂಬರುವ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ತಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳಾದ ಎ ಬಿ ಕಲಾದಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ನಾಸಿರ್ ತಂಬೋಲಿ, ಸಲೀಮ್ ಲಾಠಿ, ವೀರಭದ್ರಪ್ಪ ಹಡಪದ್, ಯಮನಪ್ಪ ಭಜಂತ್ರಿ, ಅಬ್ದುಲ್ ರಾಜಾಕ್ ಮನಗೂಳಿ, ಜಾಕಿರ್ ನದಾಫ್ ಆನಂದ್ ಭಜಂತ್ರಿ ಸೇರಿದಂತೆ ಅನೇಕರು ಉಪಸಿದ್ಧರಿದ್ದರು

ವರದಿ-ಸಿದ್ದು ಜಮ್ಮಲದಿನ್ನಿ, ಸ್ಪೀಡ್ ನ್ಯೂಸ್ ಡಿಸ್ಟಿಕ್ ರಿಪೋರ್ಟ್ ರ ವಿಜಯಪುರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಹೆಚ್ಚು ಸಿರಿಧಾನ್ಯಗಳನ್ನು ಬಳಸಿ ಸದೃಢ ಆರೋಗ್ಯ ವೃದ್ಧಿಸಿಕೊಳ್ಳಿ ಎಂದ ತಶಿಲ್ದಾರ್ ಶ್ರೀಶೈಲ್ ತಳವಾರ್

Sat Jan 7 , 2023
ಯಲಬುರ್ಗಾ ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯ ಇವರ ಸಂಯೋಗದಲ್ಲಿ ಸಾವಯುವ ಹಾಗೂ ಸಿರಿಧಾನ್ಯಗಳ ಕುರಿತು ರೈತ ಮಹಿಳೆಯರಿಗೆ ಸಿರಿಧಾನ್ಯ ರಂಗೋಲಿ ಸ್ಪರ್ಧೆ ಹಾಗೂ ಬಳಸುವ ತಿಂಡಿ ತಿನಿಸುಗಳು ಚಾಲನೆ ಮಾಡಿ ಮಾತನಾಡಿದರುಪ್ರತಿಯೊಬ್ಬರು ಸಿರಿಧಾನ್ಯಗಳ ಬಳಸಬೇಕು ಹಲವಾರು ರೋಗಗಳನ್ನು ದೂರ ಮಾಡುತ್ತದೆ ಹಾಗೂ ಮನುಷ್ಯರನ್ನು ಸದೃಢವಾಗಿ ಬೆಳೆಸಲು‌ ಸಾಹಯ ಮಾಡುತ್ತದೆ ಗ್ರಾಮೀಣ ಮಟ್ಟದ ಮಹಿಳೆಯರಿಂದ ಸಿರಿಧಾನ್ಯಗಳ ರಂಗೋಲಿ ಸ್ಪರ್ಧೆಯನ್ನು […]

Advertisement

Wordpress Social Share Plugin powered by Ultimatelysocial