ನಿಮ್ಮ ಅಭಿಮಾನವೇ ನನಗೆ ಎಲ್ಲಕ್ಕಿಂತ ಮಿಗಿಲು:

ರಾಯಚೂರು: ಜಿಲ್ಲೆಯ ಕುರುಕುಂದ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೆ ಆಗಮಿಸಿದ ಸ್ಯಾಂಡಲ್ ವುಡ್ ನಟ ಸುದೀಪ್ ರನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ಮಾಡಿದರು.

ಹೆಲಿಪ್ಯಾಡ್ ಪಕ್ಕದಲ್ಲೇ ನಿರ್ಮಿಸಿದ್ದ ವೇದಿಕೆ ಬಳಿ ಸಹಸ್ರಾರು ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳತ್ತ ಕೈಬೀಸಿದ ಸುದೀಪ್ , ನನ್ನ ಪ್ರತಿಮೆ ಮಾಡುವಷ್ಟು ಪ್ರೀತಿ ಇರುವುದು ಕಂಡು ಖುಷಿಯಾಗಿದೆ. ನಿಮ್ಮ ಅಭಿಮಾನವೇ ನನಗೆ ಎಲ್ಲಕ್ಕಿಂತ ಮಿಗಿಲು ಎಂದರು.

ದೊಡ್ಡ ದೊಡ್ಡ ಸಾಧನೆ ಮಾಡಿದವರ ಮೂರ್ತಿಗಳನ್ನು ಸ್ಥಾಪಿಸಿ ಗೌರವ ಸಲ್ಲಿಸಬೇಕು. ನಾನಿನ್ನು ಸಾಕಷ್ಟು ಸಾಧನೆ ಮಾಡಬೇಕಿದ್ದು, ಅಭಿಮಾನಿಗಳ ಪ್ರೀತಿಗಿಂತ ಮಿಗಿಲಾದ ಗೌರವವಿಲ್ಲ ಎಂದು ನಟ ಸುದೀಪ್ ಹೇಳಿದರು.

ಜಿಲ್ಲೆಯ ಕುರುಕುಂದ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೆ ಬಂದ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.

ನನ್ನ ಮೂರ್ತಿ ಪ್ರತಿಷ್ಠಾಪನೆಗೆ ಹೊರಟಿದ್ದ ಅಭಿಮಾನಿಗಳ ಪ್ರೀತಿಗೆ ನಾನು ಶರಣು.ಆದರೆ, ನನ್ನದೇ ಮೂರ್ತಿ ಅನಾವರಣಕ್ಕೆ ನಾನು ಹೇಗೆ ಒಪ್ಪಿಕೊಳ್ಳಲಿ ಅದಕ್ಕೆ ಬೇಡ ಅಂದೆ. ತುಂಬಾ ಜನ ಸಾಧನೆ ಮಾಡಿದವರು ಇದ್ದಾರೆ ಅವರಿಗೆ ಗೌರವ ಸಲ್ಲಬೇಕು. ನಾನು ಅಷ್ಟು ದೊಡ್ಡವನಲ್ಲ ಎಂದರು.

ನಾನು ಸಾಧನೆ ಮಾಡಬೇಕಾದದ್ದು ತುಂಬಾ ಇದೆ ಮುಂದೆ ಅಂತ ದಿನ ಬಂದಾಗ ನನ್ನ ಮೂರ್ತಿ ಇಡಲಿ ನಾನೇ ಬರ್ತಿನಿ. ನನ್ನ ಮೂರ್ತಿ ನಿರ್ಮಾಣವಾದ ಮೇಲೆಯೇ ನನಗೆ ಗೊತ್ತಾಗಿದ್ದು. ಮೊದಲೇ ಗೊತ್ತಾಗಿದ್ದರೆ ಬೇಡ ಅನ್ನುತ್ತಿದ್ದೆ ಎಂದರು.

ಎಸ್ ಟಿ ಗೆ ಶೇ.7.5 ಮೀಸಲಾತಿಗಾಗಿ ವಾಲ್ಮೀಕಿ ಸಮಾಜ ಶ್ರೀಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನು ಹೋರಾಟದಲ್ಲಿ ನೇರವಾಗಿ ಭಾಗವಹಿಸಬೇಕು ಅಂತೇನಿಲ್ಲ. ಪ್ರಸನ್ನಾನಂದಪುರಿ ಸ್ವಾಮೀಜಿ ಇದರ ಬಗ್ಗೆ ಮಾತನಾಡಿಲ್ಲ. ಅವರು ಮಾತನಾಡಲಿ. ನಾನು ಅವರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ನಾನೇ ಅಲ್ಲಿ ಕೂಡಕಾಗಲ್ಲ. ನಾನು ಏನು ಮಾಡಬೇಕೋ ಅದನ್ನು ಮಾಡುವುದಾಗಿ ತಿಳಿಸಿದರು.

ಸಿನೆಮಾದಿಂದಲೇ ನಾನು ಇಷ್ಟೊಂದು ಸಂಪಾದನೆ ಮಾಡಿರುವುದು. ಅದರ ಬಗ್ಗೆ ಕಾಳಜಿಗಳು, ಜವಾಬ್ದಾರಿ ಇವೆ. ಅಪ್ಪು ಸಮಾಜ ಸೇವೆ ಬಗ್ಗೆ ನಾವು ಏನೆ ಮಾತನಾಡಿದರೂ ಅದು ಒಳ್ಳೆಯ ರೀತಿಯಲ್ಲೇ ಇರಬೇಕು ಎಂದರು.

ಹೆಚ್ಚು ಕಾಲ ಇರಲಿಲ್ಲ. ಆದರೆ, ಅಭಿಮಾನಿಗಳು ಅವರನ್ನು ಕಾಣಲು ಹೆಲಿಪ್ಯಾಡ್ ನುಗ್ಗಲೆತ್ನಿಸಿದರು. ಪೊಲೀಸರು ಅಭಿಮಾನಿಗಳು ಚದುರಿಸಲು ಪೊಲೀಸರು ಲಾಠಿ ಬೀಸಿದರು.

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನೂಕು ನುಗ್ಗಲು ಏರ್ಪಟ್ಟಿತ್ತು. ಇದರಿಂದ ಪೊಲೀಸರು ಹೈರಾಣಾದರು. ಕಾರ್ಯಕ್ರಮದ ಸಮಯ 11.30 ಕ್ಕೆ ನಿಗಿದಿಯಾಗಿದ್ದರಿಂದ ಇನ್ನೂ ಜಿಲ್ಲೆಯ ಮೂಲೆಮೂಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದರು. ಆದರೆ, 11 ಗಂಟೆಗೆಲ್ಲ ಸುದೀಪ್ ಮರಳಿ ಹೋದರು. ಸುದೀಪ್ ಕುರಕುಂದಕ್ಕೆ ಬರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಉನ್ನತ ಶಿಕ್ಷಣ ಸಚಿವರ ಕಾರಿಗೆ ಮುತ್ತಿಗೆಹಾಕಿ ಮಹಿಳೆಯರ ಪ್ರತಿಭಟನೆ!

Wed Apr 27 , 2022
ಹಾಸನದ ಸ್ನಾತಕೋತ್ತರ ಕೇಂದ್ರದ ಸಮೀಪ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರ ನಮ್ಮೂರ ಗೋಮಾಳದಲ್ಲಿ ಲಾರಿ ನಿಲ್ದಾಣ ಮಾಡೋಕೆ ಬಿಡಲ್ಲ ಎಂದು ಪಟ್ಟು ಮಹಿಳೆಯರ ಅಹವಾಲು ಆಲಿಸದೆ ಕಾರ್ ಏರಿ ಹೊರಟ ಸಚಿವರು ಸಚಿವರ ವರ್ತನೆ ಕಂಡು ಕೆರಳಿದ ಮಹಿಳೆಯರು ಸಚಿವರ ಕಾರಿಗೆ ಅಡ್ಡಬಂದು ಹೋರಾಟ ಮಾಡಲು ಯತ್ನ ಸಚಿವರ ಕಾರು ಮುಂದೆ ಹೋಗುತ್ತಲೆ ಸಚಿವರ ವಿರುಧ್ದ ಮಹಿಳೆಯರ ಆಕ್ರೋಶ.ಏಕ ವಚನದಲ್ಲಿ ನಿಂದಿಸುತ್ತಾ ಸಚಿವರು ಶಾಸಕರ ವಿರುದ್ದ ಆಕ್ರೋಶ. ಯಾವುದೇ ಕಾರಣದಿಂದ […]

Advertisement

Wordpress Social Share Plugin powered by Ultimatelysocial