ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಸಕಲೇಶಪುರ ಅರೆಹಳ್ಳಿ 12ವರ್ಷದ ಸುಹಾನ ಎಂಬಾಕೆಯನ್ನು ಪುತ್ತೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ನಲ್ಲಿ ವೈದೇಹಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. 15 ದಿನಗಳಿಂದ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಗೆ ಲಿಂಗ್ಸ್ ಟ್ರಾನ್ಸ್ಪೋರ್ಟ್ ಮಾಡುವಂತೆ ವೈದ್ಯರು ಸೂಚಿಸಿದರು… ಮಹಾವೀರ ಆಸ್ಪತ್ರೆಯ ವೈದ್ಯರಾದ ಸುರೇಶ್ ಪುತ್ತೂರಾಯರು ಇವರ ನೇತೃತ್ವದಲ್ಲಿ ಯುವತಿಯನ್ನು ಶಿಫ್ಟ್ ಮಾಡಲಾಯಿತು… ಇದನ್ನೂ ಓದಿ :ಕನಕಪುರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೆಂಗಳೂರಿನಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ ಪ್ರಕರಣ. ಪೊಲೀಸ್ ಕಾನ್ಸ್‌ಟೇಬಲ್ ಶೀಲಾ, ಹೆಡ್ ಕಾನ್ಸ್‌ಟೇಬಲ್ ಸುರೇಶ್ ನೇಣಿಗೆ ಶರಣಾದ ದಂಪತಿಗಳು. ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಶೀಲಾ‌ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ. ಡೆತ್ ನೋಟ್ ಬರೆದಿಟ್ಟು ದಂಪತಿಗಳು ಆತ್ಮಹತ್ಯೆ. ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ:ದೇವಸ್ಥಾನದಲ್ಲಿ ಕಳ್ಳರ ಕೈಚಳಕ

ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ…. ಲಕ್ಷ್ಮೀ ಹುಟ್ಟೂರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ತುರುವಾಲಹಟ್ಟಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ….ಸ್ವಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ…. ಅಂತ್ಯಕ್ರಿಯೆ ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ… ಇದನ್ನೂ ಓದಿ:ವಾಹನಕ್ಕೆ ಸಿಲುಕಿ ಚಿರತೆ ಸಾವು..

ಡಿಸೆಂಬರ್ ತಿಂಗಳು ಪ್ರಾರಂಭದಿಂದ ಮಂಜಿನ ಕಾಟಕ್ಕೆ ಗ್ರಾಮಾಂತರ ಪ್ರದೇಶ ಜನರು ಬೆಳಗ್ಗೆ 10 ಗಂಟೆ ಆದರೂ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ವಾಯುವಿಹಾರಕ್ಕೆ ಹೋಗುವ ಮಹಿಳೆಯರು , ವೃದ್ದರು , ಯುವಕರು ಬೆಳಗ್ಗೆ ಮಂಜಿನ ಕಾಟವಿರುವ ಕಾರಣ ಕಡಿಮೆಯಾದ ಮೇಲೆ ವಾಕಿಂಗ್ ಮಾಡುವಂತಾಗಿದೆ ರಸ್ತೆಗಳಲ್ಲಿ ಮುಂದೆ ಬರುವ ವಾಹನಗಳು ಕಾಣದೆ ವಾಹನ ಸವಾರರು ಪರದಾಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಇದನ್ನೂ ಓದಿ:ಅಮಾಯಕರಿಂದ ಹಣ ಲಪಾಟಿಯಿಸಿದ ಖತರ್ನಾಕ್ ದಂಪತಿಗಳು

ನಾವು ಪಕ್ಷದ ಕೆಲಸ ಮಾಡಬೇಕು.ನಮ್ದು ಪಾರ್ಟಿ ಇದೆ, ನಮ್ದು ಸಿದ್ದಾಂತ ಇದೆ. ಚುನಾವಣೆ ಮೇಲೆ, ಪ್ರಜಾಪ್ರಭುತ್ವದ ಮೇಲೆ, ನಂಬಿಕೆ ಇಟ್ಕೊಂಡಿದ್ದೀವಿ ಎಂದು ಕಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ನಾವು ಗ್ರಾಮ ಪಂಚಾಯಿತಿ ಏಲೆಕ್ಷನ್ ನಡೆಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದೇವು. ಈಗ ಕೋರ್ಟ್ ಗೌರವಯುತ ವಾಗಿ ಏಲೆಕ್ಷನ್ ನಡೆಸಲು ಆದೇಶ ಹೊರಡಿಸಿದೆ ಎಂದ್ರು. ಹಾಗೂ ಇದೇ ತಿಂಗಳ 6ನೇ ತಾರೀಖಿನಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ […]

ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯ ಸಿಂಚನವಾಗಿದ್ದು, ನಗರದಲ್ಲಿ ಇಂದು ಮುಂಜಾನೆಯಿಂದ ತುಂತುರು ಮಳೆಯಾಗಿದೆ. ತಮಿಳುನಾಡನ್ನು ಇಂದು ಪ್ರವೇಶಿಸಲಿರುವ ಬುರೇವಿ ಚಂಡಮಾರುತದ ಪರಿಣಾಮದಿಂದ ಬೆಂಗಳೂರಿನಲ್ಲಿ ಮಳೆಯ ಆಗಮನವಾಗಿದೆ.ಇನ್ನೂ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಇದೇ ರೀತಿ ಮಳೆ ಸುರಿಯುವ ಸಾಧ್ಯತೆಯಿದೆ. ಇಂದು ಮಧ್ಯಾಹ್ನ ತಮಿಳುನಾಡಿಗೆ ಬುರೇವಿ ಚಂಡಮಾರುತ ಪ್ರವೇಶ ಮಾಡುವುದರಿಂದ ಬೆಂಗಳೂರಿನಲ್ಲಿ ಸಂಜೆಯ ಬಳಿಕ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಲಿದ್ದು, ಉಳಿದೆಡೆ ಮೋಡ ಕವಿದ ವಾತಾವರಣ […]

ಸಾಹಿಲ್ , ಕೊಲೆಯಾದ ವ್ಯಕ್ತಿ. ಗಂಗೋಡನಹಳ್ಳಿ ಮಾರಮ್ಮನ ದೇವಸ್ಥಾನ ಬಳಿ ಘಟನೆ. ಒಂದೆ ಎರಿಯದವರಿಂದ ಸಾಹಿಲ್ ಗೆ ಹಲ್ಲೆ ನಡೆಸಿ ಹತ್ಯೆ. ಮೂವರು ದುಷ್ಕರ್ಮಿಗಳಿಂದ ಹಲ್ಲೆ. ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ನಡೆದಿರುವ ಗಲಾಟೆ. ಗಲಾಟೆಯಲ್ಲಿ ಸಾಹಿಲ್ ಗೆ ಗಂಭೀರ ಹಲ್ಲೆಯಾಗಿತ್ತು. ಗಾಯಾಳುವನ್ನ ಚಿಕಿತ್ಸೆ ಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಹಿಲ್ ಸಾವು. ಚಂದ್ರಲೇಔಟ್ ಪೊಲೀಸ್ ಠಾಣೆ ಪ್ರಕರಣ ದಾಖಲು. ಇದನ್ನು ಓದಿ :ಸಚಿವ ಪ್ರಭು ಚವ್ಹಾಣರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ನಿವಾರ್ ಚಂಡ ಮಾರುತದಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಬೆಂಗಳೂರಿನಲ್ಲೆಡೆ ಮಳೆಯಾಗುತ್ತಿದೆ.ಬೆಂಗಳೂರಿನ ಮಳೆ ಹಾಗೂ ಮೋಡಕವಿದ ವಾತಾವರಣದ ದೃಶ್ಯ ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದ್ದು ನೋಡುಗರಿಗೆ ಕಣ್ಮನ ಸೆಳೆಯುತ್ತಿದೆ. ಇದನ್ನು ಓದಿ : ಮನೆ ಇಲ್ಲದವರಿಗೆ ನಿವೇಶನ ಒದಗಿಸಿಕೊಡಲು ಒತ್ತು.

ಗಾಂಜಾ, ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಹಲಸೂರು  ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕೇರಳ ಮೂಲದ ಮೊಹಮ್ಮದ್ ಸಾಕಿರ್ ಮತ್ತು ಕೃಷ್ಣ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಒಂದು ಲೀಟರ್ ವೀಡ್ ಆಯಿಲ್, 16 ಕೆಜಿ ಗಾಂಜಾ, ಒಂದು ವೋಲ್ಸ್ ವ್ಯಾಗನ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  

Advertisement

Wordpress Social Share Plugin powered by Ultimatelysocial