ಹಿಂದುಳಿದ ವರ್ಗಗಳು ಮತ್ತು ಜಾತಿಗಳ ಕುರಿತು ಸಂಶೋಧನೆಗಾಗಿ ಸ್ಥಾಪಿಸಿರುವ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಪ್ರಸ್ತಾವ ಸರ್ಕಾರ ಮುಂದೆ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ಅವರು, ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಈ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.ಹಿಂದುಳಿದ ವರ್ಗಗಳ […]

ನೆಲಮಂಗಲ: ಮಠ ಮಾನ್ಯಗಳು ವಿದ್ಯಾರ್ಥಿಗಳ ಪಾಲಿಕೆ ಜೀವನವನ್ನು ಕಲಿಸುವ ಗುರುಕುಲ ಇದ್ದಂತೆ, ಆದರೆ ಇಲ್ಲೊಂದು ಮಠ ಮಕ್ಕಳಿಗೆ ವಿದ್ಯೆ, ವಸತಿ, ಪ್ರಸಾದ ನೀಡುವ ಬದಲಿಗೆ ಕಾವಲು ಕಾಯುವ ಕೆಲಸದ ಶಿಕ್ಷೆ ನೀಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ತಮ್ಮ ಮಠದ ಶಾಲೆಯಲ್ಲಿ ಶಿಕ್ಷಣ ಕಲಿಯಬೇಕಾಗಿದ್ದ ಮಕ್ಕಳಿಗೆ ಪ್ರತಿನಿತ್ಯ ಕಾವಲು ಕಾಯೋ ಕೆಲಸಕ್ಕೆ ನೇಮಕ ಮಾಡಿರುವ ಆರೋಪ ಕೇಳಿಬಂದಿದೆ. […]

ಬೆಳಗಾವಿ: ಇಲ್ಲಿನ ಉದ್ಯಮ್ ಬಾಗ್ ನಲ್ಲಿ ಇರುವ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರಂದು ಉದ್ಯೋಗ ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.ಜಿಲ್ಲೆಯ ಸಚಿವರು ಮತ್ತು ಜನಪ್ರತಿನಿಧಿಗಳ ಜತೆ ಶುಕ್ರವಾರ ಇಲ್ಲಿನ ಸುವರ್ಣ ಸೌಧದಲ್ಲಿ ಸಭೆ ನಡೆಸಿದ ಅವರು, ಈ ವಿಚಾರ ತಿಳಿಸಿದರು. ಓಲಾ, […]

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆಯನ್ನು ಖಂಡಿಸಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕರವೇ ಪ್ರವೀಣ್ ಶೇಟ್ಟಿ ಬಣ ಪ್ರತಿಭಟನೆ ಮಾಡಿದರು, ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ‘ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು’ ಎಂದು ಆಗ್ರಹಿಸಿದ್ದಾರೆ.ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನಮಂತ ದೇವಸ್ಥಾನದಿಂದ ಶಿಗ್ಲಿ ನಾಕಾವರೆಗೂ ಪಂಜಿನ ಮೆರವಣಿಗೆ ಹಾಗೂ ಮಹಾರಾಷ್ಟ್ರ ಮುಖಮಂತ್ರಿ ಉದ್ದತ ಠಾಕ್ರೆ ವೇಶದ ಸ್ಟಾಚು ಸುಡುವ ಮೂಲಕ ಕರವೇ ಪ್ರವೀಣ್ […]

ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗಳ ಕುರಿತು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಆಫ್ರಿಕಾದಂತಹ ತಂಡದ ಎದುರು ಆಡಲು ಪ್ರವಾಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ.ವಿರಾಟ್‌ಗೆ ಮತ್ತು ಬಿಸಿಸಿಐ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಇದು ಸೂಕ್ತ ಸಮಯವಾಗಿರಲಿಲ್ಲ ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.ಮಂಡಳಿ ಅಧ್ಯಕ್ಷ ಸ್ಥಾನವೂ ದೊಡ್ಡದು ಮತ್ತು ತಂಡದ ನಾಯಕನ ಸ್ಥಾನವೂ ದೊಡ್ಡದು. ಆದ್ದರಿಂದ ಒಬ್ಬರಿನ್ನೊಬ್ಬರತ್ತ ಸಾರ್ವಜನಿಕವಾಗಿ ಬೆರಳು ತೋರಿಸುವುದು ಸರಿಯಲ್ಲ. […]

ಕಾಂಗ್ರೆಸ್ ಟ್ರಾಕ್ಟರ್ ರ್ಯಾಲಿ ವಿಚಾರ ಕಂದಾಯ ಸಚಿವ  ಹೇಳಿಕೆ ನೀಡಿದ್ದಾರೆ…ಕಾಂಗ್ರೆಸ್‌ನವರಿಗೆ ನೈತಿಕ ಅಧಿಕಾರವಿಲ್ಲದೇಶದಲ್ಲಿ ಹಲವಾರು ಹಗರಣಗಳನ್ನ, ಕರ್ನಾಟಕದಲ್ಲಿ ನೀರಾವರಿ ಹಗರಣ ಮಾಡಿದ್ದಾರೆ…..ಭೂತದ ಬಾಯಲ್ಲಿ ಪ್ರವಚನ ಕೇಳಿದಂತಾಗುತ್ತಿದೆ.ಕಾಂಗ್ರೆಸ್‌ನವರು ಭ್ರಷ್ಟಾಚಾರದ ಪಿತಾಮಹರು,ಭ್ರಷ್ಟಾಚಾರ ರಹಿತ ಸರ್ಕಾರ ಬೊಮ್ಮಾಯಿ‌ ನೇತೃತ್ವದಲ್ಲಿ ನಡೀತಾ ಇದೆ.ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದಾರೆ ದಾಖಲೆ ಬಿಡುಗಡೆ ಮಾಡಬೇಕಿತ್ತು.ಗಾಳಿಯಲ್ಲಿ ಗುಂಡು ಹೊಡೆಯುವುದು ಕಾಂಗ್ರೆಸ್ ಕೆಲಸ,ಯಾವ ಟೆಂಡರ್‌ನಲ್ಲಿ ಅಕ್ರಮ ಆಗಿದೆ ಅಂತ ದಾಖಲೆ ಬಿಡುಗಡೆ ಮಾಡಲಿ,ಎಸಿಬಿ,ಕೋರ್ಟ್,ಸರ್ಕಾರ ಇಲ್ವಾ ತನಿಖೆ ಮಾಡ್ತಾರೆ.ಬಿಟ್‌ಕಾಯಿನ್ ಬಿಟ್‌ಕಾಯಿನ್ ಅಂತಾರೆ […]

ವಿಜಯ ದಿವಸ್‌ ಕಾರ್ಯಕ್ರಮದಹಿನ್ನೆಲೆ  ಬೆಳಗಾವಿಯ ಎಂಎಲ ಐ ಆರ್ ಸಿ ವಿಜಯ ದಿವಸ ಕಾರ್ಯಕ್ರಮ ದಲ್ಲಿ  ಮಾತನಾಡಿದ ಅವರು,ವಿಜಯ ದಿವಸ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶವನ್ನ ಸಿಎಂ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ. ನಾನು ಅತ್ಯಂತ ಹೆಮ್ಮೆ ಮತ್ತು ಸಂತೋಷದಿಂದ ಪಾಲ್ಗೊಂಡಿದ್ದೇನೆ.ಸೈನ್ಯ ಬರಿ ದೇಶದ ಸಂರಕ್ಷಣೆ ಮಾಡುತ್ತಿಲ್ಲ,ಆಂತರಿಕ ಭದ್ರತೆಯನ್ನ ಸಮರ್ಥ ವಾಗಿ ಮಾಡುತ್ತಿದೆ.ಇಂಡೋ ಪಾಕ್ ಯುದ್ಧದಲ್ಲಿ ನಮ್ಮ ಸೈನಿಕರು ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ.3 ಸಾವಿರಕ್ಕೂ ಅಧಿಕ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ.9 ಸಾವಿರಕ್ಕೂ […]

ಮುಂಬೈ: ಕಳೆದ 12 ತಿಂಗಳಿಂದ ಬಾಲಿವುಡ್​ ಇಂಡಸ್ಟ್ರಿ ಮಾದಕದ್ರವ್ಯ ನಿಯಂತ್ರಣ ಸಂಸ್ಥೆ (ಎನ್​ಸಿಬಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ)ದ ಕಣ್ಗಾವಲಿನಲ್ಲಿದೆ. ಬಾಲಿವುಡ್​ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಮಾದಕ ಜಾಲದ ನಂಟು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈ ಎಲ್ಲ ಬೆಳವಣಿಗೆಯಿಂದ ಬಾಲಿವುಡ್​ ಸೆಲೆಬ್ರಿಟಿಗಳಲ್ಲಿ ಭಯ ಶುರುವಾಗಿದೆ. ಯಾವಾಗ? ಯಾರು? ದಾಳಿ ಮಾಡುತ್ತಾರೆಂಬ ಆತಂಕವಿದೆ. ಅದರಲ್ಲೂ ಇತ್ತೀಚೆಗೆ ಮಾದಕ ಜಾಲ ನಂಟು ಬಾಲಿವುಡ್​ಗೂ ಬೆಸೆದುಕೊಂಡಿರುವುದರಿಂದ ಯುವ ಕಲಾವಿದರಲ್ಲಿ […]

ನಮ್ಮದು ಕೇವಲ ಮಾತುಗಳಲ್ಲ. ಕೆಲಸ ಮಾಡುತ್ತಿದ್ದೇವೆ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ ಎನ್ನುವುದು ಗೊತ್ತಿದೆ. ತಳಮಟ್ಟದಲ್ಲಿ ಮಾತಾಡಿದರೆ ದೊಡ್ಡವರಾಗಲ್ಲ. ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಹಾನಗಲ್ಲ ಕ್ಷೇತ್ರದ ಚಿಕ್ಕೌಶಿ– ಹೊಸೂರು ಗ್ರಾಮದಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರನ್ನಾದರೂ ಆಯ್ಕೆ ಮಾಡಬೇಕಾದರೆ ಜನರು ತುಲನಾತ್ಮಕವಾಗಿ ನೋಡುತ್ತಾರೆ. ಉದಾಸಿ ಆರು ಬಾರಿ ಆಯ್ಕೆಯಾಗಿದ್ದರು ಎಂದರೆ ನಿಮ್ಮ ಹೃದಯದಲ್ಲಿ […]

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಜರಾಯಿ ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ಅವರು, ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ […]

Advertisement

Wordpress Social Share Plugin powered by Ultimatelysocial