ಜ್ಯೂಸರ್ ಯಂತ್ರದೊಳಗೆ ಮರೆಮಾಚಿ ಚಿನ್ನದ ರಾಡ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ…ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್  ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ,ಮಂಗಳವಾರ  ಶಾರ್ಜಾದಿಂದ ದೇವನಹಳ್ಳಿ ಏರ್ಪೊಟ್ ಗೆ ಬಂದಿದ್ದ ವಿದೇಶಿ ವಿಮಾನದಲ್ಲಿ ಏರ್ ಅರೇಬಿಯಾ  ಜಿ9 496  ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ ಕಸ್ಟಮ್ಸ್  ವಿಭಾಗದ  ಏರ್  ಇಂಟೆಲಿಜೆನ್ಸ್ ಯೂನಿಟ್  ವಿಭಾಗದ ಅಧಿಕಾರಿಗಳು  ವಿಚಾರಣೆ ನಡೆಸಿದಾಗ ಮ್ಯಾನುಯಲ್ ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಕಳ್ಳಸಾಗಾಣಿಕೆ  […]

ಕಾಮನ್ ವೆಲ್ತ್ ಸಂಸದೀಯ ಸಂಘಟನೆ ಸಂಸದೀಯ ಪ್ರಜಾಪ್ರಭುತ್ವ ಆಳವಾದ ಬೇರು ಬಿಡಲು ಮತ್ತು ವಿಶ್ವಾದ್ಯಂತ ಚೈತನ್ಯಶೀಲ ಶಕ್ತಿಯಾಗಲು ಅನುವು ಮಾಡಿಕೊಟ್ಟಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.ಸುವರ್ಣ ವಿಧಾನಸೌಧದ ರಾಜ್ಯ ವಿಧಾನಮಂಡಲದ ಕೇಂದ್ರ ಸಭಾಂಗಣದಲ್ಲಿ ನಡೆದ ಸಿಪಿಎ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಪಿಎ ತನ್ನ ಎಲ್ಲಾ ಸಮ್ಮೇಳನಗಳಲ್ಲಿ ಶಾಸಕರ ಸಾಮಥ್ರ್ಯ ವರ್ಧನೆ, ಬಜೆಟ್ ಪ್ರಸ್ತಾವನೆಗಳು ಮತ್ತು ಪರಿಸರ ಸಮಸ್ಯೆಗಳಂತಹ ಮಹತ್ವದ ವಿಷಯಗಳನ್ನು ಕೈಗೆತ್ತಿಕೊಂಡು ವಿಶ್ಲೇಷಿಸುತ್ತಿದೆ. ಪ್ರತಿ […]

ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಹಿನ್ನೆಲೆ ಟ್ವೀಟ್‌ ಮೂಲಕ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ…ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸರ್ಕಾರ ಮುಂದಾಗಿದೆ.ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಮತಾಂತರ ಕಾಯ್ದೆ ಕಡೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ.ವಿಷಯವನ್ನು ಡೈವರ್ಟ್ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ.ಇಂತಹ ಸಮಯದಲ್ಲಿ ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಮಾಡಿರುವುದು ಖಂಡನಿಯ,ಹೀಗೆ ಏಕಾಏಕಿ ಮಾಧ್ಯಮಗಳ ನಿರ್ಭಂಧ ಮಾಡಿರುವುದು ಸರ್ಕಾರದ ನಡೆಗೆ ಹಲವು ಅನುಮಾನ ಮೂಡಿಸಿದೆ ಎಂದು ಹೆಚ್‌ ಡಿ […]

ಹಿಟ್ಲರ್‌ ಆಸ್ಥಾನದಲ್ಲಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದ ಗೊಬೆಲ್‌ನಂತೆಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.ಸರಣಿ ಟ್ವೀಟ್‌ ಮಾಡಿರುವ ಅವರು, ‘ಜೆಡಿಎಸ್‌ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ‘ಬ್ರೋಕರಪ್ಪ’ನ ಕುತಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್‌, ಈಗ ‘ಅಭಿನವ ಅರಸು’ ಎಂಬ ಪುಂಗಿ ಬಿಡುವ […]

ರಿಮೋಟ್‌ ಕಂಟ್ರೋಲ್‌ನಂತೆ ಬಿಜೆಪಿಯನ್ನು ನಿಯಂತ್ರಿಸುವ ಗರ್ಭಗುಡಿಯ ಸಂಘಟನೆಗಳ ಒತ್ತಡದಿಂದ ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಮಸೂದೆಯನ್ನು ಬಿಜೆಪಿ ಮೇಲೆ ಹಿಡಿತವುಳ್ಳ ಸಂಘಟನೆಗಳ ನಾಯಕರನ್ನು ಖುಷಿಪಡಿಸಲು ತರಲಾಗಿದೆ. ಇದರಲ್ಲಿ ಜನರ ಹಿತ ರಕ್ಷಿಸುವ ಉದ್ದೇಶವೂ ಇಲ್ಲ ಎಂದರು.ತರಾತುರಿಯಲ್ಲಿ ಏಕೆ ಮಂಡಿಸಿದ್ದಾರೆ? ಜನವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಲು ಅವಕಾಶವಿತ್ತು. ಮತಾಂತರ ನಿಷೇಧ ಮಸೂದೆಯನ್ನು […]

ಬೆಂಗಳೂರು ನಗರವನ್ನು ಮಾದರಿ ನಗರವಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.ಇಂದು ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಸ್ಮಾರ್ಟ್ ಸಿಟಿ ಅನುದಾನ ಮಾತ್ರವಲ್ಲದೆ, ನಗರೋತ್ಥಾನ ಯೋಜನೆ, ಬಿಬಿಎಂಪಿ ಹಾಗೂ ಇತರ ಇಲಾಖೆಗಳ ಅನುದಾನವನ್ನು ಬಳಸಿಕೊಂಡು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅತ್ಯಾಧುನಿಕ ಸಿಗ್ನಲ್ ವ್ಯವಸ್ಥೆ, ಸುವ್ಯವಸ್ಥಿತ ಪಾರ್ಕಿಂಗ್ ಮಾತ್ರವಲ್ಲದೆ ಪೊಲೀಸರಿಗೆ ವಿಶೇಷ ಸಮವಸ್ತ್ರ […]

ಸಂಸತ್ತಿನ ಚಳಿಗಾಲದ ಅಧಿವೇಶನದ ಸೋಮವಾರದ ದಿನದಂದು ರಾಜ್ಯಸಭೆಯಲ್ಲಿ ವಾದ-ವಾಗ್ವಾದಗಳಿಗೆ ಬರವಿರಲಿಲ್ಲ. ಸಮಾಜವಾದಿ ಪಾರ್ಟಿ ಸಂಸದೆ ಜಯಾ ಬಚ್ಚನ್ ಬಿಜೆಪಿ ಸಂಸದರ ವಿರುದ್ಧ ವಾಕ್ಸಮರದಲ್ಲಿ ಭಾಗಿಯಾಗಿದ್ದರು.ಸದನದಲ್ಲಿ ವಿಪರೀತ ಗದ್ದಲದ ಕಾರಣ ಸಭೆಯನ್ನು ಸಂಜೆ 5 ಗಂಟೆವರೆಗೂ ಮುಂದೂಡಲಾಗಿತ್ತು.ಒಂದು ಹಂತದಲ್ಲಿ ಖಜಾನೆ ಪೀಠಗಳ ಮೇಲೆ ಗರಂ ಆದ ಜಯಾ ಬಚ್ಚನ್, ನಿಮ್ಮ ಪಾಲಿನ ಕೆಟ್ಟ ದಿನಗಳು ಬರಲಿವೆ, ಎಂದಿದ್ದಾರೆ.ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳು ಮಸೂದೆ, 2021ರ ಮೇಲೆ ಚರ್ಚೆಯಲ್ಲಿ ಭಾಗಿಯಾಗಲು ಜಯಾ […]

ಮೇಕೆದಾಟು ಪಾದಯಾತ್ರೆಗೆ  ಸುಪ್ರೀಂ ಕೋರ್ಟ್ ನಿರ್ದೇಶನ ಇದೆ ಜನವರಿ9-19 ರವರೆಗೆ ಪಾದಾಯಾತ್ರೆ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ…9 ರಂದು ಪಾದಯಾತ್ರೆ ಪ್ರಾರಂಭ ಮಾಡ್ತಿವಿ,ಐದು ದಿನ ಸಿಟಿಯಲ್ಲಿ ಪಾದಯಾತ್ರೆ ಮಾಡ್ತಿವಿ,ಅಪಾರ್ಟ್ಮೆಂಟ್ ನಲ್ಲಿರೋ ಹಾಗೂ ಇತರ ಜನರು ಕಾಲ್ ಮಾಡ್ತೊದ್ದಾರೆ.ಪಾದಯಾತ್ರೆಯಲ್ಲಿ ಪಾರ್ಟಿಸಿಪೇಟ್ ಮಾಡ್ತಿವಿ ಅಂತೊದ್ದಾರೆ.ಸಮಾಜ ಸೇವಕರು ಸಾಹಿತಿಗಳು ಇದ್ರಲ್ಲಿ‌ ಪಾರ್ಟಿಸಿಪೇಟ್ ಮಾಡಲು ಆಹ್ವಾನ ನೀಡ್ತಿದ್ದೇವೆಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡ್ತಿವಿ,ಯಾವ ಸಂಘಟನೆ ಯಾರಾದ್ರು ಈ […]

ಪುಂಡಾಟಿಕೆ ಮೆರೆದ ಪುಂಡರಿಗೆ  ಅತೀ ಕಠಿಣ ಶಿಕ್ಷೆ ಕೊಡಬೇಕು ಎಂದು ರವಿಕುಮಾರ್  ಅವರು ಆಗ್ರಹಿಸಿದ್ದಾರೆ…ಕನಿಷ್ಠ 10 ವರ್ಷ ಶಿಕ್ಷೆ ನೀಡಬೇಕು ಎಂಬ ಕಾನೂನೂ ತರಬೇಕು.ಕೆಲವು ಸರ್ಕಾರಿ ವಾಹನ ಜಖಂಗೊಳಿಸಿದ್ದಾರೆ.ಅವರಿಂದಲ್ಲೇ ಸಾರ್ವಜನಿಕ ನಷ್ಟ ಉಂಟು ಮಾಡಿದವರಿಂದಲ್ಲೇ ವಸೂಲಿ ಮಾಡಬೇಕು.ಉಪ್ಪು ತಿಂದುವರು ನೀರು ಕುಡಿಯಬೇಕು ಎಂಬಂತೆ.ತಪ್ಪು ಮಾಡಿದವರಿಂದಲೇ ನಷ್ಟ ವಸೂಲಿ ಮಾಡದೇ ಬಿಡಬಾರದು.ಕಿಡಿಗೇಡಿಗಳು ಕನ್ನಡದ ಧ್ವಜ ಸುಟ್ಟಿದ್ದಾರೆ.ನಾವು ಮಹಾರಾಷ್ಟ್ರ ಧ್ವಜ ಸುಡಬಹುದಿತ್ತು.ಆದರೆ ನಾವು ಆ ದ್ವೇಷದ ಕೆಲಸ ಮಾಡಬಾರದು ‌.ಸುವರ್ಣ ಸೌಧ ಕಟ್ಟಿದ್ದು […]

ಬೆಳಗಾವಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ಬಗ್ಗೆ ಇಂದು ನಿರ್ಧಾರವಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡು ಮುಂದಿನ ಬುಧವಾರದ ನಂತರ ಮಸೂದೆ ಮಂಡನೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಅನುಮೋದನೆ ಸಾಧ್ಯತೆಯಿದ್ದು, ಪ್ರತಿಭಟನೆಗಳ ನಡುವೆ ವಿಧೇಯಕ ಕುರಿತ ಚರ್ಚೆಗೂ ಅನುವು ಮಾಡಿಕೊಡಬೇಕಿದೆ.ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ […]

Advertisement

Wordpress Social Share Plugin powered by Ultimatelysocial