ವಾಹನ ನೋಂದಣಿ ಫಲಕದಲ್ಲಿ ನಂಬರ್ ಮಾತ್ರ ಇರಬೇಕು. ವಾಹನಗಳ ನಂಬರ್ ಹೊರತುಪಡಿಸಿ ಬೇರೆ ಅಕ್ಷರ ಅಥವಾ ಸಂಘಟನೆ ಹುದ್ದೆ ಹೆಸರು, ಇಲಾಖೆಗಳ ಹೆಸರು, ಇದ್ದರೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಮೋಟಾರು ವಾಹನ ಕಾಯ್ದೆ 50-51ರಂತೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.ಇತ್ತ, ವಾಹನಗಳ ನವೀಕರಣ ಶುಲ್ಕ ಏರಿಕೆಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಕೇಳಿಬಂದಿದೆ. […]

ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಪೊಲೀಸ್​ ಠಾಣೆ ಬಳಿ ದಿಢೀರ್  ಪ್ರತ್ಯಕ್ಷವಾಗಿದ್ದಾರೆ. ಸೈಕಲ್​ ರವಿ ತಮ್ಮ ವಕೀಲರೊಂದಿಗೆ ವಿ.ವಿ ಪುರಂ ಠಾಣೆಗೆ  ಭೇಟಿಕೊಟ್ಟಿದ್ದಾರೆ. ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕೆಲ ಕುಖ್ಯಾತ ದುಷ್ಕರ್ಮಿಗಳು ಸೈಕಲ್ ರವಿ ಹತ್ಯೆಗೆ ಸ್ಕೆಚ್ ಹಾಕಿದ್ದರು. ಅಷ್ಟೇ ಅಲ್ಲದೇ ಇತ್ತೀಚೆಗೆ ರಾಬರ್ಟ್​ ಸಿನಿಮಾ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಮತ್ತು ಅವರ ಸಹೋದರ ದೀಪಕ್ ಹತ್ಯೆಗೂ ಸಂಚು ಸಹ ರೂಪಿಸಿದ್ದರು. ಪ್ರಕರಣ ಸಂಬಂಧ […]

ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆರೆಕಂಡು ಮೂರು ದಿನಗಳಾಗಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಒಂದ್ಕಡೆ ಹೆಚ್ಚು ಕಲೆಕ್ಷನ್ ಮಾಡ್ತಿದ್ರೆ, ಮತ್ತೊಂದ್ಕಡೆ ರಾಬರ್ಟ್ ಸಿನಿಮಾ ಪೈರಸಿ ವಿಚಾರದಲ್ಲೂ ಹೆಚ್ಚು ಸುದ್ದಿಯಾಗ್ತಿದೆ. ರಾಬರ್ಟ್ ಸಿನಿಮಾ ಪೈರಸಿ ಮಾಡಿದ್ದ ಒಬ್ಬೊಬ್ಬರೇ  ಸಿಲುಕಿ ಕೊಳ್ತಿದ್ದಾರೆ. ಸದ್ಯ ಬೆಂಗಳೂರಿನ ಪ್ರಸನ್ನ ಥಿಯೇಟರ್  ನಲ್ಲಿ ವಿಶ್ವನಾಥ್ ಎಂಬಾತ, ರಾಬರ್ಟ್ ಸಿನಿಮಾ ಪೈರಸಿ ಕಾಪಿಯನ್ನು ಇಟ್ಕೊಂಡು, ಸಿನಿಮಾ ನೋಡಲು ಬರುವವರಿಂದ ಹಣ ಪಡೆದು ಅವರಿಗೆ, ಚಿತ್ರವನ್ನು ಶೇರ್ […]

ಸುಮಾರು 50 ಮರಗಳಿಗೆ ಅನಧಿಕೃತವಾಗಿ ಅಳವಡಿಸಿದ್ದ ಮೊಳೆಗಳಿಂದ ಮರಗಳಿಗೆ ಮುಕ್ತಿ ಕೊಡಿಸಲಾಗಿತ್ತು. ವೃಕ್ಷ ಬಚಾವೋ  ಆಂದೋಲನ  ದಡಿಯಲ್ಲಿ  ಬೆಂಗಳೂರಿನ  ಕೆ. ಆರ್.ಪುರದ ಗಾರ್ಡನ್ ಸಿಟಿ ಕಾಲೇಜು ರಸ್ತೆಯಲ್ಲಿರುವ ತೆರೆವುಗೊಳಿಸುವ ಕಾರ್ಯಕ್ರಮವನ್ನು ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದವರು  ಮರಗಳಿಗೆ ಜಾಹೀರಾತು, ನಾಮಫಲಕ, ಮೊಳೆ, ಪಿನ್ ಗಳನ್ನು ಹೊಡೆದು ಹಾನಿಯುಂಟು ಮಾಡಲಾಗುತ್ತಿದ್ದು, ಮನುಷ್ಯನಿಗೆ ಜೀವಿಸುವುದಕ್ಕೆ ನೆರವಾಗಿರುವ ಮರಗಳಿಗೆ ಹಾನಿಯುಂಟು ಮಾಡಬಾರದು, ಈ ಬಗ್ಗೆ  ಸರ್ಕಾರ ಕಡಿವಾಣ […]

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಮಹಾ ಕ್ರೂರಿ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ. 16ರಂದು 38 ಪೈಸೆ ಹೆಚ್ಚಳ ಮಾಡಲಾಗಿತ್ತು. ಈಗ ಫೆಬ್ರವರಿ 17ರಂದು […]

ಪ್ರೀತಿಸುವ ವಿಚಾರದಲ್ಲಿ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯತೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಣಸೆಗಟ್ಟೆಪಾಳ್ಯ ಗ್ರಾಮದಲ್ಲಿ ನಡೆದಿದೆ.ಶಶಿಕಲಾ (23) ಮನೆಯಲ್ಲಿ ನೇಣಿಗೆ ಶರಣಾದ ಯುವತಿಯಾಗಿದ್ದು, ಮೃತ ಶಶಿಕಲಾ ಹಲವಾರು ತಿಂಗಳಿಂದ ಬೆಂಗಳೂರು ಮೂಲದ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇವರಿಬ್ಬರ ಪ್ರೀತಿ ವಿಚಾರದಲ್ಲಿ ತಡರಾತ್ರಿ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮನನೊಂದು ಶಶಿಕಲಾ ತಡರಾತ್ರಿ […]

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದ್ದು, ಸಿನಿಮೀಯ ರೀತಿ ಜಯನಗರ ಠಾಣೆ ಪೊಲೀಸರು ಮನೆಗಳ್ಳನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ದೇವರ ಬೀಸನಳ್ಳಿ ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿ, ಕಳೆದ ಒಂದು ವಾರದಲ್ಲಿ ನಾಲ್ಕು ಮನೆ ದೋಚಿ ಪರಾರಿಯಾಗಿದ್ದ ಖದೀಮ ಜಯನಗರ ಅಪಾರ್ಟ್ಮೆಂಟ್ ಒಂದರ ಬಳಿ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಬಂಧಿಸಲು ಮುಂದಾದ ಖಾಕಿ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲು ಮುಂದಾಗಿದ್ದಾನೆ, ಕೂಡಲೇ ಇನ್ಸ್ಪೆಕ್ಟರ್ […]

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಾಟುವಾಗ ಅಪಘಾತವಾಗಿ ಓರ್ವ ವ್ಯಕ್ತಿ ಸಾವನ್ನಪಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಳಿ ನಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಾಗಳಾಗಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮಹ್ಮದ್ ಸಗೀರ್ (30) ಮೃತ ದುರ್ದೈವಿ.ಇನ್ನು ಈ ಪ್ರಕರಣವು ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ :ಕೊಲೆ ಆರೋಪಿ ಕಾಲಿಗೆ ಗುಂಡೇಟು

ಬೆಳ್ಳಂಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಕೊಲೆ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಸಂತೋಷ್(21) ಕಾಲಿಗೆ ಗುಂಡು ತಗುಲಿದೆ. ರಾಜಗೋಪಾಲನಗರದ ಜಿ.ಕೆ. ಡಬ್ಲ್ಯೂ ಲೇಔಟ್ನಲ್ಲಿ ಫೈರಿಂಗ್ ನಡೆದಿದ್ದು, ಸಂತೋಷ್ ಅದೇ ಬಡಾವಣೆಯ ರೌಡಿಶೀಟರ್ ಆಗಿದ್ದ ಎಂದು ತಿಳಿದು ಬಂದಿದೆ. ಇದೇ ಜ. 9ರಂದು ಶ್ರೀನಿವಾಸ್ ಅಲಿಯಾಸ್ ಕರಿ ಸೀನನ ಕೊಲೆ ನಡೆದಿದ್ದು, ಸಂತೋಷ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಹಾಡಹಹಗಲೇ ರಾಜಗೋಪಾಲನಗರದ ಕಸ್ತೂರಿ ನಗರದಲ್ಲಿ ಆರೋಪಿಗಳು ಹತ್ಯೆಗೈದಿದ್ದರು. […]

ಇಂದು ದೆಹಲಿ ರೈತರ ಹೋರಾಟ ಬೆಂಬಲಿಸಿ ರಾಜ್ಯದಲ್ಲಿಯೂ ಸಹ ಹಲವು ರೈತ ಸಂಘಟನೆಗಳು ಹೆದ್ದಾರಿ ತಡೆ ಮಾಡಲು ಸಜ್ಜಾಗಿವೆ. ವಿವಿಧ ರೈತ ಸಂಘಟನೆಗಳು ಮತ್ತು ಇತರೆ ಸಂಘಟನೆಗಳು ಈ ಹೆದ್ದಾರಿ ತಡೆಗೆ ಬೆಂಬಲ ನೀಡಿವೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಹೆದ್ದಾರಿ ತಡೆದು ಬಂದ್ ಮಾಡಲಿದ್ದಾರೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ಖಾಕಿ ಪಡೆ ನಿಗಾ ವಹಿಸಿದೆ. ದೆಹಲಿಯಲ್ಲಿ ನಡೆದ ರೈತರ ದಂಗೆಯಂತೆ ಇಲ್ಲಿ ಯಾವುದೇ ಸಣ್ಣ ಘಟನೆಯೂ ನಡೆಯದಂತೆ ಕಟ್ಟುನಿಟ್ಟಿನ […]

Advertisement

Wordpress Social Share Plugin powered by Ultimatelysocial