ಮದ್ಯ ಖರೀದಿಸುವವರ ವಯೋಮಾನವನ್ನು 21 ರಿಂದ 18ಕ್ಕೆ ಇಳಿಸುವ ಅಬಕಾರಿ ಇಲಾಖೆ ನಿರ್ಧಾರಕ್ಕೆ ಅಕ್ಷೇಪ ವ್ಯಕ್ತವಾದ ಹಿನ್ನೆಲೆ ಹಿಂದಿನ ವ್ಯವಸ್ಥೆಯೇ ಮುಂದುವರಿಯಲಿದೆ.ಬೆಂಗಳೂರು: ರಾಜ್ಯದಲ್ಲಿ ಮದ್ಯ ಖರೀದಿ ವಯೋಮಾನ 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿ ಪರಿಷ್ಕರಿಸಿ ಹೊರಡಿಸಿದ್ದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆ ಆಗಿದ್ದು, ಸದ್ಯ ಇರುವ ಹಳೆ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ […]

ಮಹಿಳೆಯರನ್ನು ಬಾಡಿಗೆ ಇಲ್ಲವೇ ಕಳ್ಳಸಾಗಣೆ ಮೂಲಕ ಕರೆತಂದು ಮಕ್ಕಳಿಗೆ ನಿದ್ದೆ ಬರುವ ಔಷಧಿ ನೀಡಿ ಮಲಗಿಸಿ ಭಿಕ್ಷಾಟನೆ ಮಾಡಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ೫೫ ಮಂದಿಯನ್ನು ರಕ್ಷಿಸಿದ್ದಾರೆ.ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಭಿಕ್ಷಾಟನೆ ಮಾಡುತ್ತಿದ್ದ ಜಾಲವನ್ನು ಬೇಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.ನಗರದ ಕೇಂದ್ರ, ಉತ್ತರ,ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ವೈಟ್ ಫೀಲ್ಡ್ ವಿಭಾಗದಲ್ಲಿ […]

2023ನೇ ಸಾಲಿನ ಸಿವಿಲ್ ಸರ್ವೀಸಸ್ ಪರೀಕ್ಷೆ (UPSC Exam) ದಿನಾಂಕಗಳು ಹೊರಬಿದ್ದಿದ್ದು, ಮೇ 28ರಂದು ಪ್ರಿಲಿಮ್ಸ್​ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಐಎಎಸ್​, ಐಪಿಎಸ್​ (IAS-IPS) ಆಗಬೇಕು ಎಂಬ ಗುರಿಯೊಂದಿಗೆ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷಾ ತಯಾರಿಯಲ್ಲಿ (UPSC Preparation) ತೊಡಗಿದ್ದಾರೆ. ಅವರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಅಭ್ಯರ್ಥಿಗಳು UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಐಚ್ಛಿಕವಾಗಿ ಯಾವ ವಿಷಯವನ್ನು ತೆಗೆದುಕೊಳ್ಳಬೇಕೆಂದು ಗೊಂದಲಕ್ಕೊಳಗಾಗುತ್ತಾರೆ. ಹೆಚ್ಚು ಅಂಕಗಳನ್ನು ಗಳಿಸುವ ವಿಷಯವನ್ನು ಆಯ್ಕೆ ಮಾಡಬೇಕೇ […]

  ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಲೀಲಾವತಿ ಅವರ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಹಿರಿಯ ನಟ ಶ್ರೀನಾಥ್ , ನಟಿ ಪದ್ಮಾ ವಾಸಂತಿ ನಟ ಸುಂದರಾಜ್, ಪ್ರಮೀಳಾ ಜೋಷಾಯಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ.ಎರಡು ತಿಂಗಳು ಹಿಂದೆಯಷ್ಟೇ ನಟಿಯರಾದ ಶ್ರುತಿ ಸೇರಿದಂತೆ ಹಲವರು ಲೀಲಾವತಿ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಇದೀಗ ಶ್ರೀನಾಥ್ ಮತ್ತು ತಂಡ ಲೀಲಾವತಿ ನಿವಾಸಕ್ಕೆ ಭೇಟಿ […]

ಕೋವಿಡ್‌ನ (Covid 19) ಪರಿಣಾಮಗಳು ಉಸಿರಾಟ ವ್ಯವಸ್ಥೆ ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಹಲವಾರು ಸಂಶೋಧನೆಗಳು ಹಾಗೂ ಅಧ್ಯಯನಗಳಿಂದ ಖಾತ್ರಿಗೊಂಡಿದ್ದು ಇದೀಗ ವೈರಸ್‌ನ ಪರಿಣಾಮಗಳು ಹೃದಯದ ಮೇಲೂ ದೀರ್ಘಕಾಲವಾಗಿ ಇರುತ್ತವೆ ಎಂಬುದಾಗಿ ಕೆಲವೊಂದು ಪುರಾವೆಗಳು ದೃಢಪಡಿಸಿವೆ. ವೈರಸ್‌ನಿಂದ (Virus) ಚೇತರಿಸಿಕೊಂಡವರು ಕೆಲವೊಂದು ಹೃದಯ ಸಮಸ್ಯೆಗಳನ್ನು ಹೊಂದಿರುವುದು ನಿಜ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಅನಾರೋಗ್ಯದಿಂದ ಸಾವನ್ನಪ್ಪಿದ ಕೋವಿಡ್-19 ವ್ಯಕ್ತಿಗಳು ಹೃದಯ ಕಾಯಿಲೆಗಳನ್ನು ಹೊಂದಿದ್ದರು ಹಾಗೂ ಹೃದಯದ (Heart) ಮೇಲೆ […]

  ಶಿವಸೇನೆ ಹೆಸರು, ಚಿಹ್ನೆಯನ್ನು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ನೀಡಿರುವುದನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟೀಸ್ ಜಾರಿ ಮಾಡಿದೆ.ಏಕನಾಥ ಶಿಂಧೆ ಬಣವನ್ನು ಶಿವಸೇನೆ ಎಂದು ಗುರುತಿಸಿ ಅದಕ್ಕೆ ‘ಬಿಲ್ಲು-ಬಾಣ’ ಚಿಹ್ನೆ ನಿಗದಿಪಡಿಸಿದ ಚುನಾವಣಾ ಸಮಿತಿಯ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಚುನಾವಣಾ ಆಯೋಗಕ್ಕೆ […]

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲೆ ಮಾಡಿ ವಾಟ್ಸಾಪ್ ಸ್ಟೇಟಸ್ ಹಾಕಿ ಖತರ್ನಾಕ್ ಪತಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದಿದೆ. ನಾಗಮಲೆಯ ಲಕ್ಷ್ಮಿ ಕೊಲೆಯಾದ ದುರ್ದೈವಿ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಎರಭಯ್ಯನ ಹಳ್ಳಿಯ ಮುನಿರಾಜ್ ಎಂಬವರನ್ನು ಮದುವೆಯಾಗಿದ್ದಳು. ಬಳಿಕ ತನ್ನ ಗಂಡನನ್ನು ತೊರೆದು ಬೇರೊಬ್ಬನೊಂದಿಗೆ ನಾಗಮಲೆಯಲ್ಲಿ ವಾಸವಾಗಿದ್ದಳು. ಇದರಿಂದ ಬೇಸತ್ತಿದ್ದ ಗಂಡ ಮುನಿರಾಜ್ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.ಪತ್ನಿಯ ಮೇಲೆ ಕಲ್ಲು […]

MPassport:ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೇಶದಲ್ಲಿ ಪಾಸ್ಪೋರ್ಟ್ಗಳನ್ನು ವಿತರಿಸುವ ನೋಡಲ್ ಸಚಿವಾಲಯವಾಗಿದ್ದು ಎಂಪಾಸ್ಪೋರ್ಟ್ (mPassport) ಪೊಲೀಸ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ಪಾಸ್ಪೋರ್ಟ್ ನೀಡುವ ಸಮಯದಲ್ಲಿ ಪೊಲೀಸ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಸರಳೀಕರಿಸಲು ಮತ್ತು ತ್ವರಿತಗೊಳಿಸಲು ಪ್ರಯತ್ನಿಸುತ್ತದೆ.ಪಾಸ್ಪೋರ್ಟ್ ನೀಡುವ ಪೊಲೀಸ್ ಪರಿಶೀಲನೆಯು ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದೆ. ಮತ್ತು ಸಮಯ ಕಳೆದಂತೆ ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಯಾರೆಲ್ಲ mPassport ಪೊಲೀಸ್ ಅಪ್ಲಿಕೇಶನ್ ಬಳಸಬಹುದು?ಪೊಲೀಸ್ ಠಾಣೆಯ ಬಳಕೆದಾರರು mPassport […]

ಕರ್ನಾಟಕ ರತ್ನ ಪುನೀತ್ ರಾಜ್ ಅವರ ನೆನಪಿನಲ್ಲಿ ಬೆಂಗಳೂರು ಮತ್ತು ಚಾಮರಾಜ ನಗರ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಸತಿ ಸಚಿವ ವಿ‌.ಸೋಮಣ್ಣ ಹೇಳಿದ್ದಾರೆ. ಐದು ದಿನಗಳ ಉಲ್ಲಾಸ್ ತರಬೇತಿ ಶಾಲೆ ಮತ್ತು ಅಪ್ಪು ಮಕ್ಕಳ ಚಿತ್ರೋತ್ಸವದ ಚಾಲನೆ ನೀಡಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಸಮುದಾಯಭವನ ಉದ್ಘಾಟನೆ ಮಾಡಲಾಗಿದ್ದು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.ಇದಲ್ಲದೆ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇ […]

ಭುನೇಶ್ವರ್​: ಹುಟ್ಟು ಉಚಿತ ಸಾವು ಖಚಿತ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸತ್ತಾಗ ನಮ್ಮ ಜೊತೆ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದೂ ಕೂಡ ಸತ್ಯ. ಆದರೂ ಈ ಜಗತ್ತಿನ ಒಂದು ಸುಂದರವಾದ ಮನೆ ಹೊಂದಬೇಕು ಮತ್ತು ಐಷಾರಾಮಿ ಜೀವನ ನಡೆಸಬೇಕು ಎಂದು ಎಲ್ಲರು ಕನಸು ಕಟ್ಟಿಕೊಂಡಿರುತ್ತಾರೆ.ಆದರೆ, ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಈ ದಂಪತಿಗೆ ಇದಕ್ಕೆ ಹೊರತಾಗಿದ್ದಾರೆ.ತಮಗಾಗಿ ಸುಂದರವಾದ ಮನೆಯನ್ನು ಕಟ್ಟಿಕೊಳ್ಳುವ ಬದಲಾಗಿ ಬದುಕಿರುವಾಗಲೇ ತಮಗೋಸ್ಕರ ಸಮಾಧಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial