ಗುರು ಶ್ರೀ ಅರವಿಂದರು ಅತೀತ ಮಾನಸ ಯೋಗದ ಪ್ರವರ್ತಕರು. ಈ ಕೆಲಸದಲ್ಲಿ ಅವರಿಗೆ ಸಹಕಾರಿಯಾದವರು ಮುಂದೆ ಶ್ರೀಮಾತೆ ಎಂದು ಪೂಜನೀಯರಾದ ಮೀರಾ ಅಲ್ಫಾಸ ಅವರು. ಅರವಿಂದರಂತೆಯೇ ಸಾಕ್ಷಾತ್ಕಾರಗಳನ್ನು ಪಡೆದುಕೊಂಡ ಶ್ರೀಮಾತೆಯವರು “ಅತೀತ ಮಾನಸಯೋಗವು ಪೃಥ್ವಿಯ ಮುಂದಿನ ವಿಕಸನವನ್ನು ತ್ವರಿತಗೊಳಿಸುವುದೆಂದು” ಪ್ರತಿಪಾದಿಸಿದರು.ಮೀರಾ ಅಲ್ಫಾಸ ಅವರು 1878ರ ಫೆಬ್ರವರಿ 21ರಂದು ಪ್ಯಾರಿಸ್ಸಿನಲ್ಲಿ ಜನಿಸಿದರು. ಮೀರಾ ಅಲ್ಫಾಸಾ ಅವರು ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತಿದ್ದು ತಮ್ಮ 36ನೆಯ ವಯಸ್ಸಿನಲ್ಲಿ. ಪಾಶ್ಚಾತ್ಯ […]

ಸುರೇಶ್ ಹೆಬ್ಳೀಕರ್ ಯಾವಾಗಲೂ ಸುದ್ಧಿ ಮಾಡುವ ಚಿತ್ರರಂಗದಲ್ಲಿನ ಸದ್ದುಗದ್ದಲವಿಲ್ಲದ ಒಬ್ಬ ಸೂಪರ್ ಸ್ಟಾರ್. ಚಿತ್ರರಂಗದಲ್ಲಿ ಅವರೊಬ್ಬ ಯಶಸ್ವೀ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಪರಿಸರ ಸಂರಕ್ಷಣೆಯಲ್ಲಿ ನಿಷ್ಠೆಯ ಕಾರ್ಯಕರ್ತ.ಸುರೇಶ್ ಹೆಬ್ಳೀಕರ್ 1948ರ ಫೆಬ್ರವರಿ 22ರಂದು ಜನಿಸಿದರು. ಧಾರವಾಡದ ಪ್ರೆಸೆಂಟೇಷನ್ ಕಾನ್ವೆಂಟ್, ಬಾಸೆಲ್ ಮಿಷನ್ ಶಾಲೆಗಳಲ್ಲಿ ಓದಿ, ಕರ್ನಾಟಕ ಕಾಲೇಜಿನಲ್ಲಿ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಗಳಿಸಿದರು.ಸುರೇಶ್ ಹೆಬ್ಳೀಕರ್ ಸುರದ್ರೂಪಿ ನಾಯಕನಟರಾಗಿ ಕಂಗೊಳಿಸಿದ ಸರಳ ಸುಂದರ ಚಿತ್ರ ‘ಅಪರಿಚಿತ’ […]

ಡಾ.ವೀಣಾ ಶಾಂತೇಶ್ವರ 1945ರ ಫೆಬ್ರುವರಿ 22ರಂದು ಧಾರವಾಡದಲ್ಲಿ ಜನಿಸಿದರು. ಸ್ತ್ರೀ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದ ಸುಶಿಕ್ಷಿತ ಮನೆತನದಲ್ಲಿ ಹುಟ್ಟಿದ ವೀಣಾ ಶಾಂತೇಶ್ವರ ಅವರಿಗೆ ಮೂರನೆಯ ವರ್ಷದಲ್ಲೇ ಅಕ್ಷರಾಭ್ಯಾಸಮಾಡಿಸಿದ ತಂದೆ ಪ್ರೊ. ಬಲರಾಮಾಚಾರ್ಯ ಎಲಬುರ್ಗಿ ಅವರು ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ತಾಯಿ ಇಂದಿರಾ ಮಹಾರಾಷ್ಟ್ರದವರಾಗಿದ್ದು ಪ್ರಗತಿಪರ ಮನೋಭಾವದವರು.ವೀಣಾ ಅವರ ಪ್ರಾರಂಭಿಕ ಶಿಕ್ಷಣ ಬಾಗಲಕೋಟೆಯಲ್ಲಿ ನೆರವೇರಿತು. ಶಾಲಾ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಎಂ.ಎ. ಪದವಿ ಪಡೆಯುವವರೆಗೂ ಅವರದ್ದು ಉನ್ನತ ಶ್ರೇಣಿಯ […]

  ಅ.ನ. ಸುಬ್ಬರಾಯರು ಕನ್ನಡ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹಲವು ನಿಟ್ಟಿನಲ್ಲಿ ದುಡಿದವರು.ಮೂಲಭೂತವಾಗಿ ಚಿತ್ರಕಲೆಯಲ್ಲಿ ಜೀವನ ಪ್ರಾರಂಭಿಸಿ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಅ.ನ. ಸುಬ್ಬರಾಯರು 1891ರ ಫೆಬ್ರವರಿ 22ರಂದು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ತಂದೆ ಅಕ್ಕಿಹೆಬ್ಬಾಳು ನರಸಿಂಹಯ್ಯ. ತಾಯಿ ವೆಂಕಮ್ಮ. ಸುಬ್ಬರಾಯರ ಪ್ರಾರಂಭಿಕ ಶಿಕ್ಷಣ ನಾಗಮಂಗಲದಲ್ಲಿ ನಡೆಯಿತು. ಅಲ್ಲಿ ವಿಶ್ವಕರ್ಮರ ಮನೆಯಲ್ಲಿ ರಚಿಸುತ್ತಿದ್ದ ವಿಗ್ರಹಗಳಿಂದ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿತು. ಕಲಾ ಅಧ್ಯಾಪಕರಾದ ಎಂ. ಜಗದೀಶನ್ ಅವರಿಂದ […]

ಪಂಜೆ ಮಂಗೇಶರಾಯರು ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರು.ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ದಂಪತಿಗಳ ಮಗನಾಗಿ ಮಂಗೇಶರಾಯರು 1874ರ ಫೆಬ್ರವರಿ 22ರಂದು ಬಂಟವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ದವರಾಗಿದ್ದರು. ಅವರು ವಿವಾಹವಾಗಿದ್ದು ನಾಡಿನಲ್ಲಿ ಪ್ರಸಿದ್ಧರಾದ ಬೆನಗಲ್ ರಾಮರಾಯರ ತಂಗಿ ಗಿರಿಜಾಬಾಯಿ ಅವರನ್ನು. ಬಿ.ಎ ವಿದ್ಯಾಭ್ಯಾಸ ಮುಗಿಸಿ ಎಲ್.ಟಿ ತರಬೇತಿ ಪಡೆದ ಪಂಜೆಯವರು ಪ್ರಾರಂಭದಲ್ಲಿ ಶಿಕ್ಷಕರಾಗಿ, ಮಂಗಳೂರಿನ ಶಾಲಾ ಸಬ್ ಇನ್ಸ್ಪೆಕ್ಟರ್ ಆಗಿ, ಇನ್ಸ್ಪೆಕ್ಟರ್ ಆಗಿ […]

ಆಧುನಿಕ ಮೈಸೂರು ಸಂಸ್ಥಾನದ ಏಳ್ಗೆಗೆ ಭಾಷ್ಯ ಬರೆದುದೇ ಅಲ್ಲದೆ ಅದರ ಮುಂದಿನ ಮಹೋನ್ನತ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಿಕೊಟ್ಟವರು ಚಾಮರಾಜೆಂದ್ರ ಒಡೆಯರ್ ಅವರು. ವಿಶ್ವ ಸರ್ವಧರ್ಮ ಸಮಾವೇಶದಲ್ಲಿ ಪಾಲ್ಗೊಳ್ಳಲು ಸ್ವಾಮಿ ವಿವೇಕಾನಂದರಿಗೆ ಎಲ್ಲ ರೀತಿಯ ಬೆಂಬಲ ನೀಡಿದ ಕೀರ್ತಿ ಕೂಡ ಈ ಮಹಾಶಯರಿಗೆ ಸಂದಿದೆ.‍ಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನದ ಬೆಟ್ಟದ ಕೋಟೆ ಶಾಖೆಯ ಸರ್ದಾರ್ ಚಿಕ್ಕ ಕೃಷ್ಣರಾಜ ಅರಸ್‍ ಅವರ ಮೂರನೇ ಮಗನಾಗಿ 1863ರ ಫೆಬ್ರವರಿ 22ರಂದು ಜನಿದರು. […]

ಭಗವಾನ್‌ ಅವರನ್ನು ಕಳೆದುಕೊಂಡಿದ್ದು, ನಮ್ಮ ಕುಟುಂಬದ ಹಿರಿಯರನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಭಗವಾನ್‌ ಅವರು ನಮ್ಮ ಕುಟುಂಬದ ಸದಸ್ಯರ ರೀತಿ ನಮ್ಮ ಜತೆ ಇಷ್ಟು ವರ್ಷಗಳ ಕಾಲ ಜೀವನ ಮಾಡಿದ್ದಾರೆ. ನಮ್ಮ ತಂದೆಯವರ ಮೂರನೇ ಸಿನಿಮಾದಲ್ಲಿಭಗವಾನ್‌ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ಆತ್ಮೀಯರಲ್ಲಿಭಗವಾನ್‌ ಸಹ ಒಬ್ಬರಾಗಿದ್ದಾರೆ. ಅಪ್ಪಾಜಿಗೆ ಭಗವಾನ್‌ ಮಾರಲ್‌ ಸಪೋರ್ಟ್‌ ಆಗಿದ್ದರು. ನಮ್ಮ ತಂದೆಯ ಎಲ್ಲಾಮ್ಯೂಸಿಕಲ್‌ ಕಾರ್ಯಕ್ರಮಗಳಲ್ಲಿಅವರು ಇರುತ್ತಿದ್ದರು. ಭಗವಾನ್‌ ಅವರದು ಶಿಸ್ತಿನ ವ್ಯಕ್ತಿತ್ವ. ಕೊನೆಯವರೆಗೂ […]

ಕಂಗನಾ ರಣಾವತ್ ಅವರು  ಮತ್ತೊಮ್ಮೆ ಬಾಲಿವುಡ್ ವಿರುದ್ಧ ಮಾತಿನ ಪ್ರಹಾರ ಶುರು ಮಾಡಿದ್ದಾರೆ. ಟ್ವೀಟ್ ಮೂಲಕ ಅವರು ಬಾಲಿವುಡ್‌ನ ನೆಪೋಟಿಸಂ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.”ಮತ್ತೊಮ್ಮೆ ಪ್ರಶಸ್ತಿ ನೀಡುವ ಸಮಯ ಬಂದಿದೆ, ಅಷ್ಟೇ ಅಲ್ಲದೆ ನೆಪೋಟಿಸಂ ಮಾಫಿಯಾ ಶುರುವಾಗಿ ಪ್ರತಿಭಾವಂತರಿಗೆ ಸಿಗಬೇಕಿರುವ ಪ್ರಶಸ್ತಿಗಳನ್ನು ಕಸಿದುಕೊಳ್ಳಲಿದೆ. 2022ರ ಅದ್ಭುತವಾಗಿ ಕಲೆ ಪ್ರದರ್ಶನ ಮಾಡಿದವರ ಲಿಸ್ಟ್ ಇಲ್ಲಿದೆಕಂಗನಾ ರಣಾವತ್ ಅವರ ಟ್ವೀಟ್ ನೋಡಿ ಕೆಲವರು ಬೇಸರ ಹೊರಹಾಕಿದ್ದರೆ, ಇನ್ನೂ ಕೆಲವರು ಮೆಚ್ಚಿದ್ದಾರೆ. ನೆಪೋ ಮಕ್ಕಳು […]

ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಯಾರಿಗೆ ಗೊತ್ತಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಈ ಬ್ಯೂಟಿಗೆ ಅಭಿಮಾನಿಗಳಿದ್ದಾರೆ. ವಿಶ್ವ ಸುಂದರಿ ಪಟ್ಟ ಗೆದ್ದು ಭಾರತದ ಘನತೆ ಹೆಚ್ಚಿಸಿದ ಈ ಸುಂದರಿ ಸೌಂದರ್ಯಕ್ಕೆ ಮಾರು ಹೋದವರು ಅದೆಷ್ಟೋ ಮಂದಿ. ಇನ್ನೇನು 50ನೇ ವರ್ಷದ ಸನಿಹದಲ್ಲಿ ಇದ್ದರೂ, ಐಶ್ವರ್ಯಾ ಸೌಂದರ್ಯಕ್ಕೆ ಸರಿಸಾಟಿ ಯಾರು ಹೇಳಿ. ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ. ಹಾಗಂತ ಇವರ ಮನೆಯಲ್ಲಿ ಇವರೊಬ್ಬರೇ […]

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಹೀಗಂತ ಮದ್ಯ ಬಾಟಲಿ ಮೇಲೆ ಅಚ್ಚೊತ್ತಿದ್ದರು ಕುಡಿಯುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಅದರಲ್ಲೂ ಕೆಲವರು ಕದ್ದು ಮುಚ್ಚಿ ಸುರಪಾನ ಮಾಡುತ್ತಾರೆ. ಇನ್ನು ಕೆಲವರು ಬಹಿರಂಗವಾಗಿಯೇ ಮದ್ಯ ಸೇವನೆ ಮಾಡುತ್ತಾರೆ ಮತ್ತು ಡ್ರಿಂಕ್ಸ್​ ಮಾಡುವ ಬಗ್ಗೆ ಹೇಳಿಕೊಳ್ಳುತ್ತಾರೆ. ಅದರಂತೆಯೇ ಇದೀಗ ಬಾಲಿವುಡ್​ನ ಖ್ಯಾತ ನಿರ್ದೇಶಕ ಸೌರಭ್​​ ಶುಕ್ಲಾ ದುಬಾರಿ ಬೆಲೆಯ ರಮ್​ ಕುಡಿದ ಬಗ್ಗೆ ಹೇಳಿಕೊಂಡಿದ್ದಾರೆ. ಅದನ್ನ ಯಾರು ಕೊಟ್ರು ಗೊತ್ತಾ? ಸೌರಭ್​​ ಶುಕ್ಲಾ ಬಾಲಿವುಡ್​ನ ರಣ್​ಬೀರ್​ […]

Advertisement

Wordpress Social Share Plugin powered by Ultimatelysocial