ಇನ್ನು ಮುಂದೆ ತಾಜ್‌ವೆಸ್ಟೆಂಡ್‌ನ‌ಲ್ಲಿ ಇರೋದಿಲ್ಲ: ಎಚ್‌ಡಿಕೆ

 

ವಿಧಾನಸಭೆ: ನಾನು ಇನ್ನು ಮುಂದೆ ತಾಜ್‌ ವೆಸ್ಟೆಂಡ್‌ನ‌ಲ್ಲಿ ವಾಸ ಮಾಡುವುದಿಲ್ಲ. ಇನ್ನು ಮುಂದೆ ಏನಿದ್ದರೂ, ಕರ್ಮ ಭೂಮಿ ರಾಮನಗರದ ಕೇತಗಾನಹಳ್ಳಿಯಲ್ಲಿ ವಾಸ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಲ್ಟನ್‌ ರೆಸಾರ್ಟ್‌ ಅಕ್ರಮವಾಗಿ ಸ್ಥಾಪಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ಹೇಳಿದ ಅವರು, ನಾನು ಯಾರ ಪರವಾಗಿಯೂ ಇಲ್ಲ ವಾಸ್ತವದ ಪರವಾಗಿ ಮಾತನಾಡುತ್ತೇನೆ. ಯಾರಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ಸ್ವಭಾವ ಬೆಳೆಸಿಕೊಂಡಿದ್ದೇನೆ. ನಾನು 1985 ರಲ್ಲಿಯೇ ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಆಗಲೇ ಒಂದು ವರ್ಷದಲ್ಲಿ 4 ಲಕ್ಷ ರೂ. ಬಾಳೆ ಬೆಳೆದಿದ್ದೇನೆ.ನಮ್ಮ ತಂದೆಗೆ ಏನೋ ಹುಚ್ಚು ರೈತರ ಮಕ್ಕಳು ಜಮೀನು ಹೊಂದಿರಬೇಕು ಎಂದು ಜಮೀನು ತೆಗೆದುಕೊಳ್ಳಲು ಹೇಳಿದ್ದರು. ನಮ್ಮನ್ನು ಮಣ್ಣಿನ ಮಕ್ಕಳು ಎಂದು ಕೆಲವರು ಆಡಿಕೊಳ್ಳುತ್ತಾರೆ. ನಾನು ಸಿನೆಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ ಜಮೀನು ಖರೀದಿಸಿದ್ದೆ. ಅದರ ವಿರುದ್ಧವೂ ಅಕ್ರಮ ಜಮೀನು ಕಬಳಿಸಿದ್ದಾರೆ ಎಂದು ಪ್ರಕರಣ ದಾಖಲಿಸಿ ಇಪ್ಪತೈದು ವರ್ಷ ಕೇಸ್‌ ನಡೆಸಿದರು.2011ರ ಕೆಪಿಎಸ್‌ಸಿ ಪಾಸಾದ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಸಂದರ್ಭದಲ್ಲಿ ಆಗ ಅನ್ಯಾಯ ಆಗಿದೆ ಎಂದು ಹೇಳಿದ್ದ ಅಭ್ಯರ್ಥಿಯ ತಂದೆ ನನ್ನ ವಿರುದ್ಧ ಅನಗತ್ಯ ದಾಖಲೆ ಸೃಷ್ಟಿಸಿ ಪ್ರಕರಣ ದಾಖಲಿಸಿದರು. ಅದನ್ನು ಎದುರಿಸಿ, ಈಗ ಅಲ್ಲಿಯೇ ವಾಸವಾಗಿದ್ದೇನೆ. ಕೃಷಿ ಮಾಡಿಕೊಂಡು ನಿಜವಾದ ಕೃಷಿ ಅನುಭವ ಪಡೆದುಕೊಂಡಿದ್ದೇನೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಹಿತಿ ಕೊಟ್ಟಾಗ ಯೂಕ್ರೇನ್​ನಿಂದ ಮರಳದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರಕ್ಕೆ ಖರ್ಚಾದದ್ದು ಎಷ್ಟು ಗೊತ್ತಾ?

Thu Mar 10 , 2022
ಕೀವ್​: ರಷ್ಯಾ ಯೂಕ್ರೇನ್​ ಮೇಲೆ ಸಮರ ಸಾರಲಿದೆ ಎಂಬ ಅನುಮಾನ ವ್ಯಕ್ತವಾಗುತ್ತಲೇ ಭಾರತ ಸರ್ಕಾರ ಯೂಕ್ರೇನ್​ನಲ್ಲಿ ಇರುವ ವಿದ್ಯಾರ್ಥಿಗಳಿಗೆ ದೇಶ ಬಿಟ್ಟು ಬರುವಂತೆ ತಿಳಿಸಿತ್ತು. ಆದರೆ ಯೂಕ್ರೇನ್​ನ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹೋಗಲು ಬಿಟ್ಟಿರಲಿಲ್ಲ.    ಆನ್​ಲೈನ್​ ತರಗತಿ ನಡೆಸುವುದಿಲ್ಲ, ಕಾಲೇಜಿಗೆ ಅಟೆಂಡ್​ ಆಗಲೇಬೇಕು, ರಷ್ಯಾ ಯುದ್ಧ ಮಾಡುವುದಾಗಿ 10 ವರ್ಷಗಳಿಂದ ಹೇಳುತ್ತಿದ್ದು, ಏನೂ ಆಗುವುದಿಲ್ಲ ಎಂದು ಕಾಲೇಜುಗಳು ಹೇಳಿದ್ದನ್ನು ನಂಬಿ ವಿದ್ಯಾರ್ಥಿಗಳು ಅಲ್ಲಿಯೇ ಉಳಿದುಕೊಂಡರು. ಇನ್ನು ಕೆಲವು ವಿದ್ಯಾರ್ಥಿಗಳು ಭಾರತ ಸರ್ಕಾರ […]

Advertisement

Wordpress Social Share Plugin powered by Ultimatelysocial