ಟೊಮೆಟೋ ರೈಸ್ ಮಾಡುವ ವಿಧಾನ ಇಲ್ಲಿದೆ !

 

 

ಬೇಕಾಗುವ ಪದಾರ್ಥಗಳು
•ಎಣ್ಣೆ-4-5 ಚಮಚ
•ಚಕ್ಕೆ- 2
•ಲವಂಗ-4
•ಏಲಕ್ಕಿ-2
•ಪಲಾವ್ ಎಲೆ- 2-3ತುಪ್ಪ-ಸ್ವಲ್ಪ
•ಈರುಳ್ಳಿ-1
•ಪುದೀನಾ-ಸ್ವಲ್ಪ
•ಉಪ್ಪು-ರುಚಿಗೆ ತಕ್ಕಷ್ಟು
•ಟೊಮೆಟೋ- 2-3
•ಬಟಾಣಿ- ಒಂದು ಸಣ್ಣ ಬಟ್ಟಲು
•ಖಾರದ ಪುಡಿ- 1 ಚಮಚ
•ಅರಿಶಿನದ ಪುಡಿ- ಸ್ವಲ್ಪ
•ಗರಂ ಮಸಾಲಾ- ಅರ್ಧ ಚಮಚ
•ಅಕ್ಕಿ- 1 ಬಟ್ಟಲು
•ನೀರು- ಒಂದೂವರೆ ಬಟ್ಟಲು
ಮಾಡುವ ವಿಧಾನ
•ಮೊದಲು ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ತುಪ್ಪ ಹಾಕಿ ಕಾಯಲು ಬಿಡಿ.
•ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಈರುಳ್ಳಿ, ಬಟಾಣಿ, ಟೊಮೆಟೋ, ಪುದೀನಾ ಹಾಕಿ ಕೆಂಪಗೆ ಹುರಿದುಕೊಳ್ಳಿ.
•ಕೆಂಪಗಾದ ಬಳಿಕ ಉಪ್ಪು, ಖಾರದ ಪುಡಿ, ಅರಿಶಿಣದ ಪುಡಿಸ, ಗರಂ ಮಸಾಲಾ, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೂರು ಕೂಗು ಕೂಗಿಸಿಕೊಂಡರೆ ರುಚಿಕರವಾದ ಟೊಮೆಟೋ ರೈಸ್ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕಮಿಷನ್ ದಂದೆ | Black Money | Bagalkote | Zilla panchayat |

Wed Jan 12 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial