ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣ:

ಮೋನು ಮನೇಸರ್‌ (Photo: Twitter)ಜೈಪುರ್: ಇಬ್ಬರು ಮುಸ್ಲಿಂ ಯುವಕರ ಮೃತದೇಹಗಳು ಹರ್ಯಾಣಾದ ಭಿವಾನಿ ಎಂಬಲ್ಲಿ ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ಪ್ರಮುಖ ಆರೋಪಿ, ಬಜರಂಗದಳ ಕಾರ್ಯಕರ್ತ ಮೋನು ಮನೇಸರ್‌ ಎಂಬಾತನಿಗೆ ರಾಜಸ್ಥಾನ ಪೊಲೀಸರು ಗುರುವಾರ ಕ್ಲೀನ್‌ ಚಿಟ್‌ ನೀಡಿದ್ದಾರೆಂದು ಹಲವು ಟಿವಿ ಮಾಧ್ಯಮ ವರದಿಗಳನ್ನಾಧರಿಸಿ freepressjournal.in ವರದಿ ಮಾಡಿದೆ.ನಾಸಿರ್‌ ಮತ್ತು ಜುನೈದ್‌ ಎಂಬ ಹೆಸರಿನ ಈ ಇಬ್ಬರು ಮುಸ್ಲಿಂ ಯುವಕರ ಶಂಕಿತ ಹತ್ಯೆ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಎಂಟು ಆರೋಪಿಗಳನ್ನು ಗುರುತಿಸಿದ್ದರು. ಮೃತ ಯುವಕರು ಗೋಕಳ್ಳಸಾಗಣಿಕೆದಾರರು ಎಂದು ಆರೋಪಿಸಲಾಗಿತ್ತು.ಮೋನು ಮನೇಸರ್‌ ಫೋಟೋ ಸೇರಿದಂತೆ ಇತರ ಆರೋಪಿಗಳ ಹೆಸರುಗಳು ಮತ್ತು ಫೋಟೋಗಳನ್ನೂ ಪೊಲೀಸರು ಬಿಡುಗಡೆಗೊಳಿಸಿದ್ದರು. ಆದರೆ ಮರುದಿನವೇ ಮೋನು ಮನೇಸರ್‌ ಮತ್ತು ಲೋಕೇಶ್‌ ಸಿಂಗ್ಲಾ ಎಂಬಿಬ್ಬರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂದು ಹೇಳಲಾಗಿದೆ.ಹಿಂದು ಸಂಘಟನೆಗಳು ಭಿವಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಪಂಚಾಯತ್‌ ಕೂಡ ನಡೆಸಿ ಮೋನು ಮನೇಸರ್‌ಗೆ ಬೆಂಬಲ ಘೋಷಿಸಿವೆ.ಮೋಹಿತ್‌ ಯಾದವ್‌ ಅಲಿಯಾಸ್‌ ಮೋನು ಮನೇಸರ್‌, ಗುರುಗ್ರಾಮ್‌ ಬಜರಂಗದಳದ ಜಿಲ್ಲಾ ಸಂಚಾಲಕನಾಗಿದ್ದಾನೆ ಹಾಗೂ ಗೋ ರಕ್ಷಣಾ ಪಡೆಯೊಂದಿಗೂ ನಂಟು ಹೊಂದಿದ್ದಾನೆಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಡೀಲರ್ ಶಾಪ್‌ಗೆ ಬೀಗ ಹಾಕಿ ಅಕ್ರೋಶ.

Thu Feb 23 , 2023
  ಕಳೆದ ಎಂಟು ತಿಂಗಳ ಹಿಂದೆಯಷ್ಟೇ ೩೩ ಲಕ್ಷ ರೂ.ಗೆ ಖರೀದಿಸಿದ್ದ ಜೆಸಿಬಿಯು ಪದೇಪದೇ ರಿಪೇರಿಯಾಗುತ್ತಿದ್ದರೂ ಕಂಪನಿಯವರು ಬಗೆಹರಿಸದೆ ಬೇಜವಾಬ್ದಾರಿ ತೋರುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಡೀಲರ್ ಶಾಪ್‌ಗೆ ಬೀಗ ಹಾಕಿ ಜೆಸಿಬಿಯನ್ನು ಅಡ್ಡ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಆರ್.ಟಿ.ಒ ಕಚೇರಿ ಬಳಿ ಮಂಗಳವಾರ ನಡೆಯಿತು. ತಾಲೂಕಿನ ಉದ್ದಪ್ಪನಹಳ್ಳಿ ನವೀನ್‌ಗೌಡ ಕಳೆದ ೮ ತಿಂಗಳ ಹಿಂದೆ ೩೩ ಲಕ್ಷ ರೂಗೆ ಇಲ್ಲಿನ ಆರೆನ್‌ಎಸ್ ಜೆಸಿಬಿ ಡೀಲರ್ ಬಳಿ ೫೦ […]

Advertisement

Wordpress Social Share Plugin powered by Ultimatelysocial