ಉಕ್ರೇನ್‌ಗೆ ಅಮೆರಿಕದಿಂದ ೪೫೦ ಮಿಲಿಯನ್ ನೆರವು.

ರಷ್ಯಾ ವಿರುದ್ಧದ ಹೋರಾಟದಲ್ಲಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಅಷ್ಟು ಪ್ರಮಾಣದಲ್ಲಿ ಉಕ್ರೇನ್‌ಗೆ ಅಮೆರಿಕಾ ಬೆಂಬಲ ನೀಡಲಿದೆ. ಯುದ್ದದಲ್ಲಿ ಉಕ್ರೇನ್ ಮೇಲುಗೈ ಸಾಧಿಸುವ ಬಗ್ಗೆ ನಮಗೆ ಎಲ್ಲಾ ವಿಶ್ವಾಸವಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ. ಅಮೆರಿಕಾ ಅಧ್ಯಕ್ಷರಾಗಿ ಇದು ಬೈಡೆನ್ ಅವರ ಮೊದಲ ಉಕ್ರೇನ್ ಭೇಟಿಯಾಗಿತ್ತು.ಉಕ್ರೇನ್‌ಗೆ ಅಘೋಷಿತ ಹಾಗೂ ಅನಿರೀಕ್ಷಿತ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಶ್ಯದ ಆಕ್ರಮಣವನ್ನು ಒಂದು ವರ್ಷ ಎದುರಿಸಿ ನಿಂತ ಉಕ್ರೇನಿಯನ್ನರ ಶೌರ್ಯವನ್ನು ಶ್ಲಾಘಿಸಿದರು. ಬೈಡೆನ್ ಅವರು ಉಕ್ರೇನ್ ಭೇಟಿಯ ಬಳಿಕ ಅಮೆರಿಕಾ ಕಾರ್ಯದರ್ಶಿ (ವಿದೇಶಾಂಗ ಸಚಿವ) ಆಂಟನಿ ಬ್ಲಿಂಕೆನ್ ಅವರು ಹೊವಿಟ್ಜರ್‌ಗಳಿಗೆ ಮದ್ದುಗುಂಡುಗಳು, ಹಿಮಾರ್ಸ್ ರಾಕೆಟ್ ಸಿಸ್ಟಮ್, ಜಾವೆಲಿನ್ ಕ್ಷಿಪಣಿಗಳು ಮತ್ತು ವಾಯು ಕಣ್ಗಾವಲು ರಾಡಾರ್‌ಗಳನ್ನು ಒಳಗೊಂಡಂತೆ ಸುಮಾರು ೪೫೦ ಮಿಲಿಯನ್ ಡಾಲರ್ ಮೌಲ್ಯದ ಭದ್ರತಾ ನೆರವಿನ ಹೊಸ ಪ್ಯಾಕೇಜ್ ಅನ್ನು ಘೋಷಿಸಿದರು. ಸಹಜವಾಗಿಯೇ ಇದು ಉಕ್ರೇನ್ ಪಾಳಯದಲ್ಲಿ ಸಂತಸ ಮೂಡಿಸಿದೆ. ಇನ್ನು ಭೇಟಿಯ ವೇಳೆ ಝೆಲೆನ್ಸ್ಕಿ ಜೊತೆ ಮಾತನಾಡಿದ ಬೈಡೆನ್, ಒಂದು ವರ್ಷದ ಹಿಂದೆ ರಶ್ಯ ಪಡೆ ಆಕ್ರಮಣ ಆರಂಭಿಸಿದಾಗ ಉಕ್ರೇನ್ ತ್ವರಿತಗತಿಯಲ್ಲೇ ರಶ್ಯದ ಕೈವಶವಾಗಲಿದೆ ಎಂಬ ಭಾವನೆಯಿತ್ತು. ಆದರೆ ಒಂದು ವರ್ಷವಾದರೂ ಉಕ್ರೇನ್ ದೃಢವಾಗಿ ನಿಂತಿದೆ. ಉಕ್ರೇನ್ ಜತೆ ಪ್ರಜಾಪ್ರಭುತ್ವವೂ ಸ್ಥಿರವಾಗಿ ನಿಂತಿದೆ. ಅಮೆರಿಕ ನಿಮ್ಮ ಜತೆಗೆ ಇರಲಿದೆ, ಇಡೀ ವಿಶ್ವವೇ ನಿಮ್ಮ ಜತೆಗಿರಲಿದೆ. ರಶ್ಯ ಆರಂಭಿಸಿದ ಕ್ರೂರ ಮತ್ತು ಅನ್ಯಾಯದ ಯುದ್ಧಕ್ಕೆ ಸೋಲೇ ಗತಿಯಾಗಲಿದೆ. ಈ ಅನ್ಯಾಯದ ಯುದ್ಧದ ಪರಿಣಾಮವನ್ನು ಉಕ್ರೇನ್ ಅನುಭವಿಸಬೇಕಾಗಿದೆ ಮತ್ತು ಈ ದೇಶ ಮಾಡಿರುವ ತ್ಯಾಗವೂ ಎಣಿಕೆಗೆ ಮೀರಿದ್ದಾಗಿದೆ. ಮುಂಬರುವ ದಿನಗಳು ಇನ್ನಷ್ಟು ಕಠಿಣವಾಗಿರಲಿದೆ ಎಂಬುದು ನಮಗೆ ತಿಳಿದಿದೆ. ಆದರೆ ಉಕ್ರೇನ್ ದೇಶವನ್ನು ಜಾಗತಿಕ ನಕ್ಷೆಯಿಂದ ಅಳಿಸಿ ಹಾಕುವ ರಶ್ಯದ ಉದ್ದೇಶ ಈಡೇರದು. ಪುಟಿನ್ ಅವರ ಆಕ್ರಮಣದ ಯುದ್ಧ ವಿಫಲವಾಗಲಿದೆ ಎಂದು ಬೈಡನ್ ಹೇಳಿದರು. ಅಮೆರಿಕ ವಾಗ್ದಾನ ನೀಡಿರುವ ಹೊಸ ಸೇನಾ ನೆರವಿನಲ್ಲಿ ಹೊವಿಟ್ಝರ್ ಫಿರಂಗಿಗಳ ಮದ್ದುಗುಂಡು, ಟ್ಯಾಂಕ್ ನಿರೋಧಕ ಕ್ಷಿಪಣಿಗಳು, ವಾಯು ಸರ್ವೇಕ್ಷಣಾ ರೇಡಾರ್‌ಗಳು ಹಾಗೂ ಇತರ ಶಸ್ತ್ರಾಸ್ತ್ರ ಸೇರಿದೆ. ಆದರೆ ನೂತನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈ ಪಟ್ಟಿಯಲ್ಲಿ ಸೇರಿಲ್ಲ. ಬೈಡನ್ ಹಾಗೂ ಝೆಲೆನ್ಸ್ಕಿ ಸೈಂಟ್ ಮೈಕೆಲ್ಸ್ ಕ್ಯಾಥೆಡ್ರಾಲ್‌ಗೆ ಭೇಟಿ ನೀಡಿ, ಅಲ್ಲಿರುವ ಯುದ್ಧವೀರರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಬೈಡನ್ ಜತೆ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಗಳು ಹಾಗೂ ಇದುವರೆಗೆ ಪೂರೈಸದ ಶಸ್ತ್ರಾಸ್ತ್ರಗಳನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಸಿರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.ಅಮೆರಿಕಾ ಅಧ್ಯಕ್ಷರಿಗೆ ನೀಡಲಾಗುವ ಭದ್ರತೆಯು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಕಠಿಣಕಾರಿಗಳಲ್ಲಿ ಒಂದಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಉಕ್ರೇನ್ ನಲ್ಲಿ ಅಮೆರಿಕ ಯಾವುದೇ ರೀತಿಯ ಸೇನಾ ನೆಲೆಯನ್ನು ಹೊಂದಿಲ್ಲದ ಕಾರಣ ಯುದ್ಧಗ್ರಸ್ತ ದೇಶಕ್ಕೆ ಭೇಟಿ ನೀಡುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭದ್ರತೆ ಒದಗಿಸುವುದು ಕಠಿಣ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಪೋಲಂಡ್‌ನ ವಾಯುಕ್ಷೇತ್ರದ ಮೂಲಕ ಅಮೆರಿಕದ ಕಣ್ಗಾವಲು ವಿಮಾನಗಳು, ಇ-೩ ವಾಯುಗಾಮಿ ರೇಡಾರ್‌ಗಳು, ಇಲೆಕ್ಟ್ರಾನಿಕ್ ಆರ್ಸಿ-೧೩೫ ಯುದ್ಧವಿಮಾನಗಳು ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ಹದ್ದಿನಕಣ್ಣು ಇರಿಸಿತ್ತು ಎಂದು ಸೇನಾ ಮೂಲಗಳು ಹೇಳಿವೆ. ಬೈಡೆನ್ ಪೋಲೆಂಡ್‌ನಿಂದ ೧೦ ಗಂಟೆಗಳ ರೈಲು ಪ್ರಯಾಣದ ಮೂಲಕ ರಹಸ್ಯವಾಗಿ ಕೀವ್‌ಗೆ ತಲುಪಿದ್ದರು. ನಂತರ ಭೇಟಿಯ ಬಳಿಕ ಪೋಲೆಂಡ್‌ಗೆ ಮರಳಿದರು. ಅದೂ ಅಲ್ಲದೆ ಉಕ್ರೇನ್‌ಗೆ ಪ್ರಯಾಣ ಬೆಳೆಸುವ ಕೆಲವೇ ಗಂಟೆಗಳ ಮುನ್ನ ರಶ್ಯಾಗೆ ಈ ಬಗ್ಗೆ ಮಾಹಿತಿ ಕೂಡ ನೀಡಲಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ ಸುಬಿ ಸುರೇಶ್ ವಿಧಿವಶ !

Wed Feb 22 , 2023
ಫೆ.22. ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್ (41) ನಿಧನರಾಗಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ಸುಬಿ ಸುರೇಶ್ ಕಳೆದ ಕೆಲ ಸಮಯದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಿಸದೆ ಫೆ.22 ರಂದು ಇಂದು ನಿಧನರಾಗಿದ್ದಾರೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial