ಬೇಸಿಗೆಯಲ್ಲಿ ಶುರುವಾಗುತ್ತೆ ಉರಿಮೂತ್ರ ಸಮಸ್ಯೆ, ಮನೆಯಲ್ಲೇ ಕೆಲವು ಪರಿಹಾರಗಳು ತಿಳಿಯೋಣ.

ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿದ್ದಂತೆ ಉರಿಮೂತ್ರದ ಸಮಸ್ಯೆ ಆವರಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ಮೂತ್ರನಾಳದಲ್ಲಿ ಸೋಂಕು. ಮೂತ್ರ ಹೊರಹರಿಯುತ್ತಿರುವಾಗ ಒಳಗಿನಿಂದ ಉರಿ, ಪದೇ ಪದೇ ಕಡಿಮೆ ಪ್ರಮಾಣದಲ್ಲಿ ಮೂತ್ರವಾಗುತ್ತಿರುವುದು, ಅನೈಚ್ಛಿಕವಾಗಿ ಮೂತ್ರ ಹೊರಹೋಗುವುದು, ಮೂತ್ರಹೊರಹರಿಸಲು ಹೆಚ್ಚಿನ ಒತ್ತಡ ಬೇಕಾಗುವುದು ಮತ್ತು ನೋವು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳು.
ಪುರುಷರಲ್ಲಿ, ದೊಡ್ಡದಾದ ಪ್ರಾಸ್ಟೇಟ್ ಗ್ರಂಥಿಯಿಂದಾಗಿ ಅವರು ಮೂತ್ರ ವಿಸರ್ಜನೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪದೇ ಪದೇ ಬರುವ ಮೂತ್ರವನ್ನು ವಿಸರ್ಜಿಸುವಾಗ ಆಗುವ ನೋವನ್ನು ನಾವು ದೀರ್ಘಕಾಲ ಹಿಡಿದಿಡಲು ಸಾಧ್ಯವೇ ಇಲ್ಲ. ಅಂದಹಾಗೆ ಈ ಎಲ್ಲಾ ಲಕ್ಷಣಗಳು ನಿಮ್ಮಲ್ಲಿ ಕಂಡುಬರುತ್ತಿದೆ ಎಂದರೆ ಮೂತ್ರನಾಳದಲ್ಲಿ ಸೋಂಕಾಗಿದೆ (ಯುಟಿಐ) ಎಂದರ್ಥ. ಈ ಸೋಂಕನ್ನು ಹಗುರವಾಗಿ ಪರಿಗಣಿಸಿದರೆ ಮೂತ್ರಪಿಂಡ, ಮೂತ್ರಕೋಶದ ಮೇಲೆಯೇ ಪರಿಣಾಮ ಬೀರುತ್ತದೆ.

ಈ ಸೋಂಕು ಉಂಟಾಗಲು ವಿವಿಧ ಕಾರಣಗಳಿವೆ. ಪ್ರಮುಖವಾಗಿ ರೋಗನಿರೋಧಕ ವ್ಯವಸ್ಥೆಯ ಮೂಲಕ ಮೂತ್ರದ ಮೂಲಕ ಹೊರದಬ್ಬಲ್ಪಟ್ಟ ಬ್ಯಾಕ್ಟೀರಿಯಾಗಳು ಮೂತ್ರದ ಕ್ಷಾರದಲ್ಲಿಯೂ ಸಾಯದೇ ಮೂತ್ರನಾಳದ ಒಳಭಾಗವನ್ನು ಅಂಟಿಕೊಂಡು ಸೋಂಕು ಉಂಟುಮಾಡುತ್ತವೆ.

ಕೆಲವೊಂದು ಪರಿಹಾರಗಳು ಉರಿಮೂತ್ರಕ್ಕೇ:

ವಿಟಮಿನ್ ಸಿ:
ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿವುದರಿಂದ ಮೂತ್ರ ಉರಿ ಸಮಸ್ಯೆ ನಿವಾರಣೆಯಾಗುತ್ತದೆ. ಸಾಕಷ್ಟು ಹಣ್ಣು ಹಾಗೂ ತರಕಾರಿಯನ್ನು ಸೇವಿಸಿ. ಬೇಸಿಗೆಯಲ್ಲಿ ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಬಳಸುವುದು ಉತ್ತಮ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ ಇವೇ ಮೊದಲಾದ ಹಣ್ಣು ತರಕಾರಿಗಳು ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೈಸರ್ಗಿಕವಾಗಿ ದೇಹ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಲು ವಿಟಮಿನ್ ಸಿ ನೆರವಾಗುತ್ತದೆ. ವಿಟಮಿನ್ ಸಿ ಸೇವನೆಯಿಂದ ಮೂತ್ರ ಇನ್ನಷ್ಟು ಆಮ್ಲೀಯವಾಗುವುದರಿಂದ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಹಾಗೂ ತನ್ಮೂಲಕ ಉರಿಮೂತ್ರ ನಿವಾರಣೆಯಾಗುತ್ತದೆ. ಇದಕ್ಕಾಗಿ ವಿಟಮಿನ್ ಸಿ ಹೆಚ್ಚಿರುವ ಚೀಪುವ ಚಾಕಲೇಟುಗಳನ್ನು ಸೇವಿಸಬಹುದು. ಇಲ್ಲದಿದ್ದರೆ ವಿಟಮಿನ್ ಸಿ ಹೆಚ್ಚಿರುವ (ಕಿತ್ತಳೆ, ಮೂಸಂಬಿ, ಲಿಂಬೆ, ಅನಾನಾಸು, ಸ್ಟ್ರಾಬೆರಿ, ಟೊಮಾಟೋ ಮೊದಲಾದ ಹಣ್ಣುಗಳು) ಆಹಾರಗಳನ್ನು ಸೇವಿಸಿ.

ಪಾರ್ಸ್ಲೆ ಎಲೆಗಳು:
ನೋಡಲು ಕೊತ್ತಂಬರಿ ಎಲೆಗಳಂತೆಯೇ ತೋರುವ ಪಾರ್ಸ್ಲೆ ಎಲೆಗಳು ಉರಿಮೂತ್ರಕ್ಕೆ ಉತ್ತಮವಾಗಿದೆ. ಚಿಕ್ಕ ಪ್ರಮಾಣದಿಂದ ಮಧ್ಯಮ ಪ್ರಮಾಣದ ಉರಿಮೂತ್ರಕ್ಕೆ ಈ ಎಲೆಗಳು ಸೂಕ್ತವಾಗಿವೆ. ತೀವ್ರತರದ ಸೋಂಕು ಉಂಟಾಗಿದ್ದರೆ ಇದು ತರವಲ್ಲ. ಮೂತ್ರನಾಳ, ಮೂತ್ರಕೋಶದಲ್ಲಿ ಸೋಂಕುಂಟಾಗಲು ಕಾರಣವಾಗಿದ್ದ ಬ್ಯಾಕ್ಟೀರಿಯಾಗಳನ್ನು ಹದ್ದುಬಸ್ತಿಗೆ ತರಲು ಈ ಸೊಪ್ಪಿನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ.ಇದಕ್ಕಾಗಿ ಪಾರ್ಸ್ಲೆ ಎಲೆಗಳನ್ನು ಕೊಂಚ ಹಾಲು, ನೀರು ಮತ್ತು ಕಲ್ಲುಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ (ನಾಲ್ಕು ಲೋಟ ನೀರಿಗೆ ಒಂದು ಕಟ್ಟು ಪ್ರಮಾಣದಲ್ಲಿ) ದಿನಕ್ಕೆರಡು ಬಾರಿ ಕುಡಿಯಿರಿ.

ದಾಳಿಂಬೆ:
ನಿರಂತರ ಉರಿಮೂತ್ರ ಸಮಸ್ಯೆ ಕಾಡುತ್ತಿದ್ರೆ ಪ್ರತಿನಿತ್ಯ ದಾಳಿಂಬೆ ಜ್ಯೂಸ್‌ ಕುಡಿಯಿರಿ. ಇದರಿಂದ ಈ ಸಮಸ್ಯೆ ದೂರವಾಗುವುದು.

ಎಳನೀರು:

ಎಳನೀರಉರಿಮೂತ್ರಕ್ಕೆ ಎಳನೀರು ಅತ್ಯುತ್ತಮವಾಗಿದೆ. ಅದರಲ್ಲೂ ಕೇಸರಿಬಣ್ಣದ ಎಳನೀರು ಉರಿಮೂತ್ರಕ್ಕೆ ಹೇಳಿ ಮಾಡಿಸಿದ ಔಷಧಿಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ದೊಡ್ಡ ಎಳನೀರನ್ನು(ಚಿಕ್ಕದಾದರೆ ಎರಡು) ಕುಡಿಯಿರಿ, ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬೇಡಿ. ಸುಮಾರು ಒಂದು ಘಂಟೆಯ ಬಳಿಕ ಹಲವು ಬಾರಿ ಮೂತ್ರವಿಸರ್ಜನೆಯಾಗುತ್ತದೆ. ಪ್ರತಿ ವಿಸರ್ಜನೆಯೂ ಹಿಂದಿನದಕ್ಕಿಂತ ಕಡಿಮೆ ಉರಿ ನೀಡುತ್ತಾ, ಕ್ರಮೇಣ ಮಾಯವಾಗುತ್ತದೆ. ಒಂದು ವೇಳೆ ಹಸಿರು ಎಳನೀರು ಸೇವಿಸುವುದಾದಲ್ಲಿ ಈ ನೀರಿಗೆ ಒಂದು ಚಿಕ್ಕ ತುಂಡು ಕಲ್ಲುಸಕ್ಕರೆ ಸೇರಿಸಿ ಅದು ಕರಗುವವರೆಗೆ ಕಲಕಿ ಬಳಿಕ ಕುಡಿಯಿರಿ. ರಾತ್ರಿ ಮಲಗುವ ಮುನ್ನ ಇನ್ನೊಂದು ಎಳನೀರು ಕುಡಿಯಿರಿ (ಚಿಕ್ಕದಾದರೆ ಎರಡು). ರಾತ್ರಿ ಕೆಲವು ಬಾರಿ ಮೂತ್ರಕ್ಕೆ ಅವಸರವಾದಷ್ಟೂ ಒಳ್ಳೆಯದು. ಎಳನೀರು ಉಲ್ಬಣಗೊಂಡ ಉರಿಮೂತ್ರಕ್ಕೂ ಉತ್ತಮ ಔಷಧಿಯಾಗಿದೆ.ಒಂದೆರಡು ದಿನಗಳಲ್ಲಿಯೇ ಉರಿಮೂತ್ರ ಕಡಿಮೆಯಾಗುತ್ತದೆ. ಆದರೆ ಇಲ್ಲಿಗೇ ನಿಲ್ಲಿಸಬೇಡಿ, ಕನಿಷ್ಟ ಒಂದು ವಾರವಾದರೂ ನಿರಂತರವಾಗಿ ದಿನಕ್ಕೊಂದಾದರೂ ಎಳನೀರು ಕುಡಿಯಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮಾಜವಾದಿ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ಅಪರ್ಣಾ ಯಾದವ್ ವಿರೋಧದ ವಿರುದ್ಧ ಕಿಡಿಕಾರಿದ್ದಾರೆ

Sun Mar 13 , 2022
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರಿ ಗೆಲುವಿನ ನಂತರ, ಚುನಾವಣೆಗೆ ಕೇವಲ ಒಂದು ತಿಂಗಳ ಮೊದಲು ಬಿಜೆಪಿ ಸೇರಿದ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಇವಿಎಂಗಳ ರಿಗ್ಗಿಂಗ್ ಅನ್ನು ಖಂಡಿಸಿದ್ದಾರೆ. ಅಥವಾ ಎಲೆಕ್ಟ್ರಾನಿಕ್ ಮತ ಯಂತ್ರಗಳು. “ಇವಿಎಂಗಳನ್ನು ರಿಗ್ಗಿಂಗ್ ಮಾಡಬಾರದು…” ಯುಪಿ ಚುನಾವಣೆಗೆ ನಿನ್ನೆ ಎಣಿಕೆ ಮಾಡುವಾಗ ಇವಿಎಂ ವಶಪಡಿಸಿಕೊಂಡ ಮತ್ತು ವೋಟ್ ಟ್ಯಾಂಪರಿಂಗ್ ಮಾಡಿದ ಎಸ್ಪಿ […]

Advertisement

Wordpress Social Share Plugin powered by Ultimatelysocial