ವೈಯಕ್ತಿಕ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆಯಲ್ಲ:ಜಗದೀಶ ಶೆಟ್ಟರ್;

ಹುಬ್ಬಳ್ಳಿ: ಪಕ್ಷದ ಶಾಸಕರು ಹಾಗೂ ಸಚಿವರು ವೈಯಕ್ತಿಕವಾಗಿ ನೀಡುವ ಹೇಳಿಕೆಗಳು ಪಕ್ಷ ವಿರೋಧಿ ಚಟುವಟಿಕೆಯಾಗುವುದಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಸಂಪುಟದಲ್ಲಿರುವ ಹಿರಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆ ಕುರಿತು, ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಹೇಳಿಕೆಗೆ ಮುಕ್ತ ಅವಕಾಶವಿದೆ.

ಸಂಪುಟದಲ್ಲಿರುವ ಹಿರಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆ ಕುರಿತು, ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಹೇಳಿಕೆಗೆ ಮುಕ್ತ ಅವಕಾಶವಿದೆ. ನನ್ನ ಹೇಳಿಕೆಯನ್ನು ಪಕ್ಷದ ಆಂತರಿಕ ಸಭೆಯಲ್ಲಿ ವ್ಯಕ್ತಪಡಿಸುತ್ತೇನೆ ಎಂದರು‌.

ಬಿ.ಎಸ್. ಯಡಿಯೂರಪ್ಪ ಅವರು ವಿದೇಶ ಪ್ರವಾಸ ಕೈಗೊಂಡಿದ್ದರಿಂದ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೇಗನೆ ದೆಹಲಿಗೆ ಹೊರಟರು. ಎಲ್ಲರೂ ಉಪಸ್ಥಿತರಿದ್ದಾಗ ಸಭೆ ನಡೆಸುವುದಾಗಿ ತೀರ್ಮಾನಿಸಿ, ಕಾರ್ಯಕಾರಿ ಸಮಿತಿ ಸಭೆಯನ್ನು ಮುಂದೂಡಲಾಯಿತು. ಆಗ, ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಯ ಸೋಲು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉತ್ತಮ ಸಾಧನೆ:

 ವಿಧಾನಪರಿಷತ್ ಚುನಾವಣೆಯಲ್ಲಿ ಹದಿನೈದು ಸ್ಥಾನಗಳ ಗುರಿ ಪೈಕಿ ಬಿಜೆಪಿ ಹನ್ನೊಂದರಲ್ಲಿ ಗೆದ್ದಿದೆ. ಹಿಂದೆ ಕೇವಲ ಆರು ಸ್ಥಾನಗಳಷ್ಟೇ ಇದ್ದವು. ಹಾಗಾಗಿ, ಈ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆಯನ್ನೇ ಮಾಡಿದೆ. ಹಾಗೆ ನೋಡಿದರೆ, ಕಾಂಗ್ರೆಸ್ 12 ಸ್ಥಾನಗಳ ಪೈಕಿ ಒಂದನ್ನು ಕಳೆದುಕೊಂಡಿದೆ ಎಂದರು.

ಈ ಚುನಾವಣೆಗಳು ಸ್ಥಳೀಯ ವಿಷಯಗಳನ್ನು ಆಧರಿಸಿ ಹಾಗೂ ವ್ಯಕ್ತಿಗತವಾಗಿಯೂ ನಡೆಯುತ್ತವೆ. ಹಾಗಾಗಿ, ಪಕ್ಷದ ಶಾಸಕರೇ ಹೆಚ್ಚಾಗಿದ್ದರೂ ಫಲಿತಾಂಶದಲ್ಲಿ ವ್ಯತ್ಯಾಸವಾಗುವುದುಂಟು. ಎಲ್ಲಾ ಪಕ್ಷಗಳಲ್ಲೂ ಹೀಗಾಗುವುದು ಸಾಮಾನ್ಯ ಎಂದು ಹೇಳಿದರು.

ನನಗೇನೂ ಗೊತ್ತಿಲ್ಲ:

 ಧಾರವಾಡ ಜಿಲ್ಲಾ ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಅರವಿಂದ ಬೆಲ್ಲದ ಅವರು ರಾಜೀನಾಮೆ ನೀಡುವುದಾಗಿ ಹೇಳಿರುವ ಕುರಿತು, ನನಗೇನೂ ಗೊತ್ತಿಲ್ಲ. ನನ್ನ ಅಸಮಾಧಾನದ ಕಾರಣಕ್ಕೆ ರಾಜೀನಾಮೆ ಕೊಡುತ್ತಾರೆಂಬುದು ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಗೆ ಸರಳ ಬಹುಮತ ; ಸಿ.ಟಿ.ರವಿ

Thu Dec 30 , 2021
ಚಿಕ್ಕಮಗಳೂರು: ನಗರಭೆ ಚುನಾವಣೆ 35 ವಾರ್ಡ್ ಗಳ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಬಿಜೆಪಿಗೆ ಬಹುಮತ ಪಡೆದುಕೊಂಡಿದೆ. ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಪಕ್ಷೇತರ ಅಭ್ಯರ್ಥಿ ಗಳು2 ಮತ್ತು ಎಸ್ ಡಿಪಿಐ 1 ಸ್ಥಾನದಲ್ಲಿ ಜಯಗಳಿಸಿದೆ.ನಗರಸಭೆಯಲ್ಲಿ ಎರಡು ಅವಧಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಮೂರನೇ ಅವಧಿಗೂ ಸರಳ ಬಹುಮತ ಪಡೆಯುವುದರೊಂದಿಗೆ ಮತ್ತೆ ಪ್ರಾಬಲ್ಯ ಮೆರೆದಿದೆ.ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ . ಒಳ ಹೊಡೆತ: ಬಿಜೆಪಿ […]

Advertisement

Wordpress Social Share Plugin powered by Ultimatelysocial