*ಈ ಬಾರಿಯ 5 ನೇ ವರ್ಷದ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ…

ಈ ಬಾರಿಯ 5 ನೇ ವರ್ಷದ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.ವಾಲ್ಮೀಕಿ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ
ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿದ ವಾಲ್ಮೀಕಿ ಸ್ವಾಮೀಜಿ ರವರನ್ನು ತಾಲ್ಲೂಕು ನಾಯಕ ಮಂಡಳಿ ವತಿಯಿಂದ ಪಟ್ಟಣದ ನಾಡಮೇಘಲಮ್ಮ ರವರ ದೇವಸ್ಥಾನ ದಿಂದ ಮೆರವಣಿಗೆ ಮೂಲಕ ತೆರಳಿ ಪಟ್ಟಣದ ಗೌತಮ್ ಬಡಾವಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ನಂತರ ವಾಲ್ಮೀಕಿ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು…..ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ನಂತರ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ರವರು ಮಾತನಾಡಿ
ಸಂವಿಧಾನ ಆಶಯದಂತೆ ಶೋಷಿತ ಸಮುದಾಯಗಳಿಗೆ ಅಧಿಕಾರ ದೊರೆತಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ,ರಾಜ್ಯದಲ್ಲಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿಯ ಹಕ್ಕು ಬೇಕಾಗಿದೆ….ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಾತಿಯ ಕಾರಣಕ್ಕಾಗಿ ಸಾಮಾಜಿಕ ನ್ಯಾಯ ಕೊಡಬೇಕಾಗಿ ಮೀಸಲಾತಿಯನ್ನು ನೀಡಿದ್ದಾರೆ,ಚುನಾವಣೆ ಸಂದರ್ಭದಲ್ಲಿ ಗಳಲ್ಲಿ ಮಾತ್ರ ನಿಮ್ಮ ಬಳಿ ರಾಜಕೀಯ ವ್ಯಕ್ತಿಗಳು ಬರುತ್ತಾರೆ ಆಗಾಗಿ ನಾವು ಜಾಗೃತಿಗಾಗಿ ಜಾತ್ರೆ ಯನ್ನು ನಡೆಸಲಾಗುವದು,ಮಹರ್ಷಿ ವಾಲ್ಮೀಕಿ ಜಾತ್ರೆಯು ಸಮಾಜದ ಅರಿವು,ಪ್ರಜ್ಞೆ ಯನ್ನು ಮೂಡಿಸುವ ಉದ್ದೇಶವಾಗಿದೆ,ಇತಿಹಾಸವನ್ನು ಅರಿಯದವ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತು ನಿಜವಾಗಿದೆ,ಈ ನಿಟ್ಟಿನಲ್ಲಿ ಸಮುದಾಯಗಳು ಒಂದಾಗಬೇಕು….ಯಳಂದೂರು ತಾಲ್ಲೂಕಿನ ಜನತೆ ನಮ್ಮ ಮೀಸಲಾತಿ ಹೋರಾಟಕ್ಕೆ ಸುದೀರ್ಘ ಬೆಂಬಲವನ್ನು ನೀಡಿದ್ದೀರಿ ನಿಮಗೆ ತುಂಬು ಹೃದಯದ ಅಭಿನಂದನೆಗಳು,ಮುಂದೆಯ ನಡೆಯುವ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಎಂದರು.ನಂತರ ತಾಲ್ಲೂಕಿಗೆ ಒಬ್ಬರನ್ನು ಮಠಕ್ಕೆ ದರ್ಮದಶಿ ಗಳನ್ನು ನೇಮಕ ಮಾಡಿ ಕೊಡಬೇಕು ಹಾಗೂ ದಿವಂಗತ ನಾಗರಾಜಪ್ಪ ರವರಿಗೆ ಜಾತ್ರೆಯಲ್ಲಿ ಮರಣೋತ್ತರ ಪ್ರಶಸ್ತಿ ಯನ್ನು ನೀಡಿ ಗೌರವಿಸಬೇಕೆಂದು ಮನವಿ ಮಾಡಿದರು….ಈ ಸಂದರ್ಭದಲ್ಲಿ ಯಳಂದೂರು ತಾಲ್ಲೂಕು ನಾಯಕ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರು, ಜನಪ್ರತಿನಿದಿನಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಎಸ್.ಸಿ.ಎಸ್.ಟಿ.ಗಳು ಒಂದಾಗಿ ನಿಮ್ಮ ಕೈ ನಲ್ಲಿ ಪೆನ್ನು ಹಿಡಿಯಿರಿ : ಪ್ರಸನ್ನನಂದಪುರಿ ಸ್ವಾಮೀಜಿ..

Thu Dec 8 , 2022
ಚಾಮರಾಜನಗರದಲ್ಲಿ ನಡೆದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿ ಹೇಳಿಕೆ…. ರಾಜ್ಯ ಸರ್ಕಾರಕ್ಕೆ 25 ಬೇಡಿಕೆಗಳನ್ನು ಇಟ್ಟಿದ್ದು ಅದರಲ್ಲಿ ಒಂದು ವಿಶೇಷಕ್ಕೆ ಈಡೇರಿದೆ,ಜಾತ್ರೆ ಮುಗಿದ ನಂತರ ಬಾಕಿ ಇರುವ ಬೇಡಿಕೆಗಳ ಬಗ್ಗೆ ಹೋರಾಟ ಮಾಡಲಾಗುವುದು…. ನಮ್ಮ ಜೊತೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ತತ್ವ ಆದರ್ಶ ಗಳಿವೆ,ನಾವು ಒಂದಾಗಿ ಮುಂದೆ ನಡೆದರೆ ನಮಗೆ ಜಯ ಸಿಕ್ಕೇ ಸಿಗುತ್ತದೆ ಎಂದರು…. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   […]

Advertisement

Wordpress Social Share Plugin powered by Ultimatelysocial