ವಾರಣಾಸಿ ನೋಡಲು ಯಾತ್ರೆ ಹೊರಟ ಧಾರವಾಡ ಜನ

ಧಾರವಾಡ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೂಗಳ ಪವಿತ್ರ ಮತ್ತು ಮೋಕ್ಷ ಸ್ಥಳವೆಂದು ಗುರುತಿಸುವ ವಾರಣಾಸಿ (ಕಾಶಿ)ಯನ್ನು ಇಡೀ ಜಗತ್ತೇ ಅಚ್ಚರಿ ಪಡುವಂತೆ ಸುಧಾರಣೆಗೊಳಿಸಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಸುಧಾರಣೆಗೊಳ್ಳುತ್ತಿದ್ದಂತೆಯೇ ಧಾರವಾಡದಿಂದ ಏಕಕಾಲಕ್ಕೆ ನೂರಾರು ಜನರು ಕಾಶಿಯಾತ್ರೆಗೆ ಸಜ್ಜಾಗಿದ್ದಾರೆ.

ಕಾಶಿ ವಿಶ್ವನಾಥ ದೇವಸ್ಥಾನ ಸುಧಾರಣೆಗೊಳ್ಳುತ್ತಿದ್ದಂತೆಯೇ ಧಾರವಾಡದಿಂದ ಏಕಕಾಲಕ್ಕೆ ನೂರಾರು ಜನರು ಕಾಶಿಯಾತ್ರೆಗೆ ಸಜ್ಜಾಗಿದ್ದಾರೆ. ಕಾಶಿಯಲ್ಲಿರುವ ಗಂಗಾ ನದಿಯ ಸ್ವಚ್ಛತೆ ಸೇರಿದಂತೆ ಕಾಶಿ ವಿಶ್ವನಾಥ ದೇವಸ್ಥಾನ ನವೀಕರಣ, ಆವರಣದ ಆಗಲೀಕರಣ, ವಾರಣಾಸಿ ರೈಲು ನಿಲ್ದಾಣ ಸೇರಿದಂತೆ ಇಡೀ ಕಾಶಿಯ ಚಿತ್ರಣವನ್ನೇ ಅಲ್ಲಿನ ಸಂಸದರೂ ಆಗಿರುವ ಪ್ರಧಾನಿ ಮೋದಿ ಬದಲು ಮಾಡಿದ್ದಾರೆ. ನವೀಕರಣಗೊಂಡ ಕಾಶಿಯನ್ನು ಕಣ್ಣಿನಿಂದ ಸವಿಯಲು ಧಾರವಾಡದಿಂದ ಮಹಿಳೆಯರು ಸೇರಿದಂತೆ 25 ಜನರ ಹತ್ತು ತಂಡಗಳಾಗಿ ಇನ್ನೂರಕ್ಕೂ ಹೆಚ್ಚು ಜನರು ಸಜ್ಜಾಗಿದ್ದಾರೆ.

 

ಹತ್ತು ತಂಡಗಳಾಗಿ ಇನ್ನೂರಕ್ಕೂ ಹೆಚ್ಚು ಜನ ಏಕಕಾಲಕ್ಕೆ ಕಾಶಿಯಾತ್ರೆ
ನವೀಕರಣಗೊಂಡ ಕಾಶಿ ವೈಭೋಗದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ಕಾಶಿಯಾತ್ರೆಯ ಸಮಿತಿಯೊಂದು ರಚನೆಯಾಯಿತು. ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಆರ್‌ಎಸ್ ಪಾಟೀಲ, ಶಿಕ್ಷಣ ತಜ್ಞ ವಿನಾಯಕ ಜೋಶಿ, ಬಸವರಾಜ ಗರಗ, ಅಶೋಕ ಜೋಶಿ, ರಾಜು ಪಾಟೀಲ ಕುಲಕರ್ಣಿ, ಶರಣು ಅಂಗಡಿ, ಪ್ರಮೋದ ಕಾರಕೂನ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಮುಖಂಡರು ಒಗ್ಗೂಡಿ ಸಮಿತಿ ಮಾಡಿಕೊಂಡಿದ್ದಾರೆ. ಒಂದೇ ವಾರದಲ್ಲಿ ಎರಡು ಸಭೆಗಳನ್ನ ಮಾಡಿ ಇನ್ನೂರು ಜನ ಈ ಯಾತ್ರೆಗೆ ಹೋಗಲು ಹೆಸರು ನೋಂದಣಿ ಸಹ ಮಾಡಿಸಿಕೊಂಡಿದ್ದಾರೆ. ಈ ಪೈಕಿ 50 ಜನ ಮಹಿಳೆಯರು ಹಾಗೂ ಉಳಿದವರು ಪುರುಷರಿದ್ದಾರೆ. 25 ಜನರಿಗೆ ಒಬ್ಬ ಮುಖಂಡನಾಗಿ ನೇಮಕ ಮಾಡಿದ್ದು, ಅಂತಹ 10 ತಂಡಗಳನ್ನಾಗಿ ರಚನೆ ಮಾಡಲಾಗಿದೆ.

 

ಪ್ರಯಾಣ, ವಸತಿ, ಊಟ ಹಾಗೂ ಇತರೆ ವ್ಯವಸ್ಥೆಗಳ ಬಗ್ಗೆ ವಿವಿಧೆಡೆಯಿಂದ ಮಾಹಿತಿ
ಈಗಾಗಲೇ ಸಮಿತಿ ಮುಖಂಡರು ಇಷ್ಟೊಂದು ಜನರ ಪ್ರಯಾಣ, ವಸತಿ, ಊಟ ಹಾಗೂ ಇತರೆ ವ್ಯವಸ್ಥೆಗಳ ಬಗ್ಗೆ ವಿವಿಧೆಡೆಯಿಂದ ಮಾಹಿತಿ ಪಡೆದು ಅಂತಿಮ ರೂಪು-ರೇಷೆ ಹಾಕುತ್ತಿದ್ದಾರೆ. ಕಾಶಿಯಲ್ಲಿ ವೀರಶೈವ ಸಮಾಜದ ಬಹುದೊಡ್ಡ ಕಾಶಿಪೀಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಧಾರವಾಡದಿಂದ ರೈಲು ಮೂಲಕ ಫೆಬ್ರವರಿ ತಿಂಗಳಲ್ಲಿ ಹೋಗಲು ತೀರ್ಮಾನ ಮಾಡಲಾಗಿದೆ. ಪ್ರಯಾಣಕ್ಕಾಗಿ ನಾಲ್ಕು ದಿನ ಹಾಗೂ ಕಾಶಿ, ತ್ರಿವೇಣಿ ಸಂಗಮ ಸೇರಿದಂತೆ ಸಮೀಪದ ಯಾತ್ರಾ ಸ್ಥಳಗಳನ್ನು ಉಳಿದ ಮೂರು ದಿನಗಳಲ್ಲಿ ನೋಡಿಕೊಂಡು ಬರುವುದು. ಹೀಗೆ ಒಟ್ಟು ಏಳು ದಿನಗಳ ಕಾಶಿಯಾತ್ರೆಯ ಯೋಜನೆಯಿದು. ಸುಮಾರು ಇನ್ನೂರಕ್ಕೂ ಹೆಚ್ಚು ನೂರು ಜನರು ಒಟ್ಟಿಗೆ ಬರುತ್ತಿರುವ ಸಂಗತಿಯನ್ನು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದೇವೆ ಅಂತ ವಿನಾಯಕ ಜೋಶಿ ಮಾಹಿತಿ ನೀಡಿದ್ದಾರೆ.

 

ಕಾಶಿ ಸುಧಾರಣೆಗೊಳ್ಳುತ್ತಿದ್ದಂತೆ ಮೋದಿ ಕಾರ್ಯಕ್ಕೆ ಪ್ರೇರಿತಗೊಂಡು ಈ ಯಾತ್ರೆ
ಕಾಶಿ ವಿಶ್ವನಾಥ ದೇವಾಲಯವು ಹಿಂದೂಗಳ ಪ್ರಮುಖ ಪೂಜಾ ಸ್ಥಳಗಳಲ್ಲಿ ಒಂದು. ವಿಶ್ವನಾಥ ದೇವಾಲಯದಲ್ಲಿ ಶಿವ, ವಿಶ್ವೇಶ್ವರ ಜ್ಯೋತಿರ್ಲಿಂಗವಿದೆ. ಇದು ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ವಿಶೇಷ ಮಹತ್ವ ಹೊಂದಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡುವುದು, ಗಂಗಾನದಿಯಲ್ಲಿ ಸ್ಥಾನ ಹಾಗೂ ಗಂಗಾ ಆರತಿ ವೀಕ್ಷಣೆ ನೋಡುವುದು ಜೀವನದಲ್ಲಿ ಮೋಕ್ಷ ಪಡೆದಂತೆ ಎಂಬ ನಂಬಿಕೆ. ಈಗ ಹೋಗುತ್ತಿರುವ ಜನರಲ್ಲಿ ಸಾಕಷ್ಟು ಮಂದಿ ಕಾಶಿಯಾತ್ರೆ ಮಾಡಿದ್ದಾರೆ. ಆದರೆ, ಇದೀಗ ಮೋದಿ ಕಾಶಿ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದರಿಂದ ನವೀಕರಣ ಕಾಶಿ ನೋಡುವ ಬಯಕೆ ಉಂಟಾಗಿದೆ. ಹಿಂದೂಗಳು ಪ್ರಪಂಚದ್ಯಾಂತ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ನೀಡಲು ಪ್ರಯತ್ನಿಸುತ್ತಾರೆ. ಅಂಥವರ ಆಶಯ ಸಹ ಈ ಯಾತ್ರೆ ಮೂಲಕ ಈಡೇರಲಿದೆ. ನಮ್ಮ ಪ್ರಯತ್ನಕ್ಕೆ ಬಹಳಷ್ಟು ಜನರು ಸ್ಪಂದಿಸಿದ್ದು, ಯಾತ್ರೆಗೆ ಹೊರಡಲು ತೀರ್ಮಾನಿಸಿದ್ದಾರೆ. ಒಬ್ಬರಿಗೆ ಕೇವಲ 5 ರಿಂದ 6 ಸಾವಿರ ರೂಪಾಯಿ ಖರ್ಚು ಬರುವ ಸಾಧ್ಯತೆ ಇದೆ. ರೈಲಿನ ಮೂರು ಬೋಗಿಗಳನ್ನು ಬುಕ್ ಮಾಡಲಾಗುತ್ತಿದೆ. ಸದ್ಯ ಎಲ್ಲೆಡೆ ಚಳಿ ಇರುವ ಕಾರಣ ಫೆಬ್ರವರಿ ತಿಂಗಳಲ್ಲಿ ಯಾತ್ರೆಗೆ ಹೊರಡಲಿದ್ದೇವೆ ಅಂತಾ ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಆರ್ ಎಸ್. ಪಾಟೀಲ ಟಿವಿ-9 ಜತೆಗೆ ಮಾಹಿತಿ ಹಂಚಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ತೂಕ ಇಳಿಯುತ್ತೆ

Sun Dec 26 , 2021
ಸಿಹಿ ತಿನಿಸು ಮಾಡುವಾಗ ಒಣದ್ರಾಕ್ಷಿಯನ್ನು ಬಳಸುವುದು ಹೆಚ್ಚು. ಈ ಡ್ರೈ ಫ್ರುಟ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬ ಒಳ್ಳೆಯದು. ಒಣದ್ರಾಕ್ಷಿ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಹೋಗಲಾಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಣದ್ರಾಕ್ಷಿಯ ನೀರನ್ನು ನೀವು ಪ್ರತಿನಿತ್ಯ ಕುಡಿಯುವುದರಿಂದ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತೆ. ಒಣದ್ರಾಕ್ಷಿಯ ನೀರನ್ನು ಹೀಗೆ ಮಾಡಿ : 2 ಕಪ್ ನೀರಿಗೆ 150 ಗ್ರಾಂ ಒಣದ್ರಾಕ್ಷಿಯನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಇದನ್ನು ಸ್ವಲ್ಪ ಬಿಸಿ […]

Advertisement

Wordpress Social Share Plugin powered by Ultimatelysocial