ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಚರಣೆ.

ಹತ್ತಿರದ ಹುಣಿಸ್ಯಾಳ (ಪಿ ಬಿ) ಆರ್ ಎಂ ಎಸ್ ಶಾಲೆಯಲ್ಲಿ ನಡೆದ ಕಾರ್ಯಕ್ರಮ

ಕಾರ್ಯಕ್ರಮ ಉದ್ದೇಶಿಸಿ ಬಸವನ ಬಾಗೇವಾಡಿ ಸಿಪಿಐ ಶರಣಗೌಡ ನ್ಯಾಮಣ್ಣನವರ ಮಾತನಾಡಿ

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಒಂದು ಬೈಕಿನಲ್ಲಿ ಕೇವಲ ಇಬ್ಬರು ಮಾತ್ರ ಓಡಾಡಬೇಕು, 18 ವರ್ಷದ ಒಳಗಡೆ ಇರುವ ಮಕ್ಕಳು ಯಾರು ಕೂಡ ಬೈಕ್ ನಡೆಸಬಾರದು ಬೈಕ್ ನಡೆಸುವವರು ಕಡ್ಡಾಯವಾಗಿ ಡಿಎಲ್ ಹೊಂದಿರಬೇಕು ಜೊತೆಗೆ ಒಂದಿಷ್ಟು ಫೇಕ್ ಕರೆಗಳು ತಮಗೆ ಬಂದಾಗ ಯಾವುದಕ್ಕೆ ಕಿವಿ ಕೊಡದೆ ಯಾರು ನಿಮಗೆ ಓಟಿಪಿ ಕೇಳುತ್ತಿರುತ್ತಾರೆ ಬ್ಯಾಂಕಿನವರು ಅಂತ ಹೇಳಿ ಅವರಿಗೆ ಯಾರು ಕೂಡ ಓಟಿಪಿ ಅನ್ನು ಶೇರ್ ಮಾಡಬಾರದು ಮನೆ ಕಳ್ಳತನ ಬೈಕ್ ಕಳ್ಳತನ ಹೀಗೆ ಹಲವಾರು ಅಪರಾಧ ತಡೆಗಳನ್ನು ತಡೆಯುವ ಸಲುವಾಗಿ ಇವತ್ತು ನಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಪಿಎಸ್ಐ ಸಿ ಬಿ ಹಿರೇಕುರುಬರ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಪರಶುರಾಮ್ ಅಡಗಿಮನಿ ಶಾಲಾ ಮುಖ್ಯೋಪಾಧ್ಯಾಯ ಸುಭಾಸ ಹರಿಜನ ಪೊಲೀಸ್ ಸಿಬ್ಬಂದಿಯವರಾದ ವಿಜಯಕುಮಾರ್ ದುದ್ದಿಗಿ, ರಮೇಶ್ ಕಳಸಗೊಂಡ, ವೆಂಕಪ್ಪ ದ್ಯಾವಣ್ಣನವರ್ ರಮೇಶ್ ನೈಟಿ, ಉಪಸ್ಥಿತರಿದ್ದರು

ವರದಿ-ಸಿದ್ದು ಜಮ್ಮಲದಿನ್ನಿ ವಿಜಯಪುರ/ಬಸವನ ಬಾಗೇವಾಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್‌ ಚುನಾವಣೆ

Wed Dec 21 , 2022
ಬೆಂಗಳೂರು: 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಚುನಾವಣೆ ವರ್ಷಕ್ಕೂ ಹಿಂದಿನ ವರ್ಷವಾದ 2022ರಲ್ಲಿ ಕರ್ನಾಟಕ ಬಹಳಷ್ಟು ಪ್ರಮುಖ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌, ಪ್ರಾದೇಶಿಕ ಪಕ್ಷ ಜೆಡಿಎಸ್‌ ಚುನಾವಣೆ ಹಿನ್ನೆಲೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದವು. ಎಲ್ಲ ಪಕ್ಷಗಳಲ್ಲೂ ವಿವಿಧ ನೇಮಕ, ಬದಲಾವಣೆ ಕೂಡ ಆಗಿವೆ. ಹಲವರು ಪಕ್ಷಾಂತರ ಮಾಡಿದ್ದು,‌ ತಮ್ಮ ಪಕ್ಷ ಬಿಟ್ಟು, ಬೇರೆ ಪಕ್ಷಕ್ಕೆ ಜಿಗಿದಿದ್ದಾರೆ. ಇನ್ನು, ಕಾಂಗ್ರೆಸ್‌ ಎರಡು ಹಂತದಲ್ಲಿ […]

Advertisement

Wordpress Social Share Plugin powered by Ultimatelysocial