ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾ ದೇಶವಿದೇಶಗಳಲ್ಲಿ ತೆರೆಗೆ ಬಂದಿದೆ.

 

ಸಕಲಕಲವಲ್ಲಭ ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾ ದೇಶವಿದೇಶಗಳಲ್ಲಿ ತೆರೆಗೆ ಬಂದಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ವಿಕ್ರಮ್ ಸಿನಿಮಾವನ್ನು ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ.

ಮೊದಲ ದಿನ ಮೊದಲ ಶೋ ವೀಕ್ಷಿಸಿದ ಅಭಿಮಾನಿಗಳು ಫುಷ್ ಖುಷ್ ಆಗಿದ್ದಾರೆ. ದೊಡ್ಡ ಪರದೆಮೇಲೆ ಅಬ್ಬರಿಸಿರುವ ಕಮಲ್ ಹಾಸನ್ ನೋಡಿ ಅಭಿಮಾನಿಗಳು ಸಂತಸ ವ್ಯಕತಪಡಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಶೋ ಪ್ರಾರಂಭವಾಗಿದ್ದು ಅಭಿಮಾನಿಗಳು ಸಿನಿಮಾ ನೋಡಿ ಕುಣಿದು ಕುಪ್ಪಳಿಸಿದ್ದಾರೆ.

ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾಟ ಫಹಾದ್ ಫಾಸಿಲ್, ವಿಜಯ್ ಸೇತುಪತಿ ನಟಿಸಿದ್ದಾರೆ. ಇನ್ನು ತಮಿಳಿನ ಮತ್ತೋರ್ವ ಖ್ಯಾತ ನಟ ಸೂರ್ಯಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ಅಭಿಮಾನಿಗಳು ಸಿನಿಮಾವನ್ನು ಅತ್ಯುತ್ತಮ ಆಕ್ಷನ್ ಸಿನಿಮಾ ಎಂದು ಕರೆಯುತ್ತಿದ್ದಾರೆ. ನಟ ಸೂರ್ಯ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಮೊದಲ ವಿಮರ್ಶೆ ತಿಳಿಸಿದ್ದಾರೆ. ಅಭಿಮಾನಿಗಳ ಮೊದಲ ಟ್ವಿಟ್ಟರ್ ವಿಮರ್ಶೆ ಹೀಗಿದೆ.ಅಭಿಮಾನಿಯೊಬ್ಬ ಟ್ವಿಟ್ಟರ್‌ನಲ್ಲಿ ಕಿಂಗ್ ಕಮರ್ಶಿಯಲ್ ಸಿನಿಮಾ ಮೂಲಕ ಮತ್ತೆ ವಾಪಾಸ್ ಆಗಿದ್ದಾರೆ. ಮೊದಲ ಭಾಗ ಅದ್ಭುತವಾಗಿದೆ. ಸ್ಕ್ರೀನ್‌ಪ್ಲೇ ಎಂಗೇಜಿಂಗ್ ಆಗಿದೆ. ಇತ್ತೀಚಿನ ದಿನಗಳಲ್ಲಿ ತಮಿಳಿನಲ್ಲಿ ಬಂದ ಅತ್ಯಂತ ಅಧ್ಬುತ ಸಿನಿಮಾವಾಗಿದೆ ಎಂದು ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, ವಿಕ್ರಮ್ ಸಿನಿಮಾ ನೋಡಿ ಆಯ್ತು. ಖಂಡಿತವಾಗಿಯೂ ಬ್ಲಾಕ್ ಬಸ್ಟರ್. ನಿರ್ದೇಶಕ ಲೋಕೇಶ್ ಕನಗರಾಜ್, ಸಂಗೀತ ನಿರ್ದೇಶಕ ಅನಿರುದ್ಧ್, ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹಾದ್ ಅದ್ಭುತವಾಗಿ ನಟಿಸಿದ್ದಾರೆ. ದೊಡ್ಡ ಪರದೆ ಮೇಲೆ ಈ ಸಿನಿಮಾದ ಆಕ್ಷನ್ ದೃಯ ಮತ್ತು ಸೂರ್ಯ ನಟನೆ ನೋಡದೆ ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂಟರ್ವ್ಯೂ ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ನಟಿ ಕೃತಿ ಶೆಟ್ಟಿ..?

Sat Jun 4 , 2022
  ಚಿತ್ರರಂಗದಲ್ಲಿ ನಾಯಕನಟ ಹಾಗೂ ನಟಿಯರು ಒಂದು ಚಿತ್ರ ಹಿಟ್ ಆದ ನಂತರ ಮುಂದಿನ ಚಿತ್ರಗಳಲ್ಲಿ ತಮ್ಮ ಸಂಭಾವನೆಯನ್ನು ಏರಿಸುತ್ತ ಹೋಗುತ್ತಾರೆ. ಹೌದು ಮೊದಲ ಸಿನಿಮಾದ ನಂತರ ಅವರು ತಮ್ಮ ಸಂಭಾವನೆಯನ್ನು ಸಿನಿಮಾದಿಂದ ಸಿನಿಮಾಕ್ಕೆ ಹೆಚ್ಚು ಮಾಡುತ್ತಾ ಹೋಗುತ್ತಾರೆ. ಇನ್ನು ಇಂತಹ ನಟಿಯರಲ್ಲಿ ಕರ್ನಾಟಕ ಮೂಲದ ಕೃತಿ ಶೆಟ್ಟಿ ಕೂಡ ಒಬ್ಬರಾಗಿದ್ದಾರೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ‘ಉಪ್ಪೇನ’ ಎಂಬ ಮೊದಲ ಸಿನಿಮಾ ಮಾಡಿರುವ ಕೃತಿ ಶೆಟ್ಟಿ ಅವರು ಇದೀಗ ಸಾಲು […]

Advertisement

Wordpress Social Share Plugin powered by Ultimatelysocial