ತೂಕ ಹೆಚ್ಚಿರುವುದು ಅನಾರೋಗ್ಯಕ್ಕೆ ಕಾರಣ!

 

ಲಾಕ್‌ಡೌನ್‌, ವರ್ಕ್‌ ಫ್ರಂ ಹೋಮ್ ಕಾರಣದಿಂದಾಗಿ ಅನೇಕರ ದೇಹದ ತೂಕ ಹೆಚ್ಚಾಗಿದೆ. ತೂಕ ಹೆಚ್ಚಿರುವುದು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂಬ ಭಯ ಕಾಡುತ್ತಿದೆ. ತೂಕ ಇಳಿಸಲು ಜಿಮ್‌, ವರ್ಕೌಟ್‌, ವಾಕಿಂಗ್‌ ಹೀಗೆ ಹಲವು ದೇಹದಂಡನೆಯ ಮಾರ್ಗ ಅನುಸರಿಸುತ್ತಿದ್ದಾರೆ.

ಕೆಲವರು ಆಹಾರ ಸೇವನೆಗೆ ಕಡಿವಾಣ ಹಾಕಿ, ತಜ್ಞರು ಸೂಚಿಸುವ ತಿನಿಸುಗಳನ್ನು ಸೇವಿಸುತ್ತಾ, ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆದರೆ ನಮ್ಮ ಅಡುಗೆಮನೆಯಲ್ಲಿರುವ ಕೆಲ ಆಹಾರ ಪದಾರ್ಥಗಳನ್ನು ನಿರಂತರವಾಗಿ ಸೇವಿಸುವುದರಿಂದ ತೂಕ ಇಳಿಸಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ಆರೋಗ್ಯ ಸಮಸ್ಯೆ ಕಾಡದಂತೆ ತೂಕ ಇಳಿಸಲು ನೆರವಾಗುವ ಪದಾರ್ಥಗಳು ಯಾವುವು? ಇಲ್ಲಿದೆ ಮಾಹಿತಿ…

ದಾಲ್ಚಿನ್ನಿ ‌

ದಾಲ್ಚಿನ್ನಿ ಸಾಮಾನ್ಯವಾಗಿ ಎಲ್ಲರ ಮನೆಯ ಅಡುಗೆಮನೆಯಲ್ಲೂ ಸಿಗುವ ಪದಾರ್ಥ. ದಾಲ್ಚಿನ್ನಿ ಅಡುಗೆಗೆ ಪರಿಮಳ ನೀಡುವುದು ಮಾತ್ರವಲ್ಲ, ತೂಕ ಇಳಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಇದರ ನಿಯಮಿತ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದ್ದರೆ ತೂಕವೂ ನಿಯಂತ್ರಣದಲ್ಲಿರುತ್ತದೆ. ಆ ಕಾರಣಕ್ಕೆ ನೀವು ಸೇವಿಸುವ ಆಹಾರದಲ್ಲಿ ದಾಲ್ಚಿನ್ನಿ ಪ್ರಮಾಣ ಹೆಚ್ಚಿರಲಿ

ಗ್ರೀನ್ ಟೀ

ಗ್ರೀನ್ ಟೀ – ಆಹಾರ ಪಥ್ಯ (ಫುಡ್‌ ಡಯೆಟ್)ಮಾಡುತ್ತಿರುವ ಯಾರ ಬಳಿ ಕೇಳಿದರೂ ‘ಪ್ರತಿ ನಿತ್ಯ ನಾನು ಗ್ರೀನ್‌ ಟೀ ಕುಡಿಯುತ್ತೇನೆ’ ಎನ್ನುತ್ತಾರೆ. ತೂಕ ಇಳಿಸುವ ಹಾದಿಯಲ್ಲಿ ಗ್ರೀನ್‌ ಟೀ ಇಲ್ಲದೆ ಹಾದಿ ಮುಂದಕ್ಕೆ ಸಾಗುವುದಿಲ್ಲ. ಇದರಲ್ಲಿ ಕೆಫಿನ್‌ ಅಂಶ ಬಹಳಷ್ಟು ಕಡಿಮೆ ಇದೆ. ಆ ಕಾರಣಕ್ಕೆ ಕೊಬ್ಬು ಕರಗಿಸಲು ಇದು ಸಹಕಾರಿ. ಇದರಲ್ಲಿ ಆಯಂಟಿಆಕ್ಸಿಡೆಂಟ್ ಅಂಶ ಅಧಿಕವಿದ್ದು ಚಯಾಪಚಯ ಕ್ರಿಯೆ ಹೆಚ್ಚಲು ಸಹಕಾರಿ.

ಕಾಮಕಸ್ತೂರಿ

ಕಾಮಕಸ್ತೂರಿ ಬೀಜ ಸೇವನೆಯು ತೂಕ ನಿಯಂತ್ರಣಕ್ಕೆ ಸಹಕಾರಿ. ಕಾಮಕಸ್ತೂರಿ ಬೀಜವನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಕೊಬ್ಬು ಕರಗುತ್ತದೆ. ಇದು ಬೇಸಿಗೆಯಲ್ಲಿ ದೇಹದ ಉಷ್ಣಾಂಶ ನಿಯಂತ್ರಣಕ್ಕೂ ಸಹಕಾರಿ. ಇದನ್ನು ಕುಡಿಯುವ ನೀರಿನಲ್ಲಿ ಹಾಕಿ ಆಗಾಗ ಆ ನೀರನ್ನು ಕುಡಿಯುತ್ತಿರಬೇಕು. ಇದರಿಂದ ತೂಕ ನಿಯಂತ್ರಣ ಸುಲಭವಾಗುತ್ತದೆ.

ದಾಲ್ಚಿನ್ನಿಯೊಂದಿಗೆ ಮೊಸರು

ಮೊಸರು ಸೇವನೆಯಿಂದ ದೇಹ ತೂಕ ಹೆಚ್ಚುತ್ತದೆ ಎನ್ನುವ ಮಾತಿದೆ. ಆದರೆ ದಾಲ್ಚಿನ್ನಿಯೊಂದಿಗೆ ಮೊಸರು ಸೇವಿಸುವುದರಿಂದ ದೇಹತೂಕವನ್ನು ನಿಯಂತ್ರಣ ಮಾಡಬಹುದು.

ಅಗಸೆ ಬೀಜ

ಅಗಸೆಬೀಜದ ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಬೀಜವನ್ನು ಹುರಿದು ಅಥವಾ ಹಸಿಯಾಗಿಯೂ ತಿನ್ನಬಹುದು. ಸಲಾಡ್‌ನೊಂದಿಗೆ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ಇದು ದೇಹದಲ್ಲಿನ ಬೇಡದ ಕೊಬ್ಬನ್ನು ತೆಗೆದುಹಾಕಿ ದೇಹ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೀನಿಕಾಯಿ ಬಹಳ ಪೋಷಕಾಂಶವಾದ ತರಕಾರಿ!

Sat Apr 23 , 2022
ಚೀನಿಕಾಯಿ ಬಹಳ ಪೋಷಕಾಂಶವಾದ ತರಕಾರಿಯಾದರೂ, ಹೆಚ್ಚಿನವರಿಗೆ ಅದು ಇಷ್ಟವಾಗುವುದಿಲ್ಲ. ಆದರೆ, ಬೇಸಿಗೆಯಲ್ಲಿ ಈ ಚೀನಿಕಾಯಿ ಸೇವಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಇದರಲ್ಲಿ ಫೈಬರ್, ನೀರು, ವಿಟಮಿನ್-ಎ, ವಿಟಮಿನ್-ಬಿ, ಕಬ್ಬಿಣ, ಮೆಗ್ನೀಸಿಯಮ್, ಆಂಟಿಆಕ್ಸಿಡೆಂಟ್ ಮುಂತಾದ ಅನೇಕ ಗುಣಗಳಿದ್ದು, ನಾನಾ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾದರೆ ಚೀನಿಕಾಯಿಯ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಯೋಣ. ಚೀನಿಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ: ತೂಕ ನಷ್ಟಕ್ಕೆ ಪರಿಣಾಮಕಾರಿ: ತೂಕ ನಷ್ಟಕ್ಕೆ ಚೀನಿಕಾಯಿ […]

Advertisement

Wordpress Social Share Plugin powered by Ultimatelysocial