ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್!..ಗ್ರೂಪ್‌ ಅಡ್ಮಿನ್‌ಗೆ ಸಿಗಲಿದೆ ಈ ಆಯ್ಕೆ!

ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್!..ಗ್ರೂಪ್‌ ಅಡ್ಮಿನ್‌ಗೆ ಸಿಗಲಿದೆ ಈ ಆಯ್ಕೆ!

ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ವಾಟ್ಸಾಪ್‌ ಮೆಸೆಜ್‌ ಅಪ್ಲಿಕೇಶನ್ ಹತ್ತು ಹಲವು ಉಪಯುಕ್ತ ಫೀಚರ್ಸ್‌ಗಳಿಂದ ಬಳಕೆದಾರರಿಗೆ ಆಪ್ತ ಎನಿಸಿದೆ. ವಾಟ್ಸಾಪ್‌ ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಧ್ವನಿ ಸಂದೇಶವನ್ನು ಕಳುಹಿಸುವ ಮೊದಲು ಪೂರ್ವವೀಕ್ಷಿಸಲು ಸಕ್ರಿಯಗೊಳಿಸುವ ಫೀಚರ್‌ ಅನ್ನು ಪರಿಚಯಿಸಿತು.

ಇದರ ಜೊತೆಗೆ, ಸಂದೇಶವು ಯಾವಾಗ ಕಣ್ಮರೆಯಾಗುತ್ತದೆ ಎಂಬುದರ ಕುರಿತು ಬಹು ಟೈಮ್‌ಲೈನ್‌ಗಳನ್ನು ಪರಿಚಯಿಸುವ ಮೂಲಕ ಕಣ್ಮರೆಯಾಗುವ ಸಂದೇಶಗಳ ಮೇಲೆ ಕಂಪನಿಯು ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡಿತು. ಇದೀಗ, ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ.

ಹೌದು, ವಾಟ್ಸಾಪ್ ಅಪ್ಲಿಕೇಶನ್ ಮೆಸೆಜ್ ಡಿಲೀಟ್ ಮಾಡಲು ಗುಂಪು ಮೆಸೆಜ್‌ ಅಡ್ಮಿನ್‌ಗೆ ಆಯ್ಕೆ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಬೀಟಾ ಆಪ್‌ನಲ್ಲಿ ನೂತನ ಅಪ್‌ಡೇಟ್‌ ಅನ್ನು ಬಿಡುಗಡೆ ಮಾಡಿದೆ ಎಂದು WABetaInfo ವರದಿ ಮಾಡಿದೆ. ಇನ್ನು ಈ ಹೊಸ ಆವೃತ್ತಿಯು ಗುಂಪಿನಲ್ಲಿರುವ ಎಲ್ಲಾ ಸದಸ್ಯರಿಗೆ ಸಂದೇಶಗಳನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಗುಂಪಿನ ನಿರ್ವಾಹಕರಿಗೆ(group admin) ನೀಡುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಕೊರಿಯಾದಲ್ಲಿ 10 ದಿನ ನಗುವಂತಿಲ್ಲ, ಹೊರ ಹೋಗುವಂತೆಯೂ ಇಲ್ಲ!

Fri Dec 17 , 2021
ಉತ್ತರಕೊರಿಯಾ: ಉತ್ತರ ಕೊರಿಯಾದ ಮಾಜಿ ಅಧ್ಯಕ್ಷ, ದಿವಂಗತ ಕಿಮ್ ಜಾಂಗ್ ಇಲ್ ನಿಧನವಾಗಿ ಇಂದಿಗೆ (ಡಿಸೆಂಬರ್ 17) ಹತ್ತು ವರ್ಷವಾಗಿದೆ. ದೇಶದಲ್ಲಿ 11 ದಿನಗಳ ಕಾಲ ಶೋಕಾಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇಶದ ನಾಗರಿಕರು ನಗುವುದನ್ನು, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಕಿಮ್ ಜಾಂಗ್ ಉನ್ ಫರ್ಮಾನು ಹೊರಡಿಸಿರುವುದಾಗಿ ವರದಿ ತಿಳಿಸಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿದ್ದ ಕಿಮ್ ಜಾಂಗ್ ಇಲ್ 2011ರ ಡಿಸೆಂಬರ್ 17ರಂದು ಸಾವನ್ನಪ್ಪಿದ್ದರು. ಕಿಮ್ ಜಾಂಗ್ ಅವರಿಗೆ […]

Advertisement

Wordpress Social Share Plugin powered by Ultimatelysocial