ಪುಣೆ: ಲಾಕ್ಡೌನ್ ನಡುವೆ ಪುಣೆ ಪೊಲೀಸರು ೧೫ ವರ್ಷದ ಹುಡುಗನ ಹುಟ್ಟುಹಬ್ಬ ಆಚರಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವತ್ಸಲ್ ಶರ್ಮಾ ಎನ್ನುವ ಬಾಲಕನ ತಂದೆ ಕೊರೊನಾ ಲಾಕ್ಡೌನ್ನಿಂದಾಗಿ ಅಮೆರಿಕಾದಲ್ಲಿದ್ದಾರೆ. ತಾಂತ್ರಿಕ ಸಮಸ್ಯೆ ಕಾರಣ ತಮ್ಮ ಮಗನನ್ನ ಸಂಪರ್ಕಿಸಲಾಗದೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಪುಣೆ ಪೊಲೀಸರಿಗೆ ಇ-ಮೇಲ್ ಮಾಡಿ, ಮಗನಿಗೆ ಶುಭಾಶಯ ತಿಳಿಸುವಂತೆ ಕೇಳಿಕೊಂಡಿದ್ದರು. ತಂದೆಯ ಕೋರಿಕೆಗೆ ಸ್ಪಂದಿಸಿದ ಪೊಲೀಸರು ಮೊಬೈಲ್ ನಂಬರ್ ಮೂಲಕ ಮನೆಯನ್ನ ಪತ್ತೆ ಹಚ್ಚಿ, ಭಾನುವಾರ ತಡರಾತ್ರಿ ಬರ್ತ್ಡೇ ಕೇಕ್ನೊಂದಿಗೆ ವತ್ಸಲ್ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇದಕ್ಕೆ ಧನ್ಯವಾದ ತಿಳಿಸಿರುವ ವತ್ಸಲ್ ಶರ್ಮಾ, ಪೊಲೀಸರು ಈ ವರ್ಷ ನನ್ನ ಹುಟ್ಟುಹಬ್ಬವನ್ನ ಮತ್ತಷ್ಟು ವಿಶೇಷವಾಗಿಸಿದ್ದಾರೆ ಅಂತ ಹೇಳಿದ್ದಾನೆ.
ಬಾಲಕನಿಗೆ ಬರ್ತ್ಡೇ ಸರ್ಪ್ರೈಸ್ ಕೊಟ್ಟ ಪೊಲೀಸರು
Please follow and like us: