ಹಣ್ಣುಗಳ ಸಾಗಾಣಿಕೆಗೆ ವಿಶೇಷ ರೈಲು

ದೆಹಲಿ: ಲಾಕ್‌ಡೌನ್ ಕಾರಣಕ್ಕಾಗಿ ಮಾವಿನ ಹಣ್ಣುಗಳನ್ನು ಸವಿಯುವ ಅವಕಾಶ ಕಳೆದುಕೊಳ್ಳಲಿದ್ದ ಉತ್ತರ ಭಾರತದ ಜನರಿಗೆ ರೈಲ್ವೆ ಸಚಿವಾಲಯ ಮಾವಿನ ಹಣ್ಣುಗಳನ್ನು ತಲುಪಿಸಲು ವಿಶೇಷ ಸರಕು ಸಾಗಾಣಿಕೆ ರೈಲುಗಳ ವ್ಯವಸ್ಥೆ ಮಾಡಿದೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮಹಾರಾಷ್ಟçದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳನ್ನು ಈ ರೈಲುಗಳ ಮೂಲಕ ತಲುಪಿಸಲಿದೆ.ಮಾವಿನ ಹಣ್ಣಿನ ಜೊತೆಗೆ ಕಿತ್ತಳೆ, ದ್ರಾಕ್ಷಿ, ಬಾಳೆಹಣ್ಣು ಹಾಗೂ ದಾಳಿಂಬೆ ಹಣ್ಣುಗಳನ್ನು ವಿಶೇಷ ರೈಲುಗಳ ಮೂಲಕ ದೆಹಲಿ ಹಾಗೂ ದೇಶದ ಇತರೆ ಮಾರುಕಟ್ಟೆಗಳಿಗೆ ತಲುಪಿಸಲಾಗಿದೆ.
ಲಾಕ್‌ಡೌನ್ ಕಾರಣಕ್ಕಾಗಿ ಪ್ರಯಾಣಿಕರ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಗತ್ಯ ಸರಕುಗಳನ್ನು ಸಾಗಿಸಲು ಸರಕು ಸಾಗಾಣಿಕೆ ರೈಲುಗಳು ಮಾತ್ರ ಸಂಚರಿಸುತ್ತಿವೆ. ಬಡವರಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ಅಕ್ಕಿ, ಗೋಧಿ ದ್ವಿದಳ ಧಾನ್ಯಗಳನ್ನು ವಿತರಿಸಲು ೫೫ ಅನ್ನಪೂರ್ಣಾ ರೈಲುಗಳು ಹಾಗೂ ಸುಮಾರು ೫೦೦ಕ್ಕೂ ಹೆಚ್ಚು ವಿಶೇಷ ರೈಲುಗಳು, ೮ ಜೈಕಿಸಾನ್ ರೈಲುಗಳು ಸಂಚರಿಸುತ್ತವೆ.

Please follow and like us:

Leave a Reply

Your email address will not be published. Required fields are marked *

Next Post

ಕಂಟೈನ್ಮೆಂಟ್ ಏರಿಯಾ ಹೊರತುಪಡಿಸಿ, ರಾಜ್ಯಾದ್ಯಂತ ಗಣಿಗಾರಿಕೆಗೆ ಅವಕಾಶ :ಸಿ.ಸಿ. ಪಾಟೀಲ್

Sun Apr 26 , 2020
ಗದಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಕಂಟೈನ್ಮೆಂಟ್ ಏರಿಯಾ ಹೊರತುಪಡಿಸಿ ರಾಜ್ಯಾದ್ಯಂತ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು,ಕೆಲವು ಇಲಾಖೆಯನ್ನು ಸಡಿಲಿಕೆ ಮಾಡಬೇಕೆಂದು ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಮರಳು ಗಣಿಗಾರಿಕೆಗೂ ಸಡಿಲಿಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ, ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. […]

Advertisement

Wordpress Social Share Plugin powered by Ultimatelysocial