ನೆಲಮಂಗಲದ ವಿವಿಧ ಪವಿತ್ರ ಕ್ಷೇತ್ರಗಳ ಮಣ್ಣು ಸಂಗ್ರಹಣೆ

ರಾಮ ಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನಮ್ಮ ಕೇಂದ್ರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ವ್ಯವಸ್ಥೆಗಳನ್ನು ಕೈಗೊಂಡು ಪೂಜೆ ನೆರವೇರಿಸಲು ಮುಂದಾಗಿದೆ. ಹೀಗಾಗಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಸಹಯೋಗದಲ್ಲಿ ವಿವಿಧ ಪವಿತ್ರ ಕ್ಷೇತ್ರಗಳ ಮಣ್ಣನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಮಣ್ಣನ್ನು ರಾಮ ಜನ್ಮ ಭೂಮಿ ಅಯೋಧ್ಯೆಗೆ ಕಳುಹಿಸಲು ನಗರದ ಆಂಜನೇಯ ದೇವಾಲಯದಲ್ಲಿ ಇಂದು ಬೆಳಿಗ್ಗೆ ಆಂಜನೇಯನಿಗೆ ಪೂಜೆ ನೆರವೇರಿಸಿಲಾಯಿತು. ನಂತರ ಸಂಗ್ರಹಿಸಿರೋ ಮಣ್ಣನ್ನು ಕೊರಿಯರ್ ಮೂಲಕ ಅಯೋಧ್ಯೆಗೆ ಕಳಿಸಲಾಗುವುದೆಂದು ಭಜರಂಗದಳದ ಜಿಲ್ಲಾ ಸಹಸಂಯೋಜಕ ಶಶಿಕಿರಣ್ ತಿಳಿಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನ ಚಾನೆಲ್‌ಗಳಲ್ಲಿ ಭಾರತದ ಧ್ವಜ

Mon Aug 3 , 2020
ಪಾಕಿಸ್ತಾನದ ಚಾನೆಲ್‌ಗಳನ್ನ ಹ್ಯಾಕ್ ಮಾಡಿರುವಂಥ ಹ್ಯಾಕರ್‌ಗಳು ಪಾಕಿಸ್ತಾನದ ಚಾನೆಲ್‌ಗಳ ಕಾರ್ಯಕ್ರಮಗಳ ಮಧ್ಯೆ ಭಾರತದ ತಿರಂಗ ಧ್ವಜ ಹಾರಾಡುವಂತೆ ಮಾಡಿದ್ದಾರೆ. ಇದರ ಜೊತೆಗೆ ಹ್ಯಾಪಿ ಇಂಡಿಪೆAಡೆನ್ಸ್ ಡೇ ಎಂದು ಅಡಿ ಬರಹವು ಸಹ ಅದರ ಜೊತೆಗಿತ್ತು. ಇದನ್ನ ಅನೇಕರು ಟ್ವೀಟರ್ ಮೂಲಕ ಹಂಚಿಕೊAಡಿದ್ದಾರೆ.ಡಾನ್ ಸಂಸ್ಥೆಗೆ ಸೇರಿದ ಚಾನೆಲ್‌ನಲ್ಲಿ ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ಸಂದೇಶ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತಿದೆ. ಕೆಲ ಕಾಲ ಸಂದೇಶ ಹಾಗು ಭಾರತದ ತ್ರಿವರ್ನ ಧ್ವಜ ಸ್ಕಿçÃನ್ ಮೇಲೆ […]

Advertisement

Wordpress Social Share Plugin powered by Ultimatelysocial