ಮೃದುವಾದ ರವೆ ಇಡ್ಲಿ ಮಾಡುವ ವಿಧಾನ

ರೆಸ್ಟೋರೆಂಟ್‍ನಲ್ಲಿ ಮಾಡುವ ಹಾಗೆ ನಾನೂ ಕೂಡ ಇಡ್ಲಿ ಮಾಡಬೇಕು.
ಯಾಕೋ ನಾನ್ ಮಾಡೋ ಇಡ್ಲಿ ಕೆಲವೊಮ್ಮೆ ಗಟ್ಟಿ ಆಗಿ ಬಿಡುತ್ತವೆ. ಮಲ್ಲಿಗೆ ಥರ ಬರೋದೇ ಇಲ್ಲ ಎನ್ನುವವರೇ ಹೆಚ್ಚು.
ನೀವು ಮಾಡೋ ಇಡ್ಲಿ ಮೃದುವಾಗಿ, ಉದುರುದುರಾಗಿ ಬರಬೇಕಾ? ಹಾಗಾದರೆ ನಾವು ಹೇಳುವಂತೆ ಒಮ್ಮೆ ಮಾಡಿ ನೋಡಿ.
ಬೇಕಾಗಿರುವ ಸಾಮಗ್ರಿಗಳು
* ರವೆ – 1 ಕಪ್
* ಮೊಸರು – 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ – 2 ಚಮಚ
* ಬೇಕಿಂಗ್ ಸೋಡಾ – ಸ್ವಲ್ಪ
ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ರವೆ, ಉಪ್ಪು, ಮೊಸರು ತೆಗೆದುಕೊಂಡು ರವೆಗೆ ಸೇರಿಸಿ ಅವೆರಡನ್ನು ಹದವಾಗಿ ಮಿಕ್ಸ್ ಮಾಡಿಕೊಳ್ಳಬೇಕು.
* ಇಡ್ಲಿ ಮಿಶ್ರಣಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನೀರನ್ನು ಸೇರಿಸಿಕೊಳ್ಳಬೇಕು.
* ನಂತರ ಇಡ್ಲಿ ಮಿಶ್ರಣದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪಾತ್ರೆಗೆ ಹಾಕಿ ಸ್ಟೀಮರ್ನಲ್ಲಿ ನೀರನ್ನು ಮೊದಲು ಸ್ವಲ್ಪ ಕುದಿಸಿ ಅದರಲ್ಲಿ ಇಡ್ಲಿಗಳನ್ನು ಸುಮಾರು 14-15 ನಿಮಿಷಗಳ ಕಾಲ ಬೇಯಲು ಬಿಡಿ.
* ನಂತರ ಇಡ್ಲಿ ಬೆಂದಿದ್ಯಾ ಎಂದು ನೋಡುತ್ತಿರಬೇಕು. ನಂತರ ಸ್ಟೀಮರ್ನಿಂದ ಹೊರತೆಗೆದು ಹಾಟ್ ಬಾಕ್ಸ್ನಲ್ಲಿ ಇಟ್ಟರೆ ರುಚಿಯಾದ ಇಡ್ಲಿ ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾವುದೇ ಭಂಗವಿಲ್ಲದೆ ಸುಖಕರ ನಿದ್ದೆ ಮಾಡಲು ಹೀಗೆ ಮಾಡಿ

Sat Jan 29 , 2022
ಸರಿಯಾಗಿ ನಿದ್ರೆ ಆಗದಿದ್ದರೆ ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಯಾವುದೇ ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಇರುವುದಿಲ್ಲ.ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ ಸಮಸ್ಯೆ ಕಾಡುತ್ತದೆ. ಆರೋಗ್ಯವಂತ ಮನುಷ್ಯನಿಗೆ ಸರಿಯಾಗಿ 8 ಗಂಟೆ ನಿದ್ದೆ ಅವಶ್ಯಕವಾಗಿರುತ್ತದೆ.ಹಾಗಾಗಿ ಸರಿಯಾಗಿ ನಿದ್ರೆ ಬರುವುದಕ್ಕೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ ಸಮಸ್ಯೆ ಕಾಡುತ್ತದೆ. ಆರೋಗ್ಯವಂತ ಮನುಷ್ಯನಿಗೆ ಸರಿಯಾಗಿ 8 […]

Advertisement

Wordpress Social Share Plugin powered by Ultimatelysocial