ಕ್ರೂಸ್ ಡ್ರಗ್ಸ್ ಸುಲಿಗೆ ಆರೋಪ ಸಮೀರ್ ವಾಂಖೆಡೆ ವಿರುದ್ಧ ವಿ.ಇ ಗೆ ಎನ್ ಸಿಬಿ ಆದೇಶ ಮುಂಬೈ ನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನ ಬಿಟ್ಟುಕಳಿಸುವುದಕ್ಕೆ 25 ಕೋಟಿ ಸುಲಿಗೆ ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎನ್ ಸಿ ಬಿ ಮುಂಬೈ ತನ್ನ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ವಿಜಿಲೆನ್ಸ್ ತನಿಖೆಗೆ ಆದೇಶ ನೀಡಿದೆ. ಇನ್ನು ನಾರ್ಕೊಟಿಕ್ಸ್ ನಿಯಂತ್ರಕ ಬ್ಯೂರೋ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ ಈ ಸುಲಿಗೆ ಆರೋಪ ಕೇಳಿಬಂದಿತ್ತು.ಎನ್ ಸಿಬಿಯ ಪ್ರಧಾನ ಉಪನಿರ್ದೇಶಕ, ಮುಖ್ಯ ವಿಜಿಲೆನ್ಸ್ ಅಧಿಕಾರಿ ಆಗಿರುವ ಗ್ಯಾನೇಶ್ವರ್ ಸಿಂಗ್ ತನಿಖೆ ನಡೆಸಲಿದ್ದಾರೆ.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada