ಆಲಿಯಾ ಭಟ್ ಮದುವೆಯಲ್ಲಿ ತೊಟ್ಟಿದ್ದ ಲೆಹೆಂಗಾ ಚಿನ್ನ, ಬೆಳ್ಳಿಯಿಂದ ಮಾಡಿದ್ದಂತೆ!

ಮುಂಬೈ: ಬಾಲಿವುಡ್ ಸ್ಟಾರ್ ಗಳಾದ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಮದುವೆಯಾಗಿ ನಾಲ್ಕು ದಿನಗಳು ಕಳೆದರೂ ಅವರ ಮದುವೆಯ ಸಂಭ್ರಮದ ಮಾತುಗಳು ಇನ್ನು ಹಸಿಹಸಿಯಾಗಿಯೇ ಇವೆ. ಮದುವೆಯ ಮೆಹಂದಿ ಶಾಸ್ತ್ರ, ನೃತ್ಯ, ಅವರ ಬಟ್ಟೆ, ಮದುವೆಯಾದ ಸ್ಥಳ, ಮದುವೆಯ ಫೋಟೋಗಳು ಹೀಗೆ ಒಂದಲ್ಲಾ ಒಂದು ವೈರಲ್ ಆಗುತ್ತಿವೆ.

ಸರಳ, ಸುಂದರವಾಗಿ ವಿವಾಹವಾದ ಸೆಲೆಬ್ರೆಟಿಗಳ ಬಟ್ಟೆ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ. ಆಲಿಯಾ ಮುಹೂರ್ತಕ್ಕೆ ಉಟ್ಟಿದ್ದ ಸೀರೆ, ಸೀರೆ ವಿನ್ಯಾಸ, ಕೈಗೆ ಹಾಕಿದ ಬಳೆಗಳು, ಸರಳ ಮೇಕಪ್ ಹೀಗೆ ಬಹಳ ಚರ್ಚೆಯಾಗುತ್ತಿದೆ. ಇದರ ಜೊತೆಗೆ ರಣವೀರ್ ಧರಿಸಿದ್ದ ಬಟ್ಟೆಯ ಬ್ರ್ಯಾಂಡ್, ಡಿಸೈನರ್..ಇದೀಗ ಆಲಿಯಾ ಮೆಹಂದಿ ವೇಳೆ ತೊಟ್ಟಿದ್ದ ಗಾಢ ಗುಲಾಬಿ ಬಣ್ಣದ ಲೆಹೆಂಗಾದ ಡಿಸೈನರ್ ಯಾರು, ಯಾವ ವಿನ್ಯಾಸ, ಹೊಲಿಯಲು ತೆಗೆದುಕೊಂಡ ಅವಧಿ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ ಇಲ್ಲಿದೆ ಆಲಿಯಾ ಲೆಹೆಂಗಾ ವಿವರ.

ಹೌದು ಆಲಿಯಾ ತೊಟ್ಟಿದ್ದ ಲೆಹೆಂಗಾ ವಿನ್ಯಾಸ ಮಾಡಿದ್ದು, ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ. ಇದನ್ನು ಹೊಲಿಯಲು ಬರೋಬ್ಬರಿ ೩೦೦೦ ಗಂಟೆಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ಇದು ಮಾಮೂಲಿಯ ಲೆಹೆಂಗಾ ಅಲ್ಲ. ಇದರಲ್ಲಿ ಚಿನ್ನ, ಬೆಳ್ಳಿಯಿಂದ ಮಾಡಿದ ಕುಸುರಿಯಿದೆ. ಇದರಲ್ಲಿ ೧೮೦ ಪ್ಯಾಚ್ ಗಳಿದ್ದು, ಶುದ್ಧ ಚಿನ್ನ ಬೆಳ್ಳಿಯ ಕುಸುರಿ ಲೆಹಂಗಾದ ಅಂದವನ್ನು ಹೆಚ್ಚಿಸಿದೆ. ಅಲ್ಲದೇ ಆಲಿಯಾ ಅಂದವನ್ನು ಇಮ್ಮಡಿಗೊಳಿಸಿದೆ. ಜೊತೆಗೆ ಬ್ಯಾಕ್ ಬ್ಲೌಸ್ ಲೆಹೆಂಗಾಕ್ಕೆ ಮತ್ತಷ್ಟು ಮೆರಗು ತಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ.

Tue Apr 19 , 2022
ಸುಂದರ ಹಾಗೂ ಸೆಕ್ಸಿ ಲುಕ್ ಗಾಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ. ಸ್ಲಿವ್ಲೆಸ್ ಟಾಪ್ ಹಾಗೂ ಸ್ಕರ್ಟ್ ಧರಿಸುವ ಮೊದಲು ವ್ಯಾಕ್ಸಿಂಗ್ ಮಾಡಿದ್ರೆ ಬೆಸ್ಟ್ ಎಂದು ಸೌಂದರ್ಯ ತಜ್ಞರು ಕೂಡ ಸಲಹೆ ನೀಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಂಡು ಬರ್ತಾರೆ. ಆದ್ರೆ ಗೊತ್ತಿಲ್ಲದೆ ವ್ಯಾಕ್ಸಿಂಗ್ ನಂತ್ರ ಸೌಂದರ್ಯ ವರ್ಧನೆಗೆ ಮಾಡುವ ಕೆಲಸ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವ್ಯಾಕ್ಸಿಂಗ್ ಮಾಡಿದ […]

Advertisement

Wordpress Social Share Plugin powered by Ultimatelysocial